Homeಕವನಕವನ : ಗಾಳಿ

ಕವನ : ಗಾಳಿ

Published on

ಗಾಳಿ

ಗಾಳಿ ಸುಳಿದಾಡುತ್ತದೆ
ನಮ್ಮ ನಿಮ್ಮಯ ಸುತ್ತ
ಸುದ್ದಿ ಸುಂಟರ ಗಾಳಿ
ಸ್ನೇಹ ತಿಳಿಗಾಳಿ
ಪ್ರೀತಿ ಮಮತೆ ಕರುಣೆ
ನೆಮ್ಮದಿಯ ಗಾಳಿ
ಕೋಪ ತಾಪ ದ್ವೇಷಗಳ
ಸುಡು ಸುಡು ಬಿರುಗಾಳಿ
ಒಮ್ಮೊಮ್ಮೆ ಭಯಂಕರ
ಚಂಡ ಮಾರುತ ದಾಳಿ
ಭಯ ಭೂಮಿ ನೆಲ ಕಡಲು
ಉದುರಿ ಬೀಳುತ್ತವೆ ಎಲೆಗಳು
ಬೇರುಗಳ ಗಟ್ಟಿತನದ ಪರೀಕ್ಷೆ
ಸುನಾಮಿಗೆ ತತ್ತರಿಸುವುದು ಜಗವು.
ಮನೆ ಕಟ್ಟಡ ಹಾರಿ ಹೋಗುವವು
ಮರಗಳು ಉರುಳಿ ಬೀಳುವವು.
ಸಮುದ್ರ ತಟದ ಮೂಲೆಯಲಿ
ತೆರೆಯ ಅಲೆ ಹೊಡೆತ ತಿಂದರೂ
ಹುಲ್ಲು ನಸು ನಕ್ಕು ಹೇಳಿತು
ಬಾಗು ಬೀಗ ಬೇಡ ಎಂದು
________________________

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

Latest articles

More like this