Homeಕವನಕವನ : ನಾನು ಸೋಲುವವಳಲ್ಲ

ಕವನ : ನಾನು ಸೋಲುವವಳಲ್ಲ

Published on

ನಾನು ಸೋಲುವವಳಲ್ಲ

ನಾನು ಸೋಲುವವಳಲ್ಲ
ಅವರಿವರ ಟೀಕೆಯ ಮಾತುಗಳಿಗೆ,
ಬಾಗಿ ನಲಗುವವಳು ನಾನಲ್ಲ.
ಹಾದಿ ತಪ್ಪಿಸುವ ನೂರು ಸುಳ್ಳಿಗೆ,
ಬೆದರಿ ನಿಲ್ಲುವವಳು ನಾನಲ್ಲ.

ನನ್ನ ಕನಸಿನ ಹಾದಿ ನನಗೆ ಗೊತ್ತು,
ಸೋಲ ನುಂಗಿ ಗೆಲುವ ತರುವ ಹೊತ್ತು.
ಸುತ್ತಮುತ್ತಲ ಚುಚ್ಚು ಮಾತುಗಳೆಲ್ಲ,
ನನ್ನ ಗುರಿಯ ಮುಂದೆ
ನೆಲ ಕಚ್ಚುವವು ಟೀಕೆಗಳು

ಟೀಕೆಗಳೇ ನನಗೆ ಏಣಿ ಮೆಟ್ಟಿಲುಗಳು,
ಛಲವ ಕಲಿಸಿದ ಗುರುವಾಗಿಹ
ಪಾಠಗಳು.
ಯಾರು ಏನೇ ಅಂದರೂ ಸರಿ
ಗೆದ್ದು ತೋರಿಸುವೆ ನನ್ನದೇ ಶೈಲಿ

ನನ್ನ ನಗುವು ಅವರಿಗೆ ಉತ್ತರವಾಗಲಿ,
ನನ್ನ ಸಾಧನೆ ಜಗಕ್ಕೆ
ಮಾದರಿಯಾಗಲಿ.
ಅವರಿವರ ಟೀಕೆಗೆ ನಾನು
ಅಳುಕುವವಳಲ್ಲ,

ಛಲದ ಹಾದಿಯಲ್ಲಿ ನಾ ಸೋಲುವವಳಲ್ಲ!
ಟೀಕೆಗಳನ್ನು ಮಣ್ಣು ಮಾಡುವೆ
ಭರವಸೆಯ ಬೀಜವ ಬಿತ್ತಿ
ಸ್ನೇಹ ಪ್ರೀತಿ ಬೆಳೆ ಬೆಳೆವೆ
ಜಗ್ಗುವುದಿಲ್ಲ ಕುಗ್ಗುವುದಿಲ್ಲ

ಸುಧಾ ಪಾಟೀಲ
ಬೆಳಗಾವಿ

Latest articles

More like this