Homeಕವನಕವನ : ಮೆಡಿಕಲ್ ಕಾಲೇಜಿನ ಶವಗಳು

ಕವನ : ಮೆಡಿಕಲ್ ಕಾಲೇಜಿನ ಶವಗಳು

Published on

ಮೆಡಿಕಲ್ ಕಾಲೇಜಿನ ಶವಗಳು

ಮೆಡಿಕಲ್ ಕಾಲೇಜಿನ
ಶವಗಳಷ್ಟೇ ಪುಣ್ಯವಂತರು
ಸತ್ತ ಮೇಲೂ ಬದುಕುತ್ತಾರೆ
ಭಾವಿಸುತ್ತಾರೆ
ಯಾರದೋ ಗುರಿಗೆ
ದಾರಿಯಾಗುತ್ತಾರೆ
ಯಾವುದೋ ಯಶೋಗಾಥೆಗೆ ಮುನ್ನುಡಿಯಾಗುತ್ತಾರೆ
ಬರಿಯ ಶವವೆಂದಿಲ್ಲಿ
ಅನಾದರವಿಲ್ಲ
ಭಯವೂ ಇಲ್ಲ
ಉಸಿರಾಡುವ ನಮಗಿಂತ
ಶುದ್ಧವಿರುತ್ತಾರೆ
ಸಾವಿನ ಕರಾಳತೆ ಮರೆಸಿ
ಅರಳುತ್ತಾರೆ
ಸಾಗಿದ ಪಯಣ ಮರೆತು
ಲೋಹದ ಮೇಜಿನ ಮೇಲೆ
ಮಲಗಿದವರೆಲ್ಲ ಭೀಷ್ಮರು.
ವೈದ್ಯವಂಶದ ಪಿತಾಮಹ
ಪದವಿ ಪಡೆದವರು
ಜ್ಞಾನಭಂಡಾರದ ಕೀಲಿಕೈಯ್ಯಾದವರು
ಒಂದೊಮ್ಮೆ ನಕ್ಕು, ಅತ್ತು
ಸಾಗಿದ ಪಯಣಕೆ ಮುಕ್ತಾಯ ಹಾಡಿದವರು
ಇಂದಿಲ್ಲಿ ನಶ್ವರ ದೇಹದ
ಅಚ್ಚರಿಗಳ ತೆರೆದು
ಸ್ವಚ್ಛಂದವಾದರು
ಮಣ್ಣಲ್ಲಿ ಕೊಳೆತರೇನಿದೆ
ಮಹತ್ತು
ನಾಳೆಯ ಕನಸಿಗಾಗಿ ದೀವಿಗೆ
ಹೊತ್ತು
ಉಳಿಸಬೇಕು ಮೌನಸೇವೆ
ಗುರುತು
ಅದಕ್ಕೆ ಮೆಡಿಕಲ್ ಕಾಲೇಜಿಗೆ
ಶವವಾಗಬೇಕು

 ಡಾ.ಭವ್ಯ ಅಶೋಕ್ ಸಂಪಗಾರ್
ಅನಾಟಮಿ ವಿಭಾಗ
ಜೆ.ಎನ್. ವೈದ್ಯಕೀಯ ಸಂಸ್ಥೆ
ಕೆ.ಎಲ್.ಇ
ಬೆಳಗಾವಿ.
ಪೋನ್-7090775784.

Latest articles

More like this