Homeಸುದ್ದಿಗಳುಬಸವಾದಿ ಶರಣರ ಆಚಾರ ವಿಚಾರಗಳನ್ನು ಯುವಕರು ಜೀವನದಲ್ಲಿ ಅಳವಡಿಸಿ ಅಳವಡಿಸಿಕೊಳ್ಳಬೇಕು: ಅಮೀನಗಡ ಶ್ರೀಗಳು

ಬಸವಾದಿ ಶರಣರ ಆಚಾರ ವಿಚಾರಗಳನ್ನು ಯುವಕರು ಜೀವನದಲ್ಲಿ ಅಳವಡಿಸಿ ಅಳವಡಿಸಿಕೊಳ್ಳಬೇಕು: ಅಮೀನಗಡ ಶ್ರೀಗಳು

Published on

ಹುನಗುಂದ: ಸಮಾನತೆಯ ಸಮ ಸಮಾಜ ಕಟ್ಟಬೇಕೆಂಬ ಬಸವಾದಿ ಶರಣರ ತತ್ವಕ್ಕೆ ಮತ್ತೆ ಬಲತುಂಬಿ ಕೊಂಡಿರುವುದು ತುಂಬಾ ಆಶಾಕಿರಣ ಎಂದು ಅಮೀನಗಡ- ಎರಿಗೋನಾಳದ ಪ್ರಭುಶಂಕರೇಶ್ವರ ಮಠದ ಶಂಕರರಾಜೇಂದ್ರ ಸ್ವಾಮೀಜಿ ಹೇಳಿದರು.

ಅವರು ತಾಲೂಕಿನ ಚಿತ್ರವಾಡಗಿಯ ಶ್ರೀ ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ ಹಮ್ಮಿಕೊಂಡಿದ್ದ 428ನೇ ಮಾಸಿಕ ಶಿವಾನುಭವ ಸಮಾರಂಭದ ದಿವ್ಯಸಾನ್ನಿಧ್ಯ ವಹಿಸಿ ಮಾತನಾಡಿದರು.

ಅಂದು ನುಡಿದಂತೆ ನಡೆದ ಬಸವಾದಿ ಶರಣರ ಸುಸಂಸ್ಕೃತ ಆಚಾರ-ವಿಚಾರಗಳನ್ನು ಇಂದಿನ ಯುವಕ ಯುವತಿಯರಿಗೆ ಮನವರಿಕೆ ಮಾಡುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.

ಹುನಗುಂದ ತಾಲ್ಲೂಕು ಜಾನಪದ ಪರಿಷತ್ತಿನ ಅಧ್ಯಕ್ಷ ಡಾ. ನಾಗರಾಜ ನಾಡಗೌಡರ ಅತಿಥಿಯಾಗಿ ಮಾತನಾಡಿ ಡಾಂಬಿಕ ಭಕ್ತಿಯನ್ನು ತೊರೆದುಹಾಕಿ ಸರಳ ಸುಸಂಸ್ಕೃತ ಜೀವನದೊಂದಿಗೆ ಪರೋಪಕಾರಿಗಳಾಗಿ ಬದುಕಿದಾಗ ಮಾನವ ಜೀವನ ಸಾರ್ಥಕವಾಗಲಿದೆ ಎಂದರು.

ಕಸಾಪ ಅಧ್ಯಕ್ಷ ಎಸ್. ಎಸ್. ದಾನಿಮನಿ ಅತಿಥಿಯಾಗಿ ಮಾತನಾಡಿ – ಶರಣರ – ದಾಸೋಹ ತತ್ವ ಬೆಳೆಸಿಕೊಳ್ಳಲು ತಿಳಿಸಿದರು.

ಇದೇ ಸಂದರ್ಭದಲ್ಲಿ ಹುನಗುಂದದ ವಿಜಯಮಹಾಂತೇಶ ಸಹಕಾರಿ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ವಕೀಲ ಮಹಾಂತೇಶ ಅವಾರಿ , ಉಪಾಧ್ಯಕ್ಷರಾಗಿ ಆಯ್ಕೆಯಾದ ಶಕುಂತಲಾ ಬೆಲ್ಲದ ಅವರನ್ನು ಶ್ರೀ ವೀರ ಭದ್ರೇಶ್ವರ ಟ್ರಸ್ಟಿನ ಪರವಾಗಿ ಸನ್ಮಾನಿಸಲಾಯಿತು
ದೇವಸ್ಥಾನದ ಸಂಚಾಲಕರಾದ ಎಂ. ಎಸ್. ಮಠ ಅವರು ಸ್ವಾಗತಿಸಿ, ವಂದಿಸಿದರು. ಶಂಕರಗೌಡ ಪಾಟೀಲ ನಿರೂಪಿಸಿದರು. ಚಂದ್ರಶೇಖರ ಬಡಿಗೇರ, ಅಣ್ಣಪ್ಪ ಪಾಟೀಲ, ಭರಮಗೌಡ್ರ ಪಾಟೀಲ ಸಂಗೀತ ಸೇವೆ ಸಲ್ಲಿಸಿದರು.

Latest articles

More like this