Homeಕವನಕವನ : ನವ ಭಾರತವ ಕಟ್ಟ ಬನ್ನಿ

ಕವನ : ನವ ಭಾರತವ ಕಟ್ಟ ಬನ್ನಿ

Published on

ನವ ಭಾರತವ ಕಟ್ಟ ಬನ್ನಿ

ಏಳಿ ಭಾರತೀಯರೇ,
ಒಟ್ಟಾಗಿ ಹೆಜ್ಜೆ ಇಡೋಣ,
ಭವ್ಯ ಭಾರತ ನಿರ್ಮಾಣಕ್ಕೆ
ಕಂಕಣ ಕಟ್ಟಿ ಬನ್ನಿ.
ಜಾತಿ, ಮತಗಳ ಭೇದವ
ಮರೆತು ಒಂದೇ ಎನ್ನಿ,

ದೇಶದ ಪ್ರಗತಿ ಹಾದಿಗೆ
ಶಕ್ತಿಯಾಗಿ ನಿಲ್ಲ ಬನ್ನಿ.
ಜ್ಞಾನದ ಹಣತೆಯ ಹಳ್ಳಿ
ಬದುಕ ಬೆಳಗ ಬನ್ನಿ
ಭವ್ಯ ವಿಜ್ಞಾನದ ಪಥದಲಿ
ಜಗವನ್ನೇ ಗೆಲ್ಲಬನ್ನಿ.

ದುಡಿಯುವ ಶ್ರಮಿಕ ಕೈಗಳಿಗೆ
ಗೌರವವ ನೀಡ ಬನ್ನಿ,
ಬಡತನದ ಕಣ್ಣೀರ ಒರೆಸಲು
ಬೇಗ ಮುಂದೆ ಬನ್ನಿ.
ಹಸಿರ ಹೊದಿಕೆಯ ಭೂಮಿಗೆ
ಉಡುಗೊರೆ ನೀಡ ಬನ್ನಿ,

ನದಿ-ಜಲಗಳ ಸ್ವಚ್ಛತೆಯಲಿ
ಜೀವ ತುಂಬ ಬನ್ನಿ.
ಭ್ರಷ್ಟಾಚಾರದ ಕತ್ತಲೆಯನು
ದೂರ ಓಡಿಸ ಬನ್ನಿ,
ಪ್ರಾಮಾಣಿಕತೆಯ ಬೆಳಕಲಿ
ದೇಶವ ಮುನ್ನಡೆಸ ಬನ್ನಿ.

ವೀರ ಯೋಧರ ತ್ಯಾಗವ
ನೆನೆಯುತ ಬದುಕ ಬನ್ನಿ,
ಶಾಂತಿ, ಸಮತೆಯ ಸಂದೇಶವ
ಸಾರುತ ಸಾಗೋಣ ಬನ್ನಿ.
ಸತ್ಯ ಸಮತೆ ಶಾಂತಿ ಪ್ರೀತಿ
ಬುದ್ಧ ಬಸವರ ಹೊತ್ತು ತನ್ನಿ
ನವ ಭಾರತವ ಕಟ್ಟ ಬನ್ನಿ
_________________________

ಅಕ್ಕ ಮಹಾದೇವಿ ತೆಗ್ಗಿ ಬೆಳಗಾವಿ

Latest articles

More like this