Homeಸುದ್ದಿಗಳುಕವನಕವನ : ನವನೀತ ಕದ್ದ ಚೋರ

ಕವನ : ನವನೀತ ಕದ್ದ ಚೋರ

Published on

  ನವನೀತ ಕದ್ದ ಚೋರ

ಬೆಣ್ಣೆಯ ಕದ್ದು
ಬಾಯಲಿ ಮೆದ್ದು
ನಾನಲ್ಲಾ ನಾನಲ್ಲಾ
ಎಂದೋರ್ಯಾರಮ್ಮಾ ….?!!

ವನದಲಿ ನಲಿಯುತ
ಮುರಳಿಯ ನುಡಿಯುತ
ಗೋಪಿಕೆಯರ ಮನ
ಸೆಳೆದೋರ್ಯಾರಮ್ಮಾ…?!!

ಮಾತೆಗೆ ಬಾಯಲಿ
ಬ್ರಹ್ಮಾಂಡ ತೋರಿದ
ಆ ಮಹಾಮಹಿಮ
ಅವನ್ಯಾರಮ್ಮಾ ….?!!

ಕಾಳಿಂಗಮರ್ದನ ಗೈದೂ
ಶಿಷ್ಟರ ರಕ್ಷಿಸಿ ಅಂದೂ
ಗೀತೆಯ ಭೋಧಿಸಿದವರ್ಯಾರಮ್ಮಾ…?!!

ಕೃಷ್ಣಂವಂದೇ ಜಗದ್ಗುರುಂ
ಎನ್ನುತಾ ಕೈಗಳ
ಜೋಡಿಸಿ ನಮಿಸಮ್ಮಾ ….

..ಭಾರತಿ ಗೋಗಿ, ಭದ್ರಾವತಿ

Latest articles

More like this