ಬೀದರ – ಮಹಾರಾಷ್ಟ್ರದಿಂದ ಬೀದರ್ ಜಿಲ್ಲೆಗೆ ಅಕ್ರಮವಾಗಿ ನಾಡ ಪಿಸ್ತೂಲ್ ಗಳನ್ನು ತಂದು ಮಾರಾಟ ಮಾಡುತ್ತಿದ್ದ ನಾಡ ಪಿಸ್ತೂಲ್ ದೊಡ್ಡ ಜಾಲದ ಮಾಫಿಯಾ ಬೀದರ್ ನಲ್ಲಿ ಹರಡಿದೆ… ಖಚಿತ ಮಾಹಿತಿ ಮೇರೆಗೆ ಬೀದರ್ ತಾಲೂಕಿನ ಮಾಮನಕೇರಿಯ ಬಳಿಯ ರಿಂಗ್ ರೋಡ್ ನಲ್ಲಿ ದಾಳಿ ಮಾಡಿ ಬೀದರ್ ಪೊಲೀಸರು ಭರ್ಜರಿ ಕಾರ್ಯಾಚರಣೆ ಮಾಡಿದ್ದಾರೆ.
ಅಕ್ರಮವಾಗಿ ನಾಡ ಪಿಸ್ತೂಲು ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದು ಮಹಾರಾಷ್ಟ್ರದ ನಾಂದೆಂಡ್ ನಿಂದ ಬೀದರ್ ಗೆ ತಂದು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಅಮನ್ ಜೀತ್ ಸಿಂಗ್ ಮತ್ತು ವೆಂಕಟೇಶ ಬಂಧನವಾದ ಆರೋಪಿಗಳಾಗಿದ್ದಾರೆ. ಅವರಿಂದ ಒಟ್ಟು ೫ ನಾಡ ಪಿಸ್ತೂಲ್ ಮತ್ತು ೨೬ ಜೀವಂತ ಗುಂಡುಗಳು ಅದರ ಜೊತೆಗೆ ೫ ತಲವಾರುಗಳು ಮತ್ತು ೧೦ ಎಮ್ ಟಿ ಕೇಸ್ ಗಳನ್ನು ಜಪ್ತಿ ಮಾಡಿದ್ದಾರೆ… ಒಟ್ಟು ೬ ಲಕ್ಷ ೭೩ ಸಾವಿರ ಮೌಲ್ಯದ ವಸ್ತುಗಳನ್ನು ಬೀದರ್ ಪೊಲೀಸರು ಜಪ್ತಿ ಮಾಡಿದ್ದು ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.
ಬೀದರ್ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಎಸ್ಪಿ ಪ್ರದೀಪ ಗುಂಟಿ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ಮಾಡಿದ್ದು ಪ್ರಕರಣ ದಾಖಲಿಸಿಕೊಂಡು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ… ಒಂದು ಜಿಲ್ಲೆಯಲ್ಲಿ ದೊಡ್ಡ ಕಂಟ್ರಿ ಪಿಸ್ತೂಲ್ ಜಾಲ ಸಕ್ರಿಯವಾಗಿದ್ದು ನಾವು ಯಾವುದೇ ಕಾರಣಕ್ಕೂ ಜಿಲ್ಲೆಯಲ್ಲಿ ನಾಡ ಪಿಸ್ತೂಲ್ ಜಾಲ ಹರಡಲು ಬಿಡುವುದಿಲ್ಲ ಎಂದ ಎಸ್ಪಿ ಪ್ರದೀಪ ಗುಂಟಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ವರದಿ : ನಂದಕುಮಾರ ಕರಂಜೆ, ಬೀದರ