Homeಸುದ್ದಿಗಳುವಿಶ್ವ ಬಸವ ಜಯಂತಿ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ ಫಲಿತಾಂಶ

ವಿಶ್ವ ಬಸವ ಜಯಂತಿ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ ಫಲಿತಾಂಶ

Published on

ಡಾ.ಮೈತ್ರೇಯಿಣಿ ಪ್ರಥಮ, ಡಾ. ಅರುಣ ದ್ವಿತೀಯ, ಡಾ. ರೇಖಾ ತೃತೀಯ

ಬೆಳಗಾವಿ: ವಿಶ್ವ ಬಸವ ಜಯಂತಿ 2026ರ ನಿಮಿತ್ತ ಬೆಂಗಳೂರಿನ ಕೇಂದ್ರ ಬಸವ ಸಮಿತಿ ಏರ್ಪಡಿಸಿದ “ಬಸವಾದಿ ಶರಣರು ಕಟ್ಟಿದ ಮಾನವತಾ ಧರ್ಮ” ವಿಷಯ ಕುರಿತು ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಬೆಳಗಾವಿ ಅಜಮ್‌ನಗರದ ನಿವಾಸಿ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಡಾ. ಮೈತ್ರೇಯಿಣಿ ಗುರುನಗೌಡ ಗದಿಗೆಪ್ಪಗೌಡರ ಅವರು ಪ್ರಥಮ ಸ್ಥಾನ ಪಡೆದಿದ್ದಾರೆ.

ಬೆಳಗಾವಿ ರಾಮದೇವಗಲ್ಲಿಯ ನಿವಾಸಿ ಮತ್ತು ಪತ್ರಕರ್ತ, ಅಂಕಣಕಾರರಾದ ಡಾ. ಅರುಣ ಅಶೋಕ ಹೊಸಮಠ ದ್ವಿತೀಯ ಸ್ಥಾನ ಮತ್ತು ರಾಯಚೂರ ಜಿಲ್ಲೆಯ ಮಟಮಾರಿ ಗ್ರಾಮದ, ರಾಯಚೂರಿನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಡಾ. ರೇಖಾ ಪಾಟೀಲ ತೃತೀಯ ಸ್ಥಾನ ಕ್ರಮವಾಗಿ ಪಡೆದಿದ್ದಾರೆ.

ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್ ನಿವಾಸಿ ಡಾ. ಎನ್.ಎಂ. ಗಿರಿಜಾಪತಿ, ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸುಳಗೋಡು ಹಳ್ಳಿ ನಿವಾಸಿ ಡಾ. ವೈ. ಸುಶ್ಮಿತಾ ಅವರು ಸಮಾಧಾನಕರ ಬಹುಮಾನ ಪಡೆದಿದ್ದಾರೆ ಎಂದು ಬಸವ ಸಮಿತಿಯ ಅಧ್ಯಕ್ಷ ಡಾ. ಅರವಿಂದ ಜತ್ತಿ, ಹಿರಿಯ ಕಾರ್ಯಕಾರಿ ಸಮಿತಿಯ ಸದ್ಯಸ, ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಮಾಜಿ ಅಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ, ನಾಗನೂರು ರುದ್ರಾಕ್ಷಿಮಠದ ಪೀಠಾಧಿಕಾರಿ ಡಾ.ಅಲ್ಲಮಪ್ರಭು ಸ್ವಾಮೀಜಿ, ಕಾರಂಜಿಮಠದ ಗುರುಸಿದ್ಧ ಮಹಾಸ್ವಾಮೀಜಿ ಕೆಎಲ್‌ಇ ಸಂಸ್ಥೆಯ ಗೌರವಾಧ್ಯಕ್ಷರಾದ ಡಾ.ಪ್ರಭಾಕರ ಕೋರೆ, ಅಧ್ಯಕ್ಷರಾದ ಶಾಸಕ ಮಹಾಂತೇಶ ಶಿವಾನಂದ ಕೌಜಲಗಿ, ಕಿತ್ತೂರು ಮತಕ್ಷೇತ್ರದ ಶಾಸಕರಾದ ಬಾಬಾಸಾಹೇಬ ದೇವನಗೌಡ ಪಾಟೀಲ, ಅಖಿಲ ಭಾರತ ವೀರಶೈವ, ಲಿಂಗಾಯತ ಮಹಾಸಭೆಯ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀಮತಿ ರತ್ನಪ್ರಭಾ ವಿಶ್ವನಾಥ ಬೆಲ್ಲದ, ಜಾಗತಿಕ ಲಿಂಗಾಯತ ಮಹಾಸಭೆಯ ಜಿಲ್ಲಾಧ್ಯಕ್ಷರಾದ ಬಸವರಾಜ ರೊಟ್ಟಿ, ಲಿಂಗಾಯತ ಸಂಘಟನೆಯ ಅಧ್ಯಕ್ಷರಾದ ಈರಣ್ಣ ದೇಯಣ್ಣವರ, ಅಖಿಲ ಭಾರತೀಯ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಅಶೋಕ ಮಳಗಲಿ, ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ಶ್ರೀಮತಿ ಮಂಗಲಾ ಮೆಟಗುಡ್ಡ ಮುಂತಾದ ಗಣ್ಯರು ಅಭಿನಂದಿಸಿ, ಶುಭ ಕೋರಿದ್ದಾರೆ.

Latest articles

More like this