Homeಸುದ್ದಿಗಳುವಿದ್ಯಾರ್ಥಿಗಳಿಗಾಗಿ ಪ್ರಧಾನ್ ರಾಜೀನಾಮೆ - ಆಂದೋಲ ಶ್ರೀ

ವಿದ್ಯಾರ್ಥಿಗಳಿಗಾಗಿ ಪ್ರಧಾನ್ ರಾಜೀನಾಮೆ – ಆಂದೋಲ ಶ್ರೀ

Published on

ಬೀದರ – ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರ ರಾಜೀನಾಮೆ ಸ್ವಾಗತಾರ್ಹವಾದುದು. ವಿದ್ಯಾರ್ಥಿಗಳಿಗೆ ಅನ್ಯಾಯವಾಗಬಾರದು ಇದೇ ನೆಪದಲ್ಲಿ ದೇಶ ವಿರೋಧಿಗಳು ಹುಟ್ಟಿಕೊಳ್ಳಬಾರದು ಎಂಬ ಉದ್ದೇಶದಿಂದ ಅವರು ರಾಜೀನಾಮೆ ನೀಡಿದ್ದಾರೆ ಎಂದು ಆಂದೋಲ ಶ್ರೀಗಳು ಹೇಳಿದರು‌

ನಗರದಲ್ಲಿ ಪತ್ರಕರ್ತರೊಡನೆ ಮಾತನಾಡಿದ ಅವರು, ಕಾಕ್ರೋಚ್ ಜನತಾ ಪಾರ್ಟಿ ಹಾಗೂ ಕಾಂಗ್ರೆಸ್ ಪಾರ್ಟಿ ಎರಡೂ ಒಂದೇ ಆಗಿವೆ. ವಿದ್ಯಾರ್ಥಿಗಳ ವೇಷದಲ್ಲಿ ರೌಡಿಗಳು, ಗೂಂಡಾಗಳು ಹೋರಾಟದಲ್ಲಿ ಭಾಗಿಯಾಗಿ ದೇಶವಿರೋಧಿ ಘೋಷಣೆ ಕೂಗಿದ್ದಾರೆ. ದೇಶದ್ರೋಹಿಗಳಿಗೆ ಇದರ ಲಾಭ ಆಗಬಾರದು ಅಂತ ಪ್ರಧಾನ್ ರಾಜೀನಾಮೆ ನೀಡಿದ್ದಾರೆ ಎಂದು ಸಮರ್ಥಿಸಿಕೊಂಡರು.

ನೀಟ್ ಪ್ರಶ್ನೆಪತ್ರಿಕೆ ಲೀಕ್ ಆಗಿದೆ ಎನ್ನುವುದು ನೆಪ ಮಾತ್ರ ಆದರೆ ಜಾಗತಿಕ ಮಟ್ಟದಲ್ಲಿ ಮೋದಿಯವರ ಹೆಸರು ಕೆಡಿಸಲು ಇವರೆಲ್ಲ ಸಂಚು ಮಾಡಿದ್ದರು. ಪ್ರತಿಭಟನೆ ಯಲ್ಲಿ ರಾಮನಿಗೆ ಹಾಗೂ ದೇಶಕ್ಕೆ ಅವಮಾನ ಮಾಡಿದರು. ದೇಶವನ್ನು ತುಕಡೆ ಮಾಡುವ ಉಮರ್ ಖಾಲಿದ್ ನ ಫೋಟೋವನ್ನು ಹಿಡಿದಿದ್ದರು. ಇಂಥವರ ಮೇಲೆ ಪ್ರಿಯಾಂಕ ಖರ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ದೇಶವನ್ನು ನೇಪಾಳ, ಬಾಂಗ್ಲಾ ದೇಶ ಮಾಡುತ್ತೇವೆ ಎನ್ನುತ್ತಾರೆ ಆದರೆ ನಮ್ಮ ಪ್ರಧಾನಿ ಬಲಿಷ್ಠರಾಗಿದ್ದಾರೆ ಇಂಥವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಆಂದೋಲನ ಶ್ರೀಗಳು ಹೇಳಿದರು.

ವರದಿ : ನಂದಕುಮಾರ ಕರಂಜೆ, ಬೀದರ

Latest articles

More like this