Homeಸುದ್ದಿಗಳುಶವ ಸಂಸ್ಕಾರ ಕೇಂದ್ರವಾದ ತ್ಯಾಜ್ಯ ವಿಲೇವಾರಿ ಘಟಕ; ತುಕ್ಕು ಹಿಡಿದ ಸಂಸ್ಕರಣ ಮಶೀನು

ಶವ ಸಂಸ್ಕಾರ ಕೇಂದ್ರವಾದ ತ್ಯಾಜ್ಯ ವಿಲೇವಾರಿ ಘಟಕ; ತುಕ್ಕು ಹಿಡಿದ ಸಂಸ್ಕರಣ ಮಶೀನು

Published on

ತುಕ್ಕು ಹಿಡಿದ ಸಂಸ್ಕರಣ ಮಶೀನು.
ಶವ ಸಂಸ್ಕಾರ ಘಟಕವಾದ ತ್ಯಾಜ್ಯ ವಿಲೇವಾರಿ ಘಟಕ
ಇನ್ನೂ ಪ್ರಾರಂಗೊಳ್ಳದ ಸಂಸ್ಕರಣ ಘಟಕದ ಕಟ್ಟಡ
; ನಗರದ ಎಲ್ಲೆಂದರಲ್ಲಿ ಕಸದ ರಾಶಿಗಳು

ವಿಶೇಷ ವರದಿ : ಪಂಡಿತ್ ಯಂಪೂರೆ, ಸಿಂದಗಿ

ಸಿಂದಗಿ ನಗರದಲ್ಲಿ ಕೊಟ್ಯಂತರ ರೂಪಾಯಿ ಖರ್ಚು ಮಾಡಿ ೯ ಎಕರೆ ಜಮೀನಿನಲ್ಲಿ ನಿರ್ಮಿಸಿರುವ ಕಸ ವಿಲೇವಾರಿ ಘಟಕವು ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಘಟಕದಲ್ಲಿರುವ ತ್ಯಾಜ್ಯ ಸಂಸ್ಕರಣ ಮಸೀನುಗಳು ತುಕ್ಕು ಹಿಡಿದು ಶವ ಸಂಸ್ಕಾರ ಘಟಕವಾಗಿ ಮಾರ್ಪಟ್ಟು ಘನತ್ಯಾಜ್ಯ ವಿಲೇವಾರಿ ಘಟಕ ಕೇವಲ ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿದೆ.

ಹೌದು, ಸುಮಾರು ೫೬ ಸಾವಿರ ಜನಸಂಖ್ಯೆ ಹೊಂದಿದ್ದ ನಗರಸಭೆಯಲ್ಲಿ ಹಿಂದೆ ೨೩ ಜನ ಸದಸ್ಯ ಸ್ಥಾನ ಅವಧಿ ಮುಗಿದು ವರ್ಷಗಳೇ ಕಳೆದಿದು ವರ್ಷವೇ ಗತಿಸಿದೆ ಸದ್ಯ ನಗರಸಭೆಯಾಗಿ ಮೇಲ್ದರ್ಜೆಗೆ ಏರಿರುವದರಿಂದ ೩೧ರಿಂದ ೩೩ ಸದಸ್ಯರ ಸಂಖ್ಯೆ ಹೆಚ್ಚಳಕ್ಕೆ ಪರಿಷ್ಕರಣೆ ಆಗಬೇಕಿತ್ತು ಆದರೆ ಸರಕಾರದ ಹಂತದಲ್ಲಿ ವಿಳಂಬ ನೀತಿ ಅನುಸರಿಸಲಾಗುತ್ತಿದೆ. ಇದರಿಂದ ಇನ್ನೂ ಚುನಾವಣೆಯಾಗದೇ ಅಧಿಕಾರಿಗಳ ಸುಪರ್ದಿಯಲ್ಲಿ ನಗರಸಭೆ ಆಡಳಿತ ನಡೆದಿರುವುದರಿಂದ ಅಧಿಕಾರಗಳದ್ದೆ ಧರ್ಬಾರು ನಡೆಸಿದಂತಾಗಿದೆ ಅದಕ್ಕೆ ಹೇಳೋರು ಕೇಳೋರು ಇಲ್ಲದಂತಾಗಿ ಎಲೆಂದರಲ್ಲಿ ಕಸದ ಗೂಡಾಗಿ ಪರಿಣಮಿಸಿದೆ.

ಘಟಕದಲ್ಲಿ ಕಸ ಸಂಸ್ಕರಣೆ ನಡೆಯದೇ ನಗರದ ಎಲ್ಲೆಂದರಲ್ಲಿ ಕಸವನ್ನು ಎಸೆಯಲಾಗುತ್ತದೆ. ಇದರಿಂದಾಗಿ ತ್ಯಾಜ್ಯ ವಿಲೇವಾರಿ ವೈಜ್ಞಾನಿಕವಾಗಿ ನಡೆಯದೇ ಸುತ್ತಲಿನ ಹಲವೆಡೆ ರೋಗಭೀತಿ ಉಂಟಾಗಿದೆ. ಕಸ ವಿಲೆವಾರಿ ವೈಜ್ಞಾನಿಕವಾಗಿ ನಡೆಯದ ಕಾರಣ ಪರಿಸರದ ಮೇಲೆ ಭಾರೀ ಪ್ರಮಾಣದ ದುಷ್ಪರಿಣಾಮ ಬೀರುತ್ತಿದೆ. ನಗರದ ಸುತ್ತಲೂ ರಾಶಿಗಟ್ಟಲೇ ಕಸ ಹರಡಿಕೊಂಡಿದೆ. ವೈಜ್ಞಾನಿಕವಾಗಿ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ವಿಲೇವಾರಿ ಮಾಡುವುದರ ಮೂಲಕ ಕಸದಿಂದ ರಸ ತೆಗೆದು ಲಾಭಮಾಡಿಕೊಳ್ಳುವ ಯೋಜನೆಯಿಂದ ನಗರಸಭೆಗೆ ನೂರಾರು ಕೋಟಿ ಲಾಭವಾಗಬೇಕಾದ ಘನ ತ್ಯಾಜ್ಯ ಸಂಸ್ಕರಣ ಘಟಕ ಇಲ್ಲಿ ಸಂಪೂರ್ಣ ಹಳ್ಳ ಹಿಡಿದಿದೆ.

ನಗರದಲ್ಲಿ ಸಂಗ್ರಹಿಸಲಾಗುವ ಕಸವನ್ನು ತೆಗೆದುಕೊಂಡು ಹೋಗಿ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಹಾಕಬೇಕು ಆದರೆ ಮಲಘಾಣ ರಸ್ತೆಯ ಬದಿಯಲ್ಲಿ ಸುರಿಯುತ್ತಿರುವುದರಿಂದ ಸೊಳ್ಳೆ ಉತ್ಪತ್ತಿ ತಾಣವಾಗಿದೆ. ತ್ಯಾಜ್ಯದಿಂದ ದುರ್ವಾಸನೆ ಆವರಿಸಿ ಸ್ಥಳೀಯರ ನೆಮ್ಮದಿ ಹಾಳು ಮಾಡುತ್ತಿದೆ. ಸಂಗ್ರಹವಾಗುವ ಕಸವನ್ನು ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ವಿಲೇವಾರಿ ಮಾಡುತ್ತಿಲ್ಲ ಎನ್ನುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ರಾಜ್ಯದ ಎಲ್ಲ ನಗರಸಭೆ, ಪುರಸಭೆ, ಗ್ರಾಮ ಪಂಚಾಯಿತಿಗಳಲ್ಲೂ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸುವ ಯೋಜನೆ ಇದ್ದರೂ ಬಹುತೇಕ ಕಡೆ ಘಟಕಗಳು ಆಟಕ್ಕುಂಟ್ಟು ಲೆಕ್ಕಿಲ್ಲದಂತಾಗಿವೆ.

; ನಗರದಲ್ಲಿ ಸಂಗ್ರಹ ಮಾಡಲಾಗುತ್ತಿರುವ ಕಸ, ತಾಜ್ಯವನ್ನು ಸಂಗ್ರಹಿಸುವ ಕೆಲಸ ಸಿಬ್ನಂದಿಯಿಂದ ನಡೆದಿದೆ. ಕಸ ವಿಲೇವಾರಿ ಘಟಕದಲ್ಲಿ ಹಾಕುತ್ತಿಲ್ಲ ಎಂಬುದರ ಬಗ್ಗೆ ಗಮನಕ್ಕೆ ಬಂದಿರುವುದಿಲ್ಲ. ತ್ಯಾಜ್ಯ ವಿಲೇವಾರಿ ಘಟಕಕ್ಕೆ ಹಾಕುವಂತೆ ಉಪಯೋಗ ಮಾಡುವಂತೆ ಸಿನೆಟರಿ ಅಧಿಕಾರಿಗಳಿಗೆೆ ಸೂಚಿಸಲಾಗುತ್ತದೆ ಅಲ್ಲದೆ ಸಂಸ್ಕರಣ ಘಟಕ ಪ್ರಾರಂಬಿಸುವಂತೆ ಜಿಲ್ಲಾದಿಕಾರಿಗಳು ಮಾರ್ಗದರ್ಶನ ನೀಡಿದ್ದು ಈಗಾಗಲೇ ಸಂಸ್ಕರಣದ ಮಶೀನುಗಳು ಬಂದಿದ್ದು ಅದಕ್ಕೆ ಸಿಟಿ ವಿದ್ಯುತ್ ಕನೆಕ್ಷನಗಾಗಿ ಕೆಇಬಿ ಅದಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದು ಆ ಕಾರ್ಯ ಆದ ಬಳಿಕ ಶೀಘ್ರದಲ್ಲಿ ಪ್ರಾರಂಭಿಸುತ್ತೇವೆ
ರವಿ ಶಿರಗುಪ್ಪಿ
ಪೌರಾಯುಕ್ತರು ನಗರಸಭೆ ಸಿಂದಗಿ.

 

Latest articles

More like this