Homeಕವನಕವನ : ಇದ್ದಾರೆ ಇಲ್ಲಿ

ಕವನ : ಇದ್ದಾರೆ ಇಲ್ಲಿ

Published on

ಇದ್ದಾರೆ ಇಲ್ಲಿ

ಇದ್ದಾರೆ ಇಲ್ಲಿ
ನಮ್ಮ ನಿಮ್ಮಯ ಮಧ್ಯೆ
ಮೇಲೆ ಹತ್ತಿ
ಏಣಿ ಒದೆಯುವವರು

ನಂಬಿಸಿ ವಿಶ್ವಾಸದಲಿ
ನಗು ನಗುತ್ತಲೇ
ಕೂದಲಿನ ಎಳೆಯಲ್ಲಿ
ಕುತ್ತಿಗೆ ಕೊಯ್ಯುವವರು.

ಮುಂದೆ ಹಾಡಿ ಹೊಗಳಿ
ಹಿಂದೆ ಟೀಕಿಸಿ
ಶಾಂತಿಯ ತೋಟದಲಿ
ದ್ವೇಷದ ಮುಳ್ಳು ಹಚ್ಚಿದವರು

ವೇದಿಕೆ ಸಭೆ ಸಮಾರಂಭ
ಶಾಲು ಹಾರ ಸಮ್ಮಾನ
ಮುಂದೆ ಆರತಿ ಎತ್ತಿ
ಬೆನ್ನಿಗೆ ಚೂರಿ ಹಾಕುವವರು.

ಬುದ್ಧ ಬಸವ ಬಾಬಾಸಾಹೇಬ
ಬಾಪೂಜಿ ಘೋಷಣೆ ಕೂಗಿ
ಸಮರಸದ ಹಾಲು ತುಪ್ಪದಲಿ
ಕಾಳಿಂಗ ಸರ್ಪದ ವಿಷ ಸೇರಿಸುವವರು

ಇದ್ದಾರೆ ನಮ್ಮ ನಿಮ್ಮ ಮಧ್ಯೆ
ಚಾವಡಿಯ ನಾಜೂಕಯ್ಯ
ಕದನ ಹೆಚ್ಚಿಸುವ ತಾಟಕಿ
ದೇಶ ಮಾರುವ ದುಷ್ಟ ದುರುಳರು
________________________

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

Latest articles

More like this