Homeಸುದ್ದಿಗಳುಕನ್ನಡ ಜಾನಪದ ಪರಿಷತ್ ಪದಾಧಿಕಾರಿಗಳಾಗಿ ಸರಸ್ವತಿ, ಶಾಂತಾ, ಶೋಭಾ ಆಯ್ಕೆ

ಕನ್ನಡ ಜಾನಪದ ಪರಿಷತ್ ಪದಾಧಿಕಾರಿಗಳಾಗಿ ಸರಸ್ವತಿ, ಶಾಂತಾ, ಶೋಭಾ ಆಯ್ಕೆ

Published on

ಕನ್ನಡ ಜಾನಪದ ಪರಿಷತ್ ನಂದವಾಡಗಿ ಗ್ರಾಮ ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

ಇಳಕಲ್ಲ: ಕನ್ನಡ ಜಾನಪದ ಪರಿಷತ್ ಗ್ರಾಮ ಘಟಕ ತಾಲೂಕಿನ ನಂದವಾಡಗಿ ಗ್ರಾಮದ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಜಿಲ್ಲಾಧ್ಯಕ್ಷ ಡಿ.ಎಂ.ಸಾವಕಾರ ನೇಮಕ ಮಾಡಿದ್ದಾರೆ.

ಕನ್ನಡ ಜಾನಪದ ಪರಿಷತ್ ನಂದವಾಡಗಿ ಗ್ರಾಮ ಘಟಕದ ಅಧ್ಯಕ್ಷರಾಗಿ ಸರಸ್ವತಿ ಅರವಿಂದ ಈಟಿ, ಕಾರ್ಯದರ್ಶಿಯಾಗಿ ಶಾಂತಾ ಹಿರೇಗೌಡರ, ಖಜಾಂಚಿಯಾಗಿ ಶೋಭಾ ಗುರುಮಠ, ಜಂಟಿ ಕಾರ್ಯದರ್ಶಿಗಳಾಗಿ ಮಲ್ಲಪ್ಪ ಗುರಿಕಾರ, ಪತ್ರಿಕಾ ಕಾರ್ಯದರ್ಶಿಯಾಗಿ ಹನಮಪ್ಪ ಹೊರಗಿನಮನಿ, ಸಂಘಟನಾ ಕಾರ್ಯದರ್ಶಿಯಾಗಿ ಗಿರಿಜಾ ಮುದೇನೂರ, ಸಂಚಾಲಕರಾಗಿ ಲಕ್ಷಿö್ಮ ಮ್ಯಾಗೇರಿ, ಸದಸ್ಯರಾಗಿ ಹನಮಪ್ಪ ಈಟಿ, ದ್ಯಾಮವ್ವ ಕನಸಾವಿ, ಮಲ್ಲಮ್ಮ ಮೆದಕಿನಾಳ, ಯಲ್ಲವ್ವ ಹಾದಿಮನಿ, ಚಾಂದಬಿ ಮುಜಾವರ, ಶಾಂತವ್ವ ಕಟಗಿ ಇವರನ್ನು ನೇಮಕ ಮಾಡಿದ್ದಾರೆಂದು ಕನ್ನಡ ಜಾನಪದ ಪರಿಷತ್ ಇಳಕಲ್ ತಾಲೂಕು ಅದ್ಯಕ್ಷ ಚನ್ನಬಸಪ್ಪ ಲೆಕ್ಕಿಹಾಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕನ್ನಡ ಜಾನಪದ ಪರಿಷತ್ ನಂದವಾಡಗಿ ಗ್ರಾಮ ಘಟಕದ ನೂತನ ಅಧ್ಯಕ್ಷೆ ಸರಸ್ವತಿ ಈಟಿ ಹಾಗೂ ಪದಾಧಿಕಾರಿಗಳನ್ನು ಮಾತೋಶ್ರೀ ಗುರುದೇವಿ ಹಿರೇಮಠ, ಕೃಷಿಕ ಸಮಾಜದ ಅಧ್ಯಕ್ಷ ದೊಡ್ಡಬಸಪ್ಪ ದಂಡಿನ ಶೆಟ್ಟರ, ನೀಲಾಂಬಿಕಾ ಸೇವಾ ಬಳಗದ ಅಧ್ಯಕ್ಷೆ ಮಂಜುಳಾ ಗರಡಿಮನಿ. ಕಾಳಿದಾಸ ಸಂಘದ ಅಧ್ಯಕ್ಷ ಮುಕ್ತುಮಸಾಬ ಮುಜಾವರ, ಕನಕ ಯುವಸೇನೆ ಅಧ್ಯಕ್ಷ ಫಕಿರಪ್ಪ ಕಟಂಬ್ಲಿ ಹಾಗೂ ಸಾಹಿತಿ ಬಸವರಾಜ ಹೂಗಾರ ಅಭಿನಂದಿಸಿದ್ದಾರೆ.

Latest articles

More like this