Homeಸುದ್ದಿಗಳುತತ್ವ ಮತ್ತು ಸಿದ್ಧಾಂತದಿoದ ಬಸವತತ್ವ ಗಟ್ಟಿ: ಡಾ.ಗಂಗಾಶ್ರೀ

ತತ್ವ ಮತ್ತು ಸಿದ್ಧಾಂತದಿoದ ಬಸವತತ್ವ ಗಟ್ಟಿ: ಡಾ.ಗಂಗಾಶ್ರೀ

Published on

ಜಮಖoಡಿ: ಲಿಂಗತತ್ವ ಮತ್ತು ನಡೆ-ನುಡಿ ಸಿದ್ಧಾಂತದಿoದಾಗಿ ಬಸವತತ್ವ ಗಟ್ಟಿಯಾಗಿ ನಿಲ್ಲುತ್ತದೆ. ಸೌಹಾರ್ದ ಸಮಾಜ ಬೆಳೆಸಬೇಕೆಂದು ಬಸವಣ್ಣನವರು ಲಿಂಗತತ್ವ ಪ್ರತಿಪಾದಿಸಿದರು. ಭಾರತೀಯ ಸಂಸ್ಕೃತಿ ಸೌಹಾರ್ದ ಸಂಸ್ಕೃತಿಯಾಗಿದೆ ಎಂದು ಗೋಠೆ ಗ್ರಾಮದ ಶರಣೆ ಡಾ.ಗಂಗಾಶ್ರೀ ಪಾಟೀಲ ಹೇಳಿದರು.

ಬಸವ ಜಯಂತಿ ನಿಮಿತ್ತ ಒಲೆಮಠದ ಆಶ್ರಯದಲ್ಲಿ ಜರುಗುತ್ತಿರುವ ಆರು ದಿನಗಳ ಓಲೆಮಠದ ಜಾತ್ರಾಮಹೋತ್ಸವದ ಶುಕ್ರವಾರ ಸಂಜೆಯ ಕಾರ್ಯಕ್ರಮದಲ್ಲಿ ಅವರು ‘ವಚನಗಳಲ್ಲಿ ಸೌಹಾರ್ದತೆಯ ನೆಲೆಗಳು’ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಲಿಂಗದಿಂದಾಚೆಗೆ ಬಸವ ಧರ್ಮವಿದೆ. ಆತ್ಮವೇ ಲಿಂಗಸ್ವರೂಪ. ಲಿಂಗ ಅರಿವಿನ ಕುರುಹು. ಬುದ್ಧಿಯನ್ನು ಹತೋಟಿಯಲ್ಲಿಡಲು ಲಿಂಗಪೂಜೆ ಮಾಡಬೇಕು. ತಮ್ಮನ್ನೆ ತಾವು ಸವಾಲಿಗಿಟ್ಟು ನಡೆದಂತೆ ನುಡಿಯುವುದು ನಿಜವಾದ ತತ್ವ  ಎಂದರು.

ಓಲೆಮಠದ ಆನಂದ ದೇವರು ಶ್ರೀಗಳು ನೇತೃತ್ವ ವಹಿಸಿ ಮಾತನಾಡಿ, ಸೌಹಾರ್ದತೆ ಎಂದರೆ ಪ್ರೀತಿ, ವಿಶ್ವಾಸ, ನಂಬಿಕೆ, ಗೌರವ. ಬಸವಾದಿ ಶಿವಶರಣರು ಪ್ರೀತಿ, ವಿಶ್ವಾಸದಿಂದ ಬದುಕಲು ತಿಳಿಸಿದ್ದಾರೆ. ಆದ್ದರಿಂದ ದ್ವೇಷ ಬಿಟ್ಟು ಪ್ರೀತಿ ಮಾಡುವುದೆ ಸೌಹಾರ್ದತೆ ಎಂದು ಆಶೀರ್ವಚನ ನೀಡಿದರು.

ದೇವರು ಮತ್ತು ದೆವ್ವ ಹೊರಗಡೆಯಿಲ್ಲ, ಒಳಗಡೆಯಿವೆ. ಒಳ್ಳೆಯ ವಿಚಾರವೇ ದೇವರು. ಕೆಟ್ಟ ವಿಚಾರವೇ ದೆವ್ವ. ಆದ್ದರಿಂದ ಇನ್ನೊಬ್ಬರ ಮನಸ್ಸು ನೋಯಿಸದಂತೆ ಬದುಕಿದರೆ ದೇವರು ಒಲಿಯುತ್ತಾನೆ. ದೇವಮಾನವರಾಗಲು ಕೆಟ್ಟ ವಿಚಾರಗಳನ್ನು ಬಿಟ್ಟು ಒಳ್ಳೆಯ ವಿಚಾರಗಳನ್ನು ಮೈಗೂಡಿಸಕೊಳ್ಳಬೇಕು ಎಂದರು.

ಅರ್ಬನ್ ಬ್ಯಾಂಕ್ ಅಧ್ಯಕ್ಷ ರಾಹುಲ ಕಲೂತಿ ಮಾತನಾಡಿದರು. ಹಿರೇಪಡಸಲಗಿಯ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯರು, ಹುಲ್ಯಾಳ ಸಾರವಾಡ ಮಠದ ಕೃಷ್ಣಯ್ಯ ಸ್ವಾಮಿಗಳು, ಹುಲ್ಯಾಳದ ದುಂಡಯ್ಯಾ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.

ಪೌರಾಯುಕ್ತ ಜ್ಯೋತಿ ಗಿರೀಶ, ಎಂಜಿನಿಯರ್ ಎ.ಆರ್. ಶಿಂಧೆ, ರಮೇಶ ಅಣ್ಣಿಗೇರಿ, ಉಮೇಶ ಶಿದರಡ್ಡಿ, ಡಿ.ಡಿ. ಜೋಗದಂಡೆ, ಮಹೇಶ ಮಡಿವಾಳರ, ಹನಮಂತ ಮಗದುಮ, ದಶರಥ ವಗ್ಗೆನ್ನವರ, ಪತ್ರಕರ್ತ ಕೇದಾರೆಪ್ಪ ರಾವಳೋಜಿ, ಅನಿತಾ ಪಾಟೀಲ, ಪ್ರತೀಕ್ಷಾ ಜಿರಲಿ, ಜ್ಯೋತಿ ಕಟಗಿ, ಗಿರಿಜಾ ಮೇತ್ರಿ, ಶ್ವೇತಾ ಬಣ್ಣದ, ಲಕ್ಷ್ಮಿ ನಾಯಕ, ಅನು ನಾಯಕ, ಮುತ್ತವ್ವ ಪೂಜಾರಿ ಇತರರು ಇದ್ದರು.
ಜೈನ ಸಮಾಜ ಬಾಂಧವರಾದ ದಯಾನಂದ ಶಿರಗಾರ, ಆರ್.ಪಿ. ನ್ಯಾಮಗೌಡ, ಶೀತಲ ನ್ಯಾಮಗೌಡ, ಕಿರಣ ದೇಸಾಯಿ, ವಿನಯ ಸಿದ್ದಾರ, ಬಸವರಾಜ ಆಲಗೂರ ಮಹಾಪ್ರಸಾದದ ಸೇವೆ ಸಲ್ಲಿಸಿದರು. ಉಪನ್ಯಾಸಕಿ ಚಂದ್ರಕಲಾ ಜನಗೌಡ, ಬಸವ ಕೇಂದ್ರದ ಸದಸ್ಯ ಅಣ್ಣಾಸಾಹೇವ ಜಗದೇವ ನಿರೂಪಿಸಿದರು.

Latest articles

More like this