Homeಸುದ್ದಿಗಳುಬೆಟಗೇರಿ: ಸಂಭ್ರಮದಿಂದ ವಿಶ್ವಕರ್ಮ ಜಯಂತಿ ಆಚರಣೆ

ಬೆಟಗೇರಿ: ಸಂಭ್ರಮದಿಂದ ವಿಶ್ವಕರ್ಮ ಜಯಂತಿ ಆಚರಣೆ

Published on

ಬೆಟಗೇರಿ: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ವಿಶ್ವಕರ್ಮ ಸಮುದಾಯದ ವತಿಯಿಂದ ಸ್ಥಳೀಯ ಗ್ರಾಮ ದೇವತೆ ದ್ಯಾಮವ್ವದೇವಿ ದೇವಾಲಯ ಆವರಣದಲ್ಲಿ ಸೆ.೧೭ರಂದು ನಡೆದ ವಿಶ್ವಕರ್ಮ ಜಯಂತಿ ಆಚರಣೆ ಕಾರ್ಯಕ್ರಮ ನಡೆಯಿತು.

ಸ್ಥಳೀಯ ವಿಶ್ವಕರ್ಮ ಸಮುದಾಯದ ಯುವ ಮುಖಂಡ ಶಿವರಾಜ ಪತ್ತಾರ ಅಧ್ಯಕ್ಷತೆ ವಹಿಸಿದ್ದರು. ಬಸಯ್ಯ ಹಿರೇಮಠ ಅವರು ವಿಶ್ವಕರ್ಮರ ಭಾವ ಚಿತ್ರಕ್ಕೆ ಪೂಜೆ, ಪುಷ್ಪ ಸಮರ್ಪನೆ ನೆರವೇರಿಸಿದ ಬಳಿಕ ಶ್ರೀ ಕಾಳಿಕಾ ಸ್ವಾ ಮಿಲ್ ಮಾಲೀಕ ಬಸಪ್ಪ ಬಡಿಗೇರ ಅವರಿಂದ ಸಿಹಿ ಮತ್ತು ಮಹಾಪ್ರಸಾದ ಸೇವೆ ನಡೆಯಿತು.

ಬೆಟಗೇರಿ ಗ್ರಾಪಂ ಮಾಜಿ ಅಧ್ಯಕ್ಷರಾದ ಬಸವಂತ ಕೋಣಿ,ಲಕ್ಷ್ಮಣ ಚಂದರಗಿ, ಲಕ್ಷ್ಮಣ ನೀಲಣ್ಣವರ, ಶ್ರೀಶೈಲ ಗಾಣಗಿ, ಈರಣ್ಣ ಬಳಿಗಾರ, ಲಖನ ಚಂದರಗಿ, ಲಕ್ಷö್ಮಣ ಸೋಮಗೌಡ್ರ, ರಾಮಣ್ಣ ಮುಧೋಳ, ಸತ್ತೆಪ್ಪ ಹೊರಟ್ಟಿ, ಪ್ರಕಾಶ ಗುಡದಾರ, ಸುರೇಶ ಬಡಿಗೇರ, ಸಂತೋಷ ಬಡಿಗೇರ, ವಿಠ್ಠಲ ಬಡಿಗೇರ, ಭೀಮಶೆಪ್ಪ ಬಡಿಗೇರ, ಮಾರುತಿ ಬಡಿಗೇರ, ಪ್ರಕಾಶ ಬಡಿಗೇರ, ಮಾಂತು ಬಡಿಗೇರ, ಬಸವರಾಜ ಬಡಿಗೇರ, ಮಂಜು ಪತ್ತಾರ, ಸೇರಿದಂತೆ ವಿಶ್ವಕರ್ಮ ಸಮುದಾಯದ ಹಿರಿಯ ನಾಗರಿಕರು, ಯುವಕರು, ಗ್ರಾಮಸ್ಥರು ಇದ್ದರು.

ರಸಪ್ರಶ್ನೆ ಸ್ಪರ್ಧಾತ್ಮಕ ಪರೀಕ್ಷೆ: ಗೋಕಾಕ ತಾಲೂಕಿನ ಬೆಟಗೇರಿ ಶ್ರೀ ವಿನಾಯಕ ಮಿತ್ರ ಮಂಡಳಿ ಇವರ ಆಶ್ರಯದಲ್ಲಿ ಗಣೇಶ ಹಬ್ಬದ ಪ್ರಯುಕ್ತ ಶನಿವಾರ ಸೆ.೧೯ ರಂದು ಮಧ್ಯಾಹ್ನ ೧ ಗಂಟೆಗೆ ಬೆಟಗೇರಿ ಗ್ರಾಮದೇವಿ ದ್ಯಾಮವ್ವದೇವಿ ದೇವಸ್ಥಾನ ಆವರಣದಲ್ಲಿ ರಸಪ್ರಶ್ನೆ ಸ್ಪರ್ಧಾತ್ಮಕ ಪರೀಕ್ಷೆ ಆಯೋಜಿಸಿದ್ದಾರೆ. ಈ ಪರೀಕ್ಷೆಯಲ್ಲಿ ೬ರಿಂದ ೧೦ನೇ ತರಗತಿವರೆಗಿನ ಶಾಲಾ ಮಕ್ಕಳು ಭಾಗವಹಿಸಬಹುದು. ಈ ರಸಪ್ರಶ್ನೆಯ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವಿಜೇತರಾದವರಿಗೆ ಸ್ಥಳೀಯ ಕೆನರಾ ಬ್ಯಾಂಕ್ ವತಿಯಿಂದ ನೆನಪಿನ ಕಾಣಿಕೆ, ಹಲವು ಜನರು ಆಕರ್ಷಕ ನಗದು ಬಹುಮಾನ ನೀಡಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ೯೫೩೮೦೯೫೭೦೩, ೮೦೮೮೪೪೬೭೩೬, ೭೪೧೧೧೬೨೦೮೫ ಈ ಮೊಬೈಲ್ ನಂಬರಗಳಿಗೆ ಸಂಪರ್ಕಿಸಬೇಕೆಂದು ಪರೀಕ್ಷೆ ಆಯೋಜಕ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.

 

Latest articles

More like this