ಜಗದ್ಗುರು ಶ್ರೀಮನ್ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ, ಶ್ರೀ ವ್ಯಾಸರಾಜಮಠ (ಸೋಸಲೆ) ವತಿಯಿಂದ ಪರಮಪೂಜ್ಯ ಶ್ರೀ ವಿದ್ಯಾಶ್ರೀಶತೀರ್ಥ ಶ್ರೀಪಾದಂಗಳವರ ಪೀಠಾರೋಹಣದ ದಶಮಾನೋತ್ಸವ ಉದ್ಘಾಟನಾ ಸಮಾರಂಭವು ಜುಲೈ 23 ಮತ್ತು 24, 2026ರಂದು ಶ್ರೀ ವ್ಯಾಸರಾಜಮಠ, ಬಸವನಗುಡಿ, ಬೆಂಗಳೂರಲ್ಲಿ ವೈಭವದಿಂದ ನಡೆಯಲಿದೆ.
ಶ್ರೀವ್ಯಾಸರಾಜ ಮಠಾಧೀಶರಾದ ಪರಮಪೂಜ್ಯ ಶ್ರೀವಿದ್ಯಾಶ್ರೀಶತೀರ್ಥ ಶ್ರೀಪಾದoಗಳವರು ವಿದ್ಯಾಕರ್ಣಾಟಕ ಸಿoಹಾಸನವನ್ನೇರಿ ಹತ್ತುವಸ೦ತಗಳು ಸಲ್ಲುತ್ತಿವೆ. ಹತ್ತುವರ್ಷಗಳಲ್ಲಿ ನೂರು ವರ್ಷದ ಸಾಧನೆಯನ್ನು ಮಾಡಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಅಭಿವೃದ್ಧಿಗಳು ಶ್ರೀಪಾದರಲ್ಲಿ ಶ್ರೀವ್ಯಾಸರಾಜ ಗುರುಸಾರ್ವಭೌಮರ ದಿವ್ಯಸಾನ್ನಿಧ್ಯವನ್ನು ದೃಢೀಕರಿಸುತ್ತದೆ.
ಭವ್ಯವ್ಯಕ್ತಿತ್ವದ ಶ್ರೀಪಾದರನ್ನು ಅಭಿವಂದಿಸುವ ನಿಮಿತ್ತ ಶ್ರೀಪಾದರ ಪಟ್ಟಾಭಿಷೇಕದ ದಶಮಾನೋತ್ಸವವು ವರ್ಷಪೂರ್ತಿ ಅನೇಕ ಕಾರ್ಯಕ್ರಮಗಳನ್ನು ವಿವಿಧ ಊರುಗಳಲ್ಲಿ ಹಮ್ಮಿಕೊಳ್ಳಲಾಗುವುದು.
ಜುಲೈ 24ರಂದು ಸಂಜೆ ಶ್ರೀ ವ್ಯಾಸರಾಜ ಗುರುಸಾರ್ವಭೌಮರಿಗೆ ದರ್ಬಾರ್ ನಡೆಯಲಿದ್ದು, ಬಳಿಕ “ಪೀಠಾರೋಹಣ ದಶಮಾನೋತ್ಸವ ಉದ್ಘಾಟನೆ” ಸಭಾಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ಮಂತ್ರಾಲಯ ಶ್ರೀರಾಘವೇಂದ್ರ ಮಠದ ಶ್ರೀ ಸುಭುದೇಂದ್ರ ತೀರ್ಥರು , ಉತ್ತರಾದಿ ಮಠದ ಶ್ರೀ ಸತ್ಯಾತ್ಮತೀರ್ಥರು, ಮುಳಬಾಗಿಲು ಶ್ರೀಪಾದರಾಜ ಮಠದ ಶ್ರೀ ಸುಜಯನಿಧಿ ತೀರ್ಥರು ಸೇರಿ ದಂತೆ ವಿವಿಧ ಮಠಗಳ ಪೀಠಾಧಿಪತಿಗಳು ದಿವ್ಯಸಾನ್ನಿಧ್ಯ ವಹಿಸಲಿದ್ದು, ನ್ಯಾ .ವಿ.ಶ್ರೀಶಾನಂದ , ಶಾಶಕ ರವಿ ಸುಬ್ರಮಣ್ಯ, ಉದಯಗರುಡಾಚಾರ್ , ವಿದ್ವಾಂಸ ಡಾ .ಎ .ವಿ.ನಾಗಸಂಪಿಗೆ , ನಿವೃತ್ತ ಐಎಎಸ್ ಅಧಿಕಾರಿ ಶ್ರೀ ಕೆ. ಜೈರಾಜ ಸೇರಿದಂತೆ ಅನೇಕ ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಶ್ರೀಮಠದ ಪರಂಪರೆ, ಆಧ್ಯಾತ್ಮಿಕ ಮೌಲ್ಯಗಳು ಹಾಗೂ ಸಮಾಜಮುಖಿ ಸೇವೆಯನ್ನು ಪ್ರತಿಬಿಂಬಿಸುವ ಈ ಮಹೋತ್ಸವದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀಗಳ ಆಶೀರ್ವಾದ ಪಡೆಯುವಂತೆ ಶ್ರೀಮಠದ ಆಡಳಿತ ಮಂಡಳಿ ಮನವಿ ಮಾಡಿದೆ.