Homeಸುದ್ದಿಗಳುಚಿತ್ರಕಲಾ ಶಿಕ್ಷಕರ ಹುದ್ದೆ ಭರ್ತಿ ಮಾಡಲು ಚಿತ್ರಕಲಾ ಶಿಕ್ಷಕರ ಸಂಘದಿಂದ ಮನವಿ 

ಚಿತ್ರಕಲಾ ಶಿಕ್ಷಕರ ಹುದ್ದೆ ಭರ್ತಿ ಮಾಡಲು ಚಿತ್ರಕಲಾ ಶಿಕ್ಷಕರ ಸಂಘದಿಂದ ಮನವಿ 

Published on

 ಮೂಡಲಗಿ:-ತಾಲೂಕಿನ ಚಿತ್ರಕಲಾ ಶಿಕ್ಷಕರಿಂದ ಹೊಸದಾಗಿ 15,000 ಸಾವಿರ ಪ್ರೌಢಶಾಲಾ ಶಿಕ್ಷಕರ ಹುದ್ದೆಗಳಲ್ಲಿ  ಚಿತ್ರಕಲಾ ಶಿಕ್ಷಕರ  ಹುದ್ದೆಗಳನ್ನು  ಭರ್ತಿ ಮಾಡಿಕೊಳ್ಳಬೇಕು ಎಂದು ಮೂಡಲಗಿ ತಾಲೂಕಾ ಚಿತ್ರಕಲಾ ಶಿಕ್ಷಕರ ಸಂಘದಿಂದ ಬಿಇಓ ಪ್ರಕಾಶ ಹಿರೇಮಠ ಅವರಿಗೆ ಮನವಿ ಸಲ್ಲಿಸಲಾಯಿತು.
  ಎ ಎಂ ಜಿ ಡಿ, ವಿಶೇಷ ಡಿಪ್ಲೋಮಾ ಬಿ ವಿ ಎ, ಬಿ ಎಫ್ ಎ, ಎಂಎಫ್ಎ ಪದವೀಧರರಿಗೆ ಮಲತಾಯಿ ಧೋರಣೆ ತೋರುತ್ತಿರುವ  ಸರಕಾರಕ್ಕೆ ಮೂಡಲಗಿ ತಾಲೂಕಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷರು  ಎನ್. ಬಿ. ಕದಂ, ಉಪಾಧ್ಯಕ್ಷರು  ಸುಭಾಸ  ಕುರಣೆ, ಕಾರ್ಯದರ್ಶಿಗಳಾದ ಬಿ. ಐ. ಬಡಿಗೇರ ಮತ್ತು ಸಂಘದ ಎಲ್ಲ ಪದಾಧಿಕಾರಿಗಳು ಸರಕಾರಿ ಮತ್ತು ಅನುದಾನಿತ ಹಿರಿಯ ಪ್ರಾಥಮಿಕ , ಪ್ರೌಢಶಾಲೆ,  ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಮತ್ತು ಚಿತ್ರಕಲಾ ಶಿಕ್ಷಣ  ಶಿಕ್ಷಕರ  ಮಹಾವಿದ್ಯಾಲಯಗಳಲ್ಲಿ ಚಿತ್ರಕಲಾ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕು ಮತ್ತು ಎಲ್ಲ ವಸತಿ ಪ್ರೌಢ ಶಾಲೆಗಳಲ್ಲಿ ಚಿತ್ರಕಲಾ ಶಿಕ್ಷಕರ ವೇತನದಲ್ಲಿ ತಾರತಮ್ಯ ಮಾಡಿರುವುದು ಖಂಡನೀಯ ಎಂದು ಮನವಿಯಲ್ಲಿ ತಿಳಿಸಲಾಗಿದೆ.
 ಇದು  ಮಲತಾಯಿಯ ಧೋರಣೆ ಎಂದು ಮುಖ್ಯಮಂತ್ರಿಯವರಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ  ಹಾಗೂ ಸಂಬಂಧಪಟ್ಟ ಇಲಾಖೆಯವರಿಗೆ, ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ಬಿ. ಹಿರೇಮಠ  ಮೂಡಲಗಿ  ಇವರ ಮುಖಾಂತರ ಮನವಿ ಸಲ್ಲಿಸಲಾಯಿತು ಎಂದು ತಾಲೂಕಾ  ಚಿತ್ರಕಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಸುಭಾಸ ಕುರಣೆಯವರು ತಿಳಿಸಿದರು.

Latest articles

More like this