Homeಲೇಖನಎಲ್ಲ ಜಯಂತಿಗಳಲ್ಲಿ ಸರ್ವೋತ್ಕೃಷ್ಟ ಶ್ರೀ ಕೃಷ್ಣ ಜನ್ಮಾಷ್ಟಮಿ !

ಎಲ್ಲ ಜಯಂತಿಗಳಲ್ಲಿ ಸರ್ವೋತ್ಕೃಷ್ಟ ಶ್ರೀ ಕೃಷ್ಣ ಜನ್ಮಾಷ್ಟಮಿ !

Published on

ಎಲ್ಲ ಜಯಂತಿಗಳಲ್ಲಿಯೂ ಶ್ರೀ ಕೃಷ್ಣ ಜನ್ಮಾಷ್ಟಮಿ ಸರ್ವೋತ್ಕೃಷ್ಟವಾದದ್ದು.

ದೇವಕಿ ಮತ್ತು ವಸುದೇವರು ಸೆರಮನೆಯಲ್ಲಿರುವಾಗ ಜನ್ಮ ತಳೆದ ಕೃಷ್ಣ. ಸಾಕು ತಂದೆ ನಂದರಾಜ, ಸಾಕು ತಾಯಿ ಯಶೋಧೆ. ಉಗ್ರಸೇನ ಮಹಾರಾಜ ಕೃಷ್ಣನ ಅಜ್ಜ. ರಾಕ್ಷಸನಾದ ಕಂಸ ಕೃಷ್ಣನ ಸೋದರಮಾವ. ಕಂಸನ ಮರಣ ಕೃಷ್ಣನಿಂದ ಆಯಿತು. ಶ್ರೀಮನ್ನಾರಾಯಣನ ದಶಾವತಾರಗಳಲ್ಲಿ 9ನೇ ಅವತಾರವೇ ಶ್ರೀಕೃಷ್ಣಾವತಾರ. ಶ್ರಾವಣಮಾಸದ ರೋಹಿಣಿ ನಕ್ಷತ್ರದಲ್ಲಿ ಕೃಷ್ಣನ ಜನ್ಮವಾಯಿತು. ಈ ದಿನ ಕೃಷ್ಣ ಜನ್ಮಾಷ್ಟಮಿ ಆಚರಿಸುವರು.

ಈ ದಿನ ಕೃಷ್ಣನನ್ನು ಪೂಜಿಸುವರು.ತಮ್ಮ ಮನೆಯ ಪೂಜಾ ಮಂಟಪ ವನ್ನು ರಸಭರಿತವಾದ ಹೂವು-ಹಣ್ಣು, ಕಾಯಿ ಗಳಿಂದ ಶೃಂಗರಿಸಿ ತಮ್ಮ ಮನೆಯ ಪೂಜಾ ಮಂಟಪದಿಂದ ಮನೆಯ ಬಾಗಿಲಿನ ಹೊಸ್ತಿಲಿನ ವರೆಗೂ ಹೆಜ್ಜೆ ಗುರುತುಗಳನ್ನು ಇಡುವರು. ಇದು ಬಾಲಕೃಷ್ಣನು ತಮ್ಮ ಮನೆಯೊಳಗೆ ಬರುವ ಸೂಚನೆ.

ಈ ದಿನ ಹದಿನೆಂಟು ಬಗೆಯ ವಿವಿಧ ಭಕ್ಷ್ಯಗಳನ್ನು ತಯಾರಿಸಿ ನೈವೇದ್ಯ ಮಾಡುವುದು ವಾಡಿಕೆ. ಅದರಲ್ಲಿ ಏಲಕ್ಕಿಯಿಂದ ತಯಾರಿಸಿದ ತಿನಿಸು ಗಳಿಗೆ ವಿಶೇಷ ಪ್ರಾಧಾನ್ಯತೆ. ಶ್ರೀ ಕೃಷ್ಣನು ಹೊಂದಿರುವ ಕೊಳಲು, ನವಿಲುಗರಿ ಶಾಂತಿ ಸಮಯದಲ್ಲಾದರೆ ಧರ್ಮರಕ್ಷಣೆ ಸಮಯದಲ್ಲಿ ಸುದರ್ಶನ ಚಕ್ರವಿದೆ. ಈ ದಿನದಂದು ಸಣ್ಣ ಪುಟ್ಟ ಹುಡುಗರನ್ನ ಗೋವಿಂದ ಗೋಪಾಲ ಎಂದು ಕೃಷ್ಣನ ಅವತಾರ ದಲ್ಲಿ ಶೃಂಗರಿಸುವರು.

ಹಾಲು ತುಂಬಿದ ಮಣ್ಣಿನ ಗಡಿಗೆಗಳನ್ನು ಹಗ್ಗಕ್ಕೆ ಕಟ್ಟಿ ಒಂದು ಎತ್ತರದಲ್ಲಿ ತೂಗು ಬಿಡುವರು. ಆ ಗಡಿಗೆಯಲ್ಲಿ ಬೆಣ್ಣೆಯ‌ನ್ನು ಇಟ್ಟಿರುವರು. ಹುಡುಗರು ಪಿರಮಿಡ್ ಆಕಾರಕ್ಕೆ ಒಬ್ಬರ ಮೇಲೊಬ್ಬರು ನಿಂತಕೊಂಡು ಬಾಲಕೃಷ್ಣನು ಮಡಿಕೆಯನ್ನು ಮುಟ್ಟಿದ ರೀತಿಯಲ್ಲಿ ಮುಟ್ಟಿ ಒಡೆಯುವರು. ಮಡಿಕೆ ಒಡೆದವರಿಗೆ ಹಣದ ರೂಪದಲ್ಲಿ ವಸ್ತುಗಳ ರೂಪದಲ್ಲಿ ಬಹುಮಾನ ನೀಡುವರು.ಇನ್ನೂ ಕೆಲವಡೆ ಗಡಿಗೆಗೆ ಎಣ್ಣೆಯನ್ನು ಸವರಿರುತ್ತಾರೆ. ಅಷ್ಟೇ ಅಲ್ಲ ಪಿರಮಿಡ್ ಆಕಾರದಲ್ಲಿ ನಿಂತಾಗ ಮೇಲೆ ಹತ್ತುವ ಗೋವಿಂದನ ವೇಷಧಾರಿಗೆ ನೀರು ಎರಚುವರು. ಅವನು ಜಾರಿ ಕೆಳಗೆ ಬೀಳಲೆಂಬುದು ಈ ರೀತಿ ಮಾಡುವ ತಂತ್ರ ಗಳಲ್ಲಿ ಒಂದು. ಇವುಗಳನ್ನು ದಾಟಿ ಗಡಿಗೆ ಒಡೆಯುವುದು ಕೂಡ ಸಾಹಸದ ಕಾರ್ಯವೇ.

ಪುಟ್ಟ ಮಕ್ಕಳಿಗೆ ತಾಯಂದಿರು ಕೃಷ್ಣ ಮತ್ತು ರಾಧೆಯರ ವೇಷ ಹಾಕುವ ಮೂಲಕ ಬಾಲಕೃಷ್ಣ ರಾಧೆಯನ್ನು ಅವರ ರೂಪದಲ್ಲಿ ಕಂಡು ಸಂಭ್ರಮಿ ಸುವುದಲ್ಲದೇ ಅವರು ಅಳದಿರಲೆಂದು ಬಾಯಿಗೆ ಬೆಣ್ಣೆ ಒರೆಸುವರು. ಇದು ಮಕ್ಕಳಿಗೆ ಬೆಣ್ಣೆ ತಿನ್ನಿಸುವ ಕ್ರಿಯೆಯು ಕೂಡ. ಶಾಲೆಗಳಲ್ಲಿ ಶ್ರೀಕೃಷ್ಣ ರಾಧೆಯರ ವೇಷಭೂಷಣ ಸ್ಪರ್ಧೆ ಈ ದಿನ ಜರುಗುತ್ತದೆ. ಉತ್ತಮ ವೇಷಭೂಷಣ ಹೊಂದಿದ ಮಕ್ಕಳಿಗೆ
ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ಕೂಡ ನೀಡುವ ಮೂಲಕ ಕೃಷ್ಣನನ್ನು ಸ್ಮರಿಸುವ ಈ ದಿನ ನಾಡಿಗೆಲ್ಲ ಮಹತ್ವದ್ದಾಗಿದೆಶ್ರೀ

ಶ್ರೀ ಕೃಷ್ಣನ ಸ್ಮರಣೆಗಾಗಿ ವಿಷ್ಣು ಸಹಸ್ರನಾಮ, ಭಗವದ್ಗೀತೆಗಳನ್ನು ಪಠಿಸುವ ಜೊತೆಗೆ ಅದರ ತಿರುಳನ್ನು ಹತ್ತು ಜನಕ್ಕೆ ತಿಳಿಸುವ ಮೂಲಕ ಶ್ರೀ ಕೃಷ್ಣನನ್ನು ಪೂಜಿಸುವುದು ಹಿರಿಯರು ವಯಸ್ಕರು ಮಾಡುವ ಕರ್ತವ್ಯಗಳಲ್ಲೊಂದಾಗಿದೆ. ಈ ದಿನ ವಿವಾಹಿತ ಸ್ತ್ರೀಯರು ಉಪವಾಸ ಮಾಡುವ ಮೂಲಕ ಕೃಷ್ಣ ಜನ್ಮಾಷ್ಟಮಿ ಆಚರಣೆ ಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವರು.

ಬಾಲ್ಯದಲ್ಲಿ ಬೆಣ್ಣೆಯನ್ನು ತಿಂದಿರುವ ಕಾರಣ ನವನೀತನೆಂದು ಕರೆಸಿಕೊಳ್ಳುವ ಕೃಷ್ಣನನ್ನು ಅಚ್ಯುತ, ಅಸುರಾರಿ, ವಾಸುದೇವ, ನಂದ ಗೋಪಾಲ, ಕಾಲದೇವ, ಗಿರಿಧರ, ಗೋಪಾಲ, ವೇಣುಗೋಪಾಲ, ಗೋವಿಂದ, ಚಕ್ರಧಾರಿ, ದ್ವಾರಕಾಧೀಶ, ಜಗನ್ನಾಥ, ಜನಾರ್ಧನ, ಪತಿತ ಪಾವನ, ಪರಬ್ರಹ್ಮ, ಪಾಥಸಾರಥಿ, ಮಧುಸೂದನ, ಮಾಧವ, ಮುಕುಂದ, ಯೋಗೇಶ್ವರ, ಶ್ಯಾಮ ಸುಂದರ, ಹೃಷಿಕೇಶ, ಪುರುಷೋತ್ತಮ, ಸುದರ್ಶನ, ಮುರಳಿ, ಮುರಾರಿ, ಘನಶ್ಯಾಮ, ದಾಮೋದರ, ಪಾಂಡುರಂಗ, ಕೇಶವ, ವಿಠ್ಠಲ, ಶ್ರೀ ರಂಗನಾಥ ಶಕಟಸುರಭಂಜನ ಹೀಗೆ ವಿವಿಧ ಹೆಸರುಗಳಿಂದ ಕರೆಯುವರು.

ಕೃಷ್ಣನ ಬಾಲ್ಯದ ಅನೇಕ ರೋಚಕ ಕತೆಗಳು ಭಾಗವತದಲ್ಲಿವೆ. ಶಕಟಾಸುರ ವಧೆ, ಪೂತನಿಯ ವಧೆ, ಗೋಪಿಕಾ ಸ್ತ್ರೀಯರ ವಸ್ತ್ರಾಪಹರಣ, ಕಾಳಿಂಗ ಮರ್ಧನ, ಗೋವರ್ಧನ ಗಿರಿಯ ರಕ್ಷಣೆ ಈ ಕತೆಗಳಲ್ಲಿ ಮಹತ್ವವಾದವು. ಸೂರದಾಸರು, ಪುರಂದರದಾಸರು, ಕನಕದಾಸರು, ಮೀರಾಬಾಯಿ ಇವರೆಲ್ಲ ಕೃಷ್ಣನ ಭಕ್ತರಾಗಿದ್ದ ಕವಿವರ್ಯರು. ಇವರು ಕೃಷ್ಣನನ್ನು ಕುರಿತು ಅನೇಕ ಗೀತೆಗಳನ್ನು ಭಜನೆಗಳನ್ನು ರಚಿಸಿರುವರು….

Latest articles

More like this