ಸಿಂದಗಿ: ನಗರದ ಸೌಂದರೀಕರಣಕ್ಕೆ ೩೪ ರಸ್ತೆಗಳ ಅಭಿವೃದ್ದಿಗೆ ಒಟ್ಟು ರೂ ೨೫ ಕೋಟಿ ಅನುದಾನ ತರಲಾಗಿದ್ದು ಈ ರಸ್ತೆ ೬ನೇ ಕಾಮಗಾರಿಗೆ ಭೂಮಿಪೂಜೆ ನೇರವೇರಿಸಲಾಗಿದೆ ಇನ್ನೂ ಹಂತ ಹಂತವಾಗಿ ಕಾಮಗಾರಿಗಳನ್ನು ಕೈಕೊಂಡು ನಗರವನ್ನು ಮಾದರಿ ನಗರವನ್ನಾಗಿ ಅಭಿವೃದ್ಧಿ ಪಡಿಸುವುದು ತಮ್ಮ ಧ್ಯೇಯವಾಗಿದ್ದು, ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುವುದು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ನಗರದ ಪಂಚತಂತ್ರ ಶಾಲೆ ಮುಂದುಗಡೆ ಮುಖ್ಯಮಂತ್ರಿಗಳ ಮೂಲಭೂತ ಸೌಕರ್ಯ ಅಭಿವೃದ್ಧಿ ಯೋಜನೆಯಡಿ ರೂ ೨೦ ಲಕ್ಷ ವೆಚ್ಚದಲ್ಲಿ ಸಿಸಿ ಚರಂಡಿ ಹಾಗೂ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ನಗರದಲ್ಲಿ ೫೬ ಸಾವಿರ ಜನಸಂಖ್ಯೆ ಹಾಗೂ ೧೨೬೦೦ ಮನೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ನಗರಸಭೆಗೆ ಸದ್ಯ ಇದ್ದ ೫೧ ಸಿಬ್ಬಂದಿಗಳಿಂದ ಸ್ವಚ್ಚತೆ ಕಾರ್ಯ ವಿಳಂ¨ವಾಗಿ ನಡೆಯುತ್ತಿದ್ದು ಇನ್ನೂ ೭೫ ಸಿಬಂದಿ ಭರ್ತಿಗೆ ಮಾಡಿಕೊಡುವಂತೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಇನ್ನೂ ಕೆಲವೇ ದಿನಗಳಲ್ಲಿ ಆ ಕಾರ್ಯ ಫಲಿಸಲಿದೆ ಅಲ್ಲಿಯವರೆಗೆ ಸಾರ್ವಜನಿಕರು ಸಹಕರಿಸಬೇಕು. ಈ ನಗರದಲ್ಲಿ ಒಟ್ಟು ೧೦೯ ಕಿಮೀ ಒಳರಸ್ತೆಗಳಿವೆ ಅವುಗಳು ಸಂಪೂರ್ಣ ಹಾಳಾದ ಬಗ್ಗೆ ನನ್ನ ಗಮನಕ್ಕಿದೆ ನನ್ನ ಅವಧಿ ೩ ವರ್ಷವಾಗಿದೆ ಅದರಲ್ಲಿ ಮುಂದಿನ ಎರಡು ವರ್ಷಗಳಲ್ಲಿ ಕ್ಷೇತ್ರದ ಅಭಿವೃದ್ಧಿಗೆ ವೇಗ ನೀಡಿ, ಪ್ರತಿಯೊಬ್ಬ ನಾಗರಿಕನಿಗೂ ಮೂಲಭೂತ ಸೌಕರ್ಯಗಳನ್ನು ತಲುಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತೇನೆ ಎಂದ ಅವರು, ಕಾಮಗಾರಿಯನ್ನು ಗುಣಮಟ್ಟದಿಂದ ಹಾಗೂ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಗುತ್ತಿಗೆದಾರರು ಮತ್ತು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಪಂಚತಂತ್ರ ಶಾಲೆ ಅಧ್ಯಕ್ಷ ಎನ್.ಜಿ.ಸಜ್ಜನ ಮಾತನಾಡಿ, ಕಳೇದ ವರ್ಷ ಶಾಸಕರಿಗೆ ಈ ವಾರ್ಡಿನ ಎಲ್ಲ ರಸ್ತೆಗಳ ಅಭಿವೃಧಿಗೆ ಮನವಿ ಮಾಡಿಕೊಳ್ಳಲಾಗಿತ್ತು ಅವರು ಹೇಳಿದಂತೆ ಪ್ರಥಮ ಹಂತದ ಕಾಮಗಾರಿಗೆ ಚಾಲನೆ ನೀಡಿದ್ದಾರೆ ಅಲ್ಲದೆ ಗ್ಯಾರೆಂಟಿಗಳ ಮಧ್ಯದಲ್ಲಿಯೂ ನಗರದ ಅಭಿವೃದಿಗೆ ಸಾಕಷ್ಟು ಅನುದಾನ ತಂದು ಮೂಲುಭೂತ ಸೌಕರ್ಯಗಳನ್ನು ಒದಗಿಸುವುದರ ಜೊತೆಗೆ ನುಡಿದಂತೆ ನಡೆದುಕೊಂಡಿದ್ದಾರೆ ಅವರು ಮುಂದಿನ ಹುದ್ದೆ ದಯಪಾಲಿಸಲಿ ಎಂದು ಶುಭ ಹಾರೈಸಿದರು..
ಈ ಕಾರ್ಯಕ್ರಮದಲ್ಲಿ ಎಂ.ಎ.ಖತೀಬ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಹಣಮಂತ ಸುಣಗಾರ, ಆಶ್ರಯ ಸಮಿತಿ ಸದಸ್ಯ ಭೀಮು ರೋಡಗಿ, ಅರವಿಂದ ಹಂಗರಗಿ, ಸಂದೀಪ ಚೌರ, ವಿಜಯಕುಮಾರ ಸಜ್ಜನ, ರಹಿಮ ಹುಂಡೆಕಾರ, ಮೋಸೀನ ಬೀಳಗಿ, ವರ್ಷಾ ಪಾಟೀಲ, ಜೆಇ ಎ.ಜೆ.ನಾಟೀಕಾರ ಸೇರಿದಂತೆ ಅನೇಕರಿದ್ದರು.