ಗಾಂಧಿ ಮತ್ತು ಬೆಳಗಾವಿ
ಕೆಂಪು ಕಪಿಗಳ ಕಷಿಮುಷ್ಠಿಯಲಿ ಬಂಧನದೊಳಗಿನ ಬಂಧಿಯಾಗಿಹ ಭಾರತಾಂಬೆಯ ಬಿಡಿಸಲು ಪಣತೊಟ್ಟು ಬಂದ ಗಾಂಧೀಜಿ ಬೆಳಗಾವಿ ನೆಲದಿಂದೇ ಬೆಳೆದಾತ
ಸತ್ಯ ಅಹಿಂಸೆಯ ಅಸ್ತ್ರವ ಹಿಡಿದು ಸತ್ಯಾಗ್ರಹದ ತತ್ವದಿ ದುಡಿದು ಅಸಹಕಾರ ಚಳವಳಿ ತಂತ್ರವ ಸಾರಿ ಸ್ವಾತಂತ್ರ್ಯದ ದಾರಿ ರೂಪಿಸಿದಾತ
ಬೆಳಗಾವಿ ಅಧಿವೇಶನದ ಮುಂದಾಳುವಾಗಿ ಹೋರಾಟಕ್ಕೆ ಸ್ಪಷ್ಟತೆ ನೀಡಿ ನಾಯಕತ್ವ ಹೆಗಲೇರಿಸಿಕೊಂಡು ಜಗ್ಗದೆ ಕುಗ್ಗದೆ ಹಿಗ್ಗಿನಿಂದ ನಡೆದಾತ
ಬಸವ ತತ್ವದ ಸಾರದ ತಿಳಿದು ಅಧ್ಯಕ್ಷತೆಯ ಹೊಣೆಯನು ಹೊತ್ತು ಸಂಘಟಣೆಯ ಕುಶಲತೆಯ ಮೆರೆಯುತ ಧೀಮಂತ ರಾಷ್ಟ್ರೀಯ ನಾಯಕನಾದಾತ
ಜನತೆಯ ನೀರಿನ ಬವಣೆ ನೀಗಲು ಉತ್ಸಾಹದಿಂದಲೇ ಬಾವಿ ತೋಡಿಸಿ ಬಂದವರೆಲ್ಲರ ಬಾಯಾರಿಕೆ ನೀಗಿ ಪಂಪಾ ಸರೋವರ ನಿರ್ಮಿಸಿದಾತ
ಗಡಿಯ ಗೋಜಲಿನ ಮರ್ಮವ ತಿಳಿದು ಭಾಷಾ ಭಾವೈಕ್ಯತೆಯ ಮೂಡಿಸಿ ಹೋರಾಟಗಾರರ ಬೆಂಬಲ ಗಳಿಸಿ ಒಗ್ಗಟ್ಟಿನ ಮಂತ್ರ ರೂಪಿಸಿದಾತ
ಶಾಂತಿ ಮಂತ್ರವ ಬಿಡದೆ ಭಜಿಸಿ ಜನತೆಯ ಮನದಿ ಕಿಚ್ಚನು ಹಚ್ಚಿ ತಿಲಕರ ನುಡಿಗೆ ಮಾನ್ಯತೆ ಕೊಟ್ಟು ಭಿನ್ನತೆಯಲಿ ಏಕತೆಯ ಮೂಡಿಸಿದಾತ
ನ್ಯಾಯದಿಂದ ಹೋರಾಡಿ ವಿರೋಧಿಗಳನೆಲ್ಲಾ ಬಗ್ಗು ಬಡಿದು ಸಂಕೋಲೆಗಳನ್ನು ಕಡಿದೊಗೆದು ಸ್ವಾತಂತ್ರ್ಯವನು ದೊರಕಿಸಿದಾತ
ವಾಸ್ತವ್ಯ ಸ್ಥಳದಿ-ಸೌಧವ ಕಟ್ಟಿ ಕಾಂಗ್ರೆಸ್ ಬಾವಿ ಪೆಸರಿಡುತ ವೀರಸೌಧವಿದೆಂದು ಕರೆಯುತ ಬೆಳಗಾವಿ ಚರಿತ್ರೆಯ ಚಿರಸ್ಮರಣೆಯಲ್ಲಿಟ್ಟಾತ.
ಎಂ.ವೈ. ಮೆಣಸಿನಕಾಯಿ
ಆಂಜನೇಯನಗರ, ಬೆಳಗಾವಿ
ಮೊ. 94492-09570