ಮೂಡಲಗಿ: ಇತ್ತೀಚೆಗೆ ರಾಜಾಪೂರದ ಬಸವಂತಪ್ಪ ಕಮತಿ ಪ.ಪೂ ಕಾಲೇಜಿನ ಆತಿಥ್ಯದಲ್ಲಿ ಜರುಗಿದ 2026-27ನೇ ಸಾಲಿನ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಕಲ್ಲೋಳಿಯ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಎನ್.ಆರ್. ಪಾಟೀಲ್ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಗುಂಪು ಸ್ಪರ್ಧೆಗಳ ವಿವರ:
• ಬಾಲಕಿಯರ ವಾಲಿಬಾಲ್: ಪ್ರಥಮ ಸ್ಥಾನ
• ಬಾಲಕರ 4×100 ಮೀ. ರಿಲೇ: ಪ್ರಥಮ ಸ್ಥಾನ
• ಬಾಲಕಿಯರ 4×400 ಮೀ. ರಿಲೇ: ದ್ವಿತೀಯ ಸ್ಥಾನ
ವೈಯಕ್ತಿಕ ಸ್ಪರ್ಧೆಗಳ ವಿವರ:
• ರುಕ್ಮಿಣಿ ಸಾರಾಪೂರ: ಬಾಲಕಿಯರ ನಡಿಗೆ ಸ್ಪರ್ಧೆ – ಪ್ರಥಮ ಸ್ಥಾನ
• ಗಂಗೋತ್ರಿ ನಾಯಕವಾಡಿ: ಬಾಲಕಿಯರ 800 ಮೀಟರ್ ಓಟ – ಪ್ರಥಮ ಸ್ಥಾನ
• ಕಿರಣ್ ಹೆಬ್ಬಾಳ: ಬಾಲಕರ ಚೆಸ್ – ಪ್ರಥಮ ಸ್ಥಾನ
• ಪ್ರಜ್ವಲ್ ಮರಿಸಿದ್ದಪ್ಪಗೋಳ: 100 ಮೀಟರ್ ಓಟ – ಪ್ರಥಮ ಸ್ಥಾನ ಹಾಗೂ 400 ಮೀಟರ್ ಓಟ – ತೃತೀಯ ಸ್ಥಾನ
• ಚಂದ್ರಶೇಖರ್ ಇಂಚಲ: ಬಾಲಕರ ತ್ರಿವಿಧ ಜಿಗಿತ (ಟ್ರಿಪಲ್ ಜಂಪ್) – ಪ್ರಥಮ ಸ್ಥಾನ
• ರಕ್ಷಿತಾ ಬಡಿಗೇರ್: ಬಾಲಕಿಯರ ಹ್ಯಾಮರ್ ಥ್ರೋ – ದ್ವಿತೀಯ ಸ್ಥಾನ
• ದೀಪಾ ಮರ್ದಿ: ಬಾಲಕಿಯರ ನಡಿಗೆ ಸ್ಪರ್ಧೆ – ತೃತೀಯ ಸ್ಥಾನ
• ಲಕ್ಷ್ಮಿ ಉಪ್ಪಾರ: ಬಾಲಕಿಯರ ಎತ್ತರ ಜಿಗಿತ – ತೃತೀಯ ಸ್ಥಾನ
ಕ್ರೀಡಾಕೂಟದಲ್ಲಿ ಸಾಧನೆ ತೋರಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳಿಗೆ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಬಸಗೌಡ ಶಿವಗೌಡ ಪಾಟೀಲ್, ಪದವಿ ಕಾಲೇಜಿನ ಪ್ರಾಚಾರ್ಯರಾದ ಡಾ. ಸುರೇಶ ಹನಗಂಡಿ, ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಎಂ.ವೈ. ಮೇತ್ರಿ, ಸಂಸ್ಥೆಯ ಎಲ್ಲಾ ಅಂಗಸಂಸ್ಥೆಗಳ ಮುಖ್ಯಸ್ಥರು, ದೈಹಿಕ ಶಿಕ್ಷಣ ಉಪನ್ಯಾಸಕರಾದ ಮಹೇಶ ಮಳವಾಡ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಹೃತೂರ್ವಕ ಅಭಿನಂದನೆಗಳನ್ನು ಸಲ್ಲಿಸಿ, ಮುಂದಿನ ಹಂತದ ಸ್ಪರ್ಧೆಗೆ ಶುಭ ಹಾರೈಸಿದ್ದಾರೆ.