ದಿ.29-9-2026 ರಂದು ಜರುಗಲಿರುವ ಅಣ್ಣಿಗೇರಿ ತಾಲೂಕಿನ ನಾಲ್ಕನೆಯ ಕನ್ನಡ ಸಾಹಿತ್ಯ
ಸಮ್ಮೇಳನದ ಸರ್ವಾಧ್ಯಕ್ಷರಾದ ನಿಮಿತ್ತ ಡಾ.ಸುಧಾ.ಕೌಜಗೇರಿ ಅವರ ಕಿರು ಪರಿಚಯ
ಚಲನಾತ್ಮಕ ವ್ಯಕ್ತಿತ್ವವುಳ್ಳವರು,ವಿಮರ್ಶಕರು, ಉತ್ತಮ ವಾಗ್ಮಿ,ದಕ್ಷ ಆಡಳಿತಗಾರ ಪ್ರಾಚಾರ್ಯರು,ಪದವಿ ವಿದ್ಯಾರ್ಥಿಗಳಿಗಾಗಿ ಬೆಳಗು,ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳನ್ನಾಧರಿಸಿರುವ ಹಲವಾರು ಪಠ್ಯ ಪುಸ್ತಕಗಳ ಸಂಪಾದಕರು,ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಕನ್ನಡ ಪ್ರಾಧ್ಯಾಪಕರು, ಕವಯಿತ್ರಿ, ಸೃಜನಶೀಲ ಸಾಹಿತ್ಯಾಸಕ್ತರು,ಖ್ಯಾತ ವಿದ್ವಾಂಸರು,ಇತ್ತೀಚೆಗೆ ಧಾರವಾಡದ ಪ್ರಾದೇಶಿಕ ಮಹಿಳಾ ನೂತನ ಜಂಟಿ ನಿರ್ದೇಶಕರು ಆಗಿರುವ ಡಾ.ಸುಧಾ ಕೌಜಗೇರಿ ಅವರು ‘Simple living & high thinking’ ತತ್ವ ಪರಿಪಾಲಕರು,ಅನುಪಮ ನಿಗರ್ವಿ ನಿರಹಂಕಾರಿ ಸ್ವಭಾವದ ಬಹುಮುಖ ಪ್ರತಿಭಾನ್ವಿತರು.
ಅಣ್ಣಿಗೇರಿಯ ಶ್ರೀ ಅಮೃತೇಶ್ವರ ಪದವಿ ಪೂರ್ವ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕರಾದ ಎಸ್.ಎಚ್ ಕೌಜಗೇರಿ ಅವರ ಮಗಳು,ಪಶು ವೈದ್ಯರಾದ ಡಾ.ರವೀಂದ್ರನಾಥ ನಾಯ್ಕರ ಅವರ ಬಾಳ ಸಂಗಾತಿ ಆಗಿರುವ ಇವರಿಗೆ ಈರ್ವರು ಮಕ್ಕಳಾದ ಡಾ ಕನಕಲಕ್ಷ್ಮಿ ಮತ್ತು ಈಗ ವೖದ್ಯಕೀಯ ವ್ಯಾಸಂಗದಲ್ಲಿ ನಿರತಳಾದ ಭಾರ್ಗವಿ ಎಂಬ ಇಬ್ನರು ಮಕ್ಕಳು
ಹುಲಕೋಟಿಯ ಕೆ.ಎಚ್.ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹ ಪ್ರಾಧ್ಯಾಪಕರಾಗಿ,ಎರಡು ಅವಧಿಯವರೆಗೆ ಶ್ರೇಷ್ಠ ಆಡಳಿತಗಾರ ಪ್ರಾಚಾರ್ಯರಾಗಿ ಸಿಬ್ಬಂದಿ ವರ್ಗದವರ ವಿದ್ಯಾರ್ಥಿ ಬಳಗದವರ ಮೇಲಧಿಕಾರಿಯವರ ಪ್ರಶಂಸೆಗೆ ಪಾತ್ರರಾದವರು.
ರಾಜ್ಯ,ರಾಷ್ಟ್ರ, ಅಂತರ್ ರಾಷ್ಟ್ರಮಟ್ಟದ ಸಮಾವೇಶಗಳಲ್ಲಿ ವಿಚಾರ ಸಂಕಿರಣಗಳಲ್ಲಿ, ವಿವಿಧ ವಿಷಯಗಳ ಕುರಿತು ಸಂಶೋಧನಾ ಪ್ರಬಂಧ ಮಂಡಿಸಿದ್ದು ಅವುಗಳೆಲ್ಲವೂ ಐ ಎಸ್ ಬಿ ಎನ್,ಐ ಎಸ್ ಎಸ್ ಎನ್ ಜರ್ನಲ್ ಸ್ಮರಣ ಸಂಪುಟಗಳಲ್ಲಿ ಪ್ರಕಟವಾಗಿರುತ್ತವೆಯಲ್ಲದೆ ನೂರಾರು ಸಂಶೋಧನಾ ಲೇಖನಗಳು ವಿವಿಧ ಸ್ಮರಣ ಸಂಚಿಕೆಗಳಲ್ಲಿ,ಹಲವಾರು ಪುಸ್ತಕಗಳಲ್ಲಿ, ಸಂಪುಟಗಳಲ್ಲಿ, ಅಭಿನಂ ದನ ಗ್ರಂಥಗಳಲ್ಲಿ ಆಯಾ ವರುಷಗಳಲ್ಲಿ ಪ್ರಕಟವಾಗಿದ್ದು ಸಂಶೋಧಕರಿಗೆ ಉತ್ತಮ ಆಕರ ಸಾಮಗ್ರಿಗಳಂತಿವೆ.
ರಾಜ್ಯ,ರಾಷ್ಟ್ರ, ಅಂತರ್ ರಾಷ್ಟ್ರಮಟ್ಟದ ಸಮಾವೇಶಗಳಲ್ಲಿ ವಿಚಾರ ಸಂಕಿರಣಗಳಲ್ಲಿ, ವಿವಿಧ ವಿಷಯಗಳ ಕುರಿತು ಸಂಶೋಧನಾ ಪ್ರಬಂಧ ಮಂಡಿಸಿದ್ದು ಅವುಗಳೆಲ್ಲವೂ ಐ ಎಸ್ ಬಿ ಎನ್,ಐ ಎಸ್ ಎಸ್ ಎನ್ ಜರ್ನಲ್ ಸ್ಮರಣ ಸಂಪುಟಗಳಲ್ಲಿ ಪ್ರಕಟವಾಗಿರುತ್ತವೆಯಲ್ಲದೆ ನೂರಾರು ಸಂಶೋಧನಾ ಲೇಖನಗಳು ವಿವಿಧ ಸ್ಮರಣ ಸಂಚಿಕೆಗಳಲ್ಲಿ,ಹಲವಾರು ಪುಸ್ತಕಗಳಲ್ಲಿ, ಸಂಪುಟಗಳಲ್ಲಿ, ಅಭಿನಂ
ಬಿ.ಎ. ಶಿಕ್ಷಣವನ್ನು ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ, ಎಂ.ಎ.ಎಂಫಿಲ್,ಪಿ ಎಚ್ ಡಿ ವ್ಯಾಸಂಗವನ್ನು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪ್ರಶಸ್ತಿ ಸಹಿತ ಪ್ರಥಮ ವರ್ಗದಲ್ಲಿ ತೇರ್ಗಡೆಯಾದ ನಂತರ ಡಿಪ್ಲೋಮಾ ಇನ್ ಲಿಗ್ವಿಸ್ಟಿಕ್ ಕೋರ್ಸ್ ನ್ನೂ ಪ್ರಥಮ ಶ್ರೇಣಿಯಲ್ಲಿ ವಿಜೇತರಾದರು.1993 ರಲ್ಲಿ ಎಂ ಫಿಲ್ ಪದವಿ ವ್ಯಾಸಂಗ ಕೈಗೊಂಡು ಅಧ್ಯಯನ ನಿರತರಾಗಿ ‘ಮಂಗರಾಜನ ಅಭಿನವಾಧಾನಂ’ ವಿಷಯ ಆಯ್ಕೆ ಮಾಡಿಕೊಂಡು ಸಂಶೋಧನಾ ಸಂಪ್ರಬಂಧ ಸಿದ್ಧಪಡಿಸಿ ಸಮರ್ಪಿಸಿದರು. 2001 ರಲ್ಲಿ ಪಿ ಎಚ್ ಡಿ ಪದವಿಗಾಗಿ ಆಸಕ್ತರಾಗಿ ಸಂಶೋಧನಾ ಅಧ್ಯಯನ ನಿರತರಾಗಿ ‘ಕಿಟ್ಟೆಲ್ ಅವರ ಕನ್ನಡ-ಇಂಗ್ಲೀಷ್ ಡಿಕ್ಷನರಿ : ಒಂದು ಸಾಂಸ್ಕ್ರೃತಿಕ ಅಧ್ಯಯನ’ ಈ ವಿಷಯ ಕುರಿತು ಮಹಾಪ್ರಬಂಧ ಸಮರ್ಪಿಸಿ ಡಾಕ್ಟರೇಟ್ ಪದವಿ ಪುರಸ್ಕೃತರಾದರು.ಈ ಮಹಾಪ್ರಬಂಧದ ಕ್ರೃತಿಯನ್ನು 2008 ರಲ್ಲಿ ಹಾಗೂ ಜನನಿ ಇತ್ಯಾದಿ ಪುಸ್ತಕಗಳನ್ನು ಪ್ರಕಟಿಸಿ ಲೋಕಾರ್ಪಣೆಗೊಳಿಸಿದರು.
1992 ರಲ್ಲಿ ಕರ್ನಾಟಕ ಲೋಕ ಸೇವಾ ಆಯೋಗದ ಪರೀಕ್ಷೆಯಲ್ಲಿ ದಿಗ್ವಿಜಯಶಾಲಿಯಾದುದರಿಂದ ಅಕ್ಕಿ ಆಲೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹ ಪ್ರಾಧ್ಯಾಪಕರಾಗಿ ಸೇವೆ ಆರಂಭಿಸಿ 16 ವರ್ಷ ಸೇವೆ ಸಲ್ಲಿಸಿದ ಡಾ.ಸುಧಾ ಕೌಜಗೇರಿಯವರು,ಅಣ್ಣಿಗೇರಿ ಗೆ ವರ್ಗವಾದುದರಿಂದ ಅಲ್ಲಿಯೇ 14 ವರ್ಷ ಸೇವೆ,ನಂತರ 2022 ರಿಂದ 2026 ರ ವರೆಗೆ ಹುಲಕೋಟಿಯಲ್ಲಿ ಆದರ್ಶ ಪ್ರಾಧ್ಯಾಪಕರಾಗಿ ದಕ್ಷ ಪ್ರಾಚಾರ್ಯರಾಗಿರುವಾಗ 10-7-2026 ರಿಂದ ಈಗ ಪ್ರಾದೇಶಿಕ ಜಂಟಿ ನಿರ್ದೇಶಕರಾಗಿ ನೇಮಣೂಕಿ ಆದುದರಿಂದ ಧಾರವಾಡದಲ್ಲಿ ಸೇವೆ ಸಲ್ಲಿಸುತ್ತಲಿದ್ದುದು ಹೆಮ್ಮೆ ಹಾಗೂ ಅಭಿಮಾನದ ಸಂಗತಿ.
34 ವರ್ಷ ಬೋಧನಾನುಭವವುಳ್ಳ ಮೇಡಂ ಅವರ ಸಾಧನೆಗಾಗಿ 2022ರಲ್ಲಿ ಕರ್ನಾಟಕ ರಾಜ್ಯ ಅಧ್ಯಾಪಕರ ಸಂಘದವರು ಅತ್ಯುತ್ತಮ ಪ್ರಾಧ್ಯಾಪಕ ಪ್ರಶಸ್ತಿ ಪುರಸ್ಕೃತರನ್ನಾಗಿ ಆಯ್ಕೆ ಮಾಡಿ ಸತ್ಕರಿಸಿ ಗೌರವಿಸಿದ್ದಾರೆ. ‘ಗುರು ಪ್ರಶಸ್ತಿ’ ಮೊದಲಾದ ಪ್ರಶಸ್ತಿಗಳು ಡಾ.ಸುಧಾ ಅವರ ಕೊರಳನ್ನಲಂಕರಿಸಿ ತಮ್ಮ ಮೌಲ್ಯ ವರ್ಧಿಸಿಕೊಂಡಿರುತ್ತವೆ. ಅಗಣಿತ ಸಭೆ ಸಮಾರಂಭಗಳಲ್ಲಿ, ಅಕ್ಕನ ಅರಿವು ಗೂಗಲ್ ಮೀಟ್, ಅನೇಕ ಆನ್ ಲೈನ್ ಅಂತಾರಾಷ್ಟ್ರೀಯ ಸಮಾವೇಶಗಳಲ್ಲಿ ಆಶಯ ಭಾಷಣಕಾರರಾಗಿ ಸಂಪನ್ಮೂಲ ವ್ಯಕ್ತಿಯಾಗಿ ಹಲವಾರು ಸಂಶೋಧನಾ ಪ್ರಬಂಧ ಮಂಡಿಸಿರುವರಲ್ಲದೆ,ತಾಲೂಕು ಮತ್ತು ಜಿಲ್ಲಾ ಸಮ್ಮೇಳನಗಳಲ್ಲಿ ಗೋಷ್ಟಿಯ ಅಧ್ಯಕ್ಷರಾಗಿ, ಉಪನ್ಯಾಸಕರಾಗಿ, ಉದ್ಘಾಟಕರಾಗಿ,ಅಧ್ಯಕ್ಷರಾಗಿ,ಮುಖ್ಯ ಅತಿಥಿಗಳಾಗಿ ಕ್ರಿಯಾಶೀಲರಾಗಿ ಪಾಲ್ಗೊಂಡಿದ್ದಾರೆ.ಬಡವರ ದೀನ ದುರ್ಬಲರ ಅಂಧ-ಅನಾಥರ ಬಾಳಿಗೆ ಬೆಳಕಾಗಿ ಅವರವರ ಕುಂದುಕೊರತೆಗಳಿಗೆ ತಕ್ಕಂತೆ ಸಹಾಯ ಸಹಕಾರ ಹಸ್ತವೀಯುತ್ತಲೀರುವ ಮಾನವೀಯತೆಯ ಸಾಕಾರ ಪ್ರತಿರೂಪರಾದ ಆತ್ಮೀಯ ಸಖಿ ಸದಾ ಹಸನ್ಮುಖಿಯಾಗಿರುವ ಡಾ.ಸುಧಾ ಕೌಜಗೇರಿ ಅವರಿಗೆ ಇನ್ನಷ್ಟು ಮತ್ತಷ್ಟು ಉನ್ನತ ಹುದ್ದೆಗಳನ್ನಲಂಕರಿಸುವ ಸುವರ್ಣಾವಕಾಶಗಳನ್ನು ಭಗವಂತ ದಯಪಾಲಿಸುತ ಹರಸಿ ಹಾರೈಸುತಲಿರಲಿ ಎಂದು ಸರ್ವ ಬಂಧು-ಬಾಂಧವರ,ಸ್ನೇಹಿತರ ಅಭಿಮಾನಿಗಳವರ,ವಿದ್ಯಾರ್ಥಿ ಬಳಗದವರ ಪರವಾಗಿ ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಾಹಿತ್ಯಾಭಿಮಾನಿಗಳ ವತಿಯಿಂದ ಅನನ್ಯ ಶುಭಾಶಯಗಳು ಶುಭ ಹಾರೖಕೆಗಳು.
–**–

ಪ್ರೊ. ಶಕುಂತಲಾ.ಚನ್ನಪ್ಪ.ಸಿಂಧೂರ.
ವಿಶ್ರಾಂತ ಕನ್ನಡ ಪ್ರಾಧ್ಯಾಪಕರು
ಗದಗ.
9483217196.
svkundgol@gmail.com
–**–

ಪ್ರೊ. ಶಕುಂತಲಾ.ಚನ್ನಪ್ಪ.ಸಿಂಧೂರ.
ವಿಶ್ರಾಂತ ಕನ್ನಡ ಪ್ರಾಧ್ಯಾಪಕರು
ಗದಗ.
9483217196.
svkundgol@gmail.com