ಬೀದರ.. ಗಡಿ ಜಿಲ್ಲೆ ಬೀದರ ನಲ್ಲಿ ಕಂಪ್ಯೂಟರ್ ಆಪರೇಟರ್ ಆಡಿದ್ದೇ ಆಟವಸಗಿದೆ ಯಾರೂ ಹೇಳುವವರಿಲ್ಲ ಕೇಳುವವರಿಲ್ಲ..ರಾಜ್ಯದ ಮುಖ್ಯಮಂತ್ರಿ ಬೀದರ ಭೇಟಿ ನೀಡಿದ ಸಂದರ್ಭದಲ್ಲಿ ದೊಡ್ಡ ದೊಡ್ಡ ಭಾಷಣ ಮಾಡಿದರು.. ನಾನು ರಾಜ್ಯದ ಮುಖ್ಯಮಂತ್ರಿ ಎಂದು ಕರೆ ಬೇಡಿ ಎಂದು ನಾನು ನಿಮ್ಮ ಸೇವಕ ಎಂದು ಕರೆಯಿರಿ ಎಂದು ಹೇಳಿ ಹೋದರು.ಆದರೆ ಬೀದರ ಜಿಲ್ಲೆಯ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ತವರೂರು ಕ್ಷೇತ್ರ ಭಾಲ್ಕಿ ಯಲ್ಲಿ ಹೆಣ್ಣು ಮಕ್ಕಳ ಪರಿಸ್ಥಿತಿ ನೋಡಿದರೆ ಅಯ್ಯೊ ಪಾಪ ಅನ್ನಿಸುತ್ತದೆ
ಬೆಳಿಗ್ಗೆ ಎದ್ದು ಕೆಲಸ ಮಾಡುವ ತನಕ ಬಡವರ ಹೊಟ್ಟೆ ತುಂಬುವುದು ಬಹಳ ಕಷ್ಟ ಬಡವರ ಪರ ಸರ್ಕಾರ ಬಡವರಿಗಾಗಿ ಇರುವ ನಮ್ಮ ಸರಕಾರ ಎಂದು ಹೇಳುತ್ತಾರೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಆದರೆ ಉಸ್ತುವಾರಿ ಸಚಿವರೇ ನಿಮ್ಮ ಕ್ಷೇತ್ರದಲ್ಲಿ ಏನು ನಡೆಯುತ್ತಿದೆ ಎಂದು ಸ್ವಲ್ಪ ಗಮನ ಹರಿಸಿ..
Cast Certificate ಗೋಸ್ಕರ ಬೆಳಿಗ್ಗೆ ಯಿಂದ ನೆಮ್ಮದಿ ಕೇಂದ್ರದ ಮುಂದೆ ಎಷ್ಟು ಬಡ ಹೆಣ್ಣು ಮಕ್ಕಳು, ಅಜ್ಜ ಅಜ್ಜಿ ಕುಳಿತಿದ್ದು, ಅಜ್ಜ ಅಜ್ಜಿಯರು ಊಟ ಮಾಡದೆ ಕಂಪ್ಯೂಟರ್ ಆಪರೇಟರ್ ಹಾದಿ ಕಾಯುತ್ತಿದ್ದಾರೆ. ಆದರೆ ಆಪರೇಟರ್ ಮಾತ್ರ ಗಾಯಬ್ ಆಗಿದ್ದಾರೆ. ಯಾರೂ ಹೇಳುವವರಿಲ್ಲ ಕೇಳುವವರಿಲ್ಲ. ಬಡವರ ಗೋಳು ಯಾರಿಗೆ ಹೇಳಬೇಕು ?
ರಾಜ್ಯ ಸರ್ಕಾರದ ಆದೇಶ ನೀಡಿದ್ದು ನಿಮ್ಮ Cast Certificate ಇದ್ದರೆ ಮಾತ್ರ ರೇಷನ್ ನೀಡಲಾಗುತ್ತದೆ. ಬಡವರಿಗೆ ಬರುವ ರೇಷನ್ ಅಕ್ಕಿ ಬಂದ್ ಆಗಬಾರದು ಎಂದು ಬೆಳಿಗ್ಗೆ ಎದ್ದು ಕೆಲಸಕ್ಕೆ ಹೋಗದೆ ನೆಮ್ಮದಿ ಕೇಂದ್ರಕ್ಕೆ ಮುಖ ಮಾಡಿದ ಬಡವರ ಹೆಣ್ಣು ಮಕ್ಕಳು. ಆದರೆ ನೀಟೂರ ಬಿ ಗ್ರಾಮದಲ್ಲಿ ಕಂಪ್ಯೂಟರ್ ಆಪರೇಟರ್ ಕೆಲಸಕ್ಕೆ ಬರದೇ ಹೋದ ಕಾರಣಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಈ ಕಂಪ್ಯೂಟರ್ ಆಪರೇಟರ್ ಹತ್ತು ವರ್ಷಗಳಿಂದ ಒಂದೇ ನೆಮ್ಮದಿ ಕೇಂದ್ರದಲ್ಲಿ ಠಿಕಾನಜ ಹೂಡಿದ್ದು ಬಡವರ ಕಷ್ಟ ಇವರಿಗೆ ಗೊತ್ತಾಗುವುದಿಲ್ಲ ಇವರಿಗೆ ಇನ್ನೊಂದು ಕಡೆ ವರ್ಗಾವಣೆ ಮಾಡಿದರೆ ಇವರಿಗೆ ಕಷ್ಟ ಏನು ಎಂಬುದನ್ನು ಗೊತ್ತಾಗುವುದೆಂದು ಸಾರ್ವಜನಿಕರ ಅಭಿಪ್ರಾಯ ಕಂಪ್ಯೂಟರ್ ಆಪರೇಟರ್ ಸರಿಯಾದ ಸಮಯಕ್ಕೆ ಕಚೇರಿಗೆ ಬರೋದೇ ಇಲ್ಲ ಬಂದರೂ ಪದೇ ಪದೇ ಸರ್ವರ್ ಸಮಸ್ಯೆ ಎಂದು ಹೇಳುತ್ತಾರೆ
ಸಂಬಂಧ ಪಟ್ಟ ಮೇಲೆ ಅಧಿಕಾರಿಗಳು ಈ ನೆಮ್ಮದಿ ಕೇಂದ್ರ ಭೇಟಿ ನೀಡಬೇಕೆಂದು ಸಾರ್ವಜನಿಕ ಅಭಿಪ್ರಾಯವಾಗಿದೆ.
ವರದಿ : ನಂದಕುಮಾರ ಕರಂಜೆ, ಬೀದರ