Homeಸುದ್ದಿಗಳುಕಾಂಗ್ರೆಸ್ ಮೊದಲು ತನ್ನ ಭ್ರಷ್ಟಾಚಾರ ಗಮನಿಸಲಿ - ಆಂದೋಲ ಶ್ರೀ

ಕಾಂಗ್ರೆಸ್ ಮೊದಲು ತನ್ನ ಭ್ರಷ್ಟಾಚಾರ ಗಮನಿಸಲಿ – ಆಂದೋಲ ಶ್ರೀ

Published on

ಬೀದರ – ಬೇರೆಯವರ ಕಡೆಗೆ ಬೊಟ್ಟು ಮಾಡಿ ತೋರಿಸುವ ಗೃಹ ಸಚಿವ ಪ್ರಿಯಾಂಕ ಖರ್ಗೆ ತಮ್ಮ ಕ್ಷೇತ್ರದಲ್ಲಿಯೇ ನಡೆದ ಹಗರಣದ ಬಗ್ಗೆ ಮಾತನಾಡೋದಿಲ್ಲ. ಕೆಪಿಎಸ್ ಸಿ ಅಧ್ಯಕ್ಷ ನಕಲಿ ದಾಖಲೆ ಸೃಷ್ಟಿ ಮಾಡಿ ಖರ್ಗೆ ಮಗಳನ್ನ ನೇಮಕ ಮಾಡಿಕೊಂಡಿರುವ ಬಗ್ಗೆ ಪ್ರಿಯಾಂಕ ಖರ್ಗೆ ಮಾತನಾಡಬೇಕು. ಮನೆ ಕಾಯಲು ಆಗದವನು ದೇಶ ಕಾಯಲು ಹೊರಟಂತೆ ಆಯಿತು ಇವರ ಪರಿಸ್ಥಿತಿ ಎಂದು ಶಿವಸೇನಾ ರಾಜ್ಯಾಧ್ಯಕ್ಷ ಆಂದೋಲ ಶ್ರೀಗಳು ಹೇಳಿದರು.

ಪಶು ಇಲಾಖೆ ವೈದ್ಯರ ನೇಮಕದಲ್ಲಿ ಗೋಲ್ ಮಾಲ್ ನಡೆದಿದೆ, ಕೆಪಿಎಸ್ ಸಿ ಹಗರಣ ನಡೆದಿದೆ. ಇವರ ಮೇಲೆ FIR ಯಾಕೆ ಮಾಡಲಿಲ್ಲ, ತಮ್ಮ ವಿರುದ್ಧ ಮಾತನಾಡಿದವರನ್ನು ಜೈಲಿಗೆ ಹಾಕುತ್ತಾರೆ ಆದರೆ ಅಕ್ರಮ ಮಾಡಿದವರನ್ನು ಪೋಷಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಪತ್ರಕರ್ತರೊಡನೆ ಮಾತನಾಡಿದ ಅವರು, ಬಾಯಿ ತೆಗೆದರೆ ನಮ್ಮದು ಸಂವಿಧಾನ ಸರ್ಕಾರ ಅನ್ನುತ್ತಾರೆ ಸಾವರ್ಕರ ಸರ್ಕಾರ ಅಲ್ಲ ಅಂಬೇಡಕರ ಸರ್ಕಾರ ಅನ್ನುತ್ತಾರೆ ಆದರೆ ಇಲ್ಲಿ ಅಕ್ರಮ ನಡೆದರೆ ಬಾಯಿ ಬಿಡೋದಿಲ್ಲ. ಖರ್ಗೆ ಒಡೆತನದ ಸಿದ್ಧಾರ್ಥ ಲಾ ಕಾಲೇಜಿನಲ್ಲಿ ಅಕ್ರಮ ನಡೆದಿದೆ ಎಂದು ಆಂದೋಲ ಶ್ರೀ ಆರೋಪಿಸಿದರು.

ಇವರ ಹೋರಾಟ ಕೇವಲ ಮೋದಿ ವಿರುದ್ಧ ಹೊರತು ಅಕ್ರಮದ ವಿರುದ್ಧ ಅಲ್ಲ. ಕಾಂಗ್ರೆಸ್ ಪಕ್ಷ ಕಾಕ್ರೋಚ್ ಗಳ ಏಜೆಂಟನಂತೆ ಕೆಲಸ ಮಾಡುತ್ತಿದೆ ಎಂದು ಅವರು ನುಡಿದರು.

ವರದಿ : ನಂದಕುಮಾರ ಕರಂಜೆ, ಬೀದರ

Latest articles

More like this