Homeಸುದ್ದಿಗಳುಕುಲಕರ್ಣಿಗೆ ನ್ಯಾಯ ಸಿಗುವ ಭರವಸೆ ಇದೆ - ಸಚಿವ ಖಂಡ್ರೆ

ಕುಲಕರ್ಣಿಗೆ ನ್ಯಾಯ ಸಿಗುವ ಭರವಸೆ ಇದೆ – ಸಚಿವ ಖಂಡ್ರೆ

Published on

ಬೀದರ – ಶಾಸಕ ವಿನಯ ಕುಲಕರ್ಣಿಯವರು ಹೈಕೋರ್ಟಿಗೆ ಹೋಗಲಿದ್ದಾರೆ ಅಲ್ಲಿ ಅವರಿಗೆ ನ್ಯಾಯ ಸಿಗುವ ಭರವಸೆ ಇದೆ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು

ಕೊಲೆ ಪ್ರಕರಣದಲ್ಲಿ ಶಾಸಕ ವಿನಯ ಕುಲಕರ್ಣಿ‌ಗೆ ಜೀವಾವಧಿ ಶಿಕ್ಷೆ ಆಗಿರುವ ವಿಚಾರ, ಬೀದರ್‌ನಲ್ಲಿ ಸಚಿವ ಈಶ್ವರ ಖಂಡ್ರೆ ಪ್ರತಿಕ್ರಿಯೆ ನೀಡಿದರು

ರಾಜಕೀಯ, ಶಿಕ್ಷಣ, ಸಾಮಾಜಿಕ ಕ್ಷೇತ್ರದಲ್ಲಿ ಕುಲಕರ್ಣಿಯವರ ಕೊಡುಗೆ ಅಪಾರ. ನಾನು ವಿನಯ ಕುಲಕರ್ಣಿ ಅವರನ್ನ ಬಹಳ ಹತ್ತಿರದಿಂದ ಬಲ್ಲವನಾಗಿದ್ದೇನೆ. ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನ ವಿನಯ ಕುಲಕರ್ಣಿ ಕುಟುಂಬ ನೀಡಿದೆ. ಇದು ಒಂದು ಷಡ್ಯಂತ್ರ ಅನ್ನೋದು ಅವರ ಕುಟುಂಬಸ್ಥರ ಅಭಿಪ್ರಾಯವಾಗಿದೆ. ಅವರು ನಿರಪರಾಧಿ ಆಗಿ ಹೊರಗೆ ಬರ್ತಾರೆ ಅನ್ನೊ ಭರವಸೆ ಇದೆ ಎಂದರು.

ವರದಿ : ನಂದಕುಮಾರ ಕರಂಜೆ, ಬೀದರ

Latest articles

More like this