Homeಕವನಎರಡು ಕವನಗಳು

ಎರಡು ಕವನಗಳು

Published on

ಭರಸೆಯ ಬದುಕು
____________________

ಹಲವು ನೋವಿನ ನಡುವೆ
ತಿಳಿ ನಗೆಯು ಮೂಡಿ
ಭರಸೆಯ ಬದುಕು
ನೆಲೆಗೊಂಡಿತು ನಲುಮೆಯಲಿ

ಹಗಲಿರುಳು ನಡೆದಿರುವೆ
ದೂರ ದಾರಿಯ ಪಯಣ
ಗಿಡ ಮರಗಳ ನೆರಳೆನಗೆ
ಉಸಿರು ಜೀವದ ಕಂಪು

ಪೊದರಿನ ಹಕ್ಕಿಗಳು
ಹಾಡುತಿವೆ ಸಂತಸದಿ
ಬರುವ ಚೈತ್ರಕೆ ಹಸಿರು
ಧ್ವನಿ ಮಧುರ ಇಂಪು.

ಮೋಡಗಳು ಮನ ಬಿಚ್ಚಿ
ಮಳೆ ನೀರು ಹೊಯ್ಯಲಿ
ನಗೆ ನೆಲದ ಕಾಡಿನಲಿ
ಪ್ರೀತಿ ರಾಗದ ಕಂಪು

ಮಣ್ಣು ಗೂಡಿನ ಬೀಜ
ಮುಗಿಲು ಮಾರಿಯ ನಂಜು
ಸಂಜೆ ಕನಸಿನ ಮೂಟೆ
ಹಸನ ಬಾಳಿನ ಸಂಪು
______________________

ಕರಗಿ ಬಿಡುತ್ತವೆ
__________________

ಹೇಳಲಾಗದ ಅದೆಷ್ಟೋ
ಮಧುರ ಭಾವಗಳು
ಹೀಗೆ ಒಮ್ಮೊಮ್ಮೆ
ಏನೂ ಹೇಳದೆ
ಮೌನದಲ್ಲೆ ಕರಗಿ ಬಿಡುತ್ತವೆ.

ಸ್ನೇಹ ಪ್ರೀತಿ ಪ್ರೇಮ ಪ್ರಣಯ
ಆಗಸದ ಚುಕ್ಕಿಗಳ ಲೆಕ್ಕ
ರಾತ್ರಿಯಿಡಿ ಗೋಡೆಯ
ಮೇಲಿನ ಚಿತ್ತಾರ ನೋಡುತ
ಕಳೆದ ಕ್ಷಣಗಳು.

ತುಟಿಯಂಚಿಗೆ ಬಂದ
ಮಾತು ಶಬ್ದಗಳು
ತೆರೆಯ ಮರೆಗೆ ಸರಿದು
ಎದೆಯ ನೆಲದಲ್ಲಿ
ಹಸಿರು ಕಾವ್ಯವಾಗುತ್ತವೆ

ಅವನ ಅವಳ ನಿರೀಕ್ಷೆ
ಅದು ಇಬ್ಬರಿಗೂ ಗೊತ್ತು
ವಿರಹ ನೋವು ಸುಖ
ಹೇಳುವುದು ಹೇಳಲಾಗದೆ
ಕಣ್ಣ ಸನ್ನೆ ನಗೆಗೆ ಜಾರುತ್ತೇವೆ.

ಏನೂ ಹೇಳದೆ ಹೀಗೆ
ಮೌನದಲ್ಲಿ ಕರಗಿ ಬಿಡುತ್ತವೆ
ಮಧುರ ಭಾವಗಳು.
_______________________

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

Latest articles

More like this