ಸಿಂದಗಿ: ಮೋರಟಗಿ ಗ್ರಾಮದ ಜನ-ಜಾನುವಾರುಗಳಿಗೆ ಶಾಶ್ವತ ನೀರಿನ ಬವಣೆ ನೀಗಿಸುವ ನಿಟ್ಟಿನಲ್ಲಿ ಸರ್ಕಾರದಿಂದ ಅನುದಾನ ತಂದು ಅಭಿವೃದ್ಧಿ ಪಡಿಸಿದ್ದೇನೆ ವಿರೋಧ ಪಕ್ಷಗಳು ಮಾಡುವ ಟೀಕೆ ಟಿಪ್ಪಣೆಗಳನ್ನು ಸವಾಲಾಗಿ ಸ್ವೀಕರಿಸಿ ಮತಕ್ಷೇತ್ರದ ಎಲ್ಲ ಗ್ರಾಮಗಳಿಗೂ ಅಭಿವೃದ್ಧಿ ಪಡಿಸುವ ಪ್ರಮಾಣಿಕ ಪ್ರಯತ್ನ ಮಾಡುತಿದ್ದೇನೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಮೋರಟಗಿ ಗ್ರಾಮದ ೧೪ ಎಕರೆ ವಿಶಾಲವಾದ ಕೆರೆಗೆ ಬಾಗಿನ ಅರ್ಪಿಸಿ ಅವರು ಮಾತನಾಡಿ, ವಿವಿಧ ಕಾರ್ಯಕ್ರಮಗಳಿಗೆ ಬಂದಾಗ ಗ್ರಾಮದ ಹಿರಿಯರು ನಮ್ಮ ಪಕ್ಷದ ಮುಖಂಡರು ಸಮಯಕ್ಕೆ ಸರಿಯಾಗಿ ಮಳೆ ಇಲ್ಲದ ಕಾರಣ ಕೆರೆ ೧೪ ಎಕರೆ ಕೆರೆ ಬತ್ತಿ ಹೋಗುತ್ತಿದೆ. ಬೋರವೆಲಗಳಲ್ಲಿ ನೀರು ನಿಂತು ಹೋಗಿವೆ ಕೆರೆಯನ್ನು ಇದನ್ನು ಅಗಲೀಕರಣ ಮಾಡಿ ನೀರು ತುಂಬಿಸುವ ವ್ಯವಸ್ಥೆ ಆಗಬೇಕು ಎಂದು ಮನವಿ ಮಾಡಿದ್ದರು ಒಂದು ಕೋಟಿ ಅನುದಾನದಲ್ಲಿ ಪುನಶ್ಚೇತನ ಜೊತೆಗೆ ಗುತ್ತಿ ಬಸವಣ್ಣ ಏತ ನೀರಾವರಿಯಿಂದ ಐವತ್ತು ಲಕ್ಷ ವೆಚ್ಚದಲ್ಲಿ ಪ್ರತ್ತೇಕ ಕಾಲುವೆ ನಿರ್ಮಿಸಿ ನೇರವಾಗಿ ಕೆರೆಗೆ ನೀರು ಬರುವ ವ್ಯವಸ್ಥೆ ಮಾಡಿದ್ದೇನೆ ಆಲಮೇಲದಲ್ಲಿ ನೆನೆಗುದಿಗೆ ಬಿದ್ದಿರುವ ೫೪ ಎಕರೆ ಕೆರೆ ಕಾಮಗಾರಿ ನಾಲ್ಕು ಕೋಟಿಗಿಂತಲೂ ಅಧಿಕ ಅನುದಾನ ತಂದು ಅಭಿವೃದ್ಧಿ ಪಡಿಸುವ ಪ್ರಾಮಾಣಿಕ ಕಾರ್ಯ ಮಾಡಿದ್ದೇನೆ ಹಂದಿಗನೂರು ಮತ್ತು ಸಿಂದಗಿ ಕೆರೆ ಅಭಿವೃದ್ಧಿಪಡಿಸಿದ್ದೇನೆ ರಾಂಪುರ ಕೆರೆ ಅಭಿವೃದ್ಧಿಗೆ ಕೈಗೆತ್ತಿಕೊಂಡಿದ್ದೇನೆ ಕೂಡಲೇ ಅದನ್ನು ಕೂಡ ಅಭಿವೃದ್ಧಿಪಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಲ್ಲಾ ಕಾಮಗಾರಿಗಳಿಗೆ ಅನುದಾನ ಕೊಟ್ಟು ಸಹಕರಿಸಿದ ನಮ್ಮ ಸರ್ಕಾರಕ್ಕೆ ಧನ್ಯವಾದಗಳು ಹೇಳುತ್ತೇನೆ ಇನ್ನುಳಿದ ಎರಡು ವರ್ಷದ ಅವಧಿಯಲ್ಲಿ ಮತಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಅಧ್ಯಕ್ಷ ಸಾಧಿಕ್ ಸುಂಬಡ್ ಮಾತನಾಡಿ, ೧೩ ವರ್ಷ ಅಧಿಕಾರದಲ್ಲಿದ್ದ ಮಾಜಿ ಶಾಸಕರು ಸಾರ್ವಜನಿಕರು ಮೆಚ್ಚುವಂತ ಕಾರ್ಯಗಳು ಮಾಡಿಲ್ಲ ಟೀಕೆ ಟಿಪ್ಪಣಿ ಆರೋಪ ಮಾಡುವುದೇ ಅವರ ಕಾರ್ಯವಾಗಿದೆ ಶಾಸಕ ಅಶೋಕ್ ಮನಗೂಳಿ ಅವರು ಪ್ರಥಮ ಬಾರಿ ಶಾಸಕರಾಗಿ ಮೂರು ವರ್ಷ ಅವಧಿಯಲ್ಲಿ ಸಾರ್ವಜನಿಕರ ನಿರೀಕ್ಷೆಗೂ ಮೀರಿ ಕಾಮಗಾರಿಗಳನ್ನು ಮಾಡಿ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಧಾಪುಗಳು ಹಾಕುತ್ತಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಜಿಪಂ ಸದಸ್ಯ ಎನ್ ಆರ್ ತಿವಾರಿ, ಎಪಿಎಂಸಿ ಅಧ್ಯಕ್ಷ ಕಲ್ಲಣ್ಣ ಬಿಸನಾಳ, ಮೈಬುಸಾಬ್ ಕಣ್ಣಿ, ವೀರನಗೌಡ ಪಾಟೀಲ್, ಪ್ರಕಾಶ್ ಅಡಗಲ್, ನಿಂಗನಗೌಡ ಪಾಟೀಲ್, ರಜಾಕ್ ಭಗವಾನ್, ಸಲೀಂ ಕಣ್ಣಿ, ಅಬ್ಬಾಸಲಿ ಬಳುರ್ಗಿ, ಚೆಮ್ಮಗೌಡ ಪಾಟೀಲ್, ಸೇರಿದಂತೆ ನೀರಾವರಿ ಇಲಾಖೆಯ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಗಳಾದ ಭೀಮು ಲಮಾಣಿ, ನಿಂಗು ಪೂಜಾರಿ ಸೇರಿದಂತೆ ಹಲವರು ಇದ್ದರು.
ಫೋಟೊ; ಮೋರಟಗಿ ಕೆರೆಗೆ ಶಾಸಕ ಅಶೋಕ ಮನಗೂಳಿ ಬಾಗಿನ ಅರ್ಪಣೆ ಮಾಡಿ ಮಾತನಾಡಿದರು