Homeಸುದ್ದಿಗಳುಶನಿವಾರ ಮೂಡಲಗಿ ತಾಲೂಕಾ ಮಟ್ಟದ ಅಧಿಕಾರಿಗಳಿಂದ ಪ್ರಜಾ ಸೇವೆ ಅಭಿಯಾನ

ಶನಿವಾರ ಮೂಡಲಗಿ ತಾಲೂಕಾ ಮಟ್ಟದ ಅಧಿಕಾರಿಗಳಿಂದ ಪ್ರಜಾ ಸೇವೆ ಅಭಿಯಾನ

Published on

ಹಳ್ಳೂರ- ಪ್ರಜಾಸೇವೆ ಅಭಿಯಾನವನ್ನು ರಾಜ್ಯಾದ್ಯಂತ ಆಯೋಜಿಸುವ ಸರಕಾರದ ಮಹತ್ವಾಕಾಂಕ್ಷಿಯ ಯೋಜನೆಯಾದ ಪ್ರಜಾಸೇವೆ ಅಭಿಯಾನ ಸಭೆಯನ್ನು ದಿ. 19 ಶನಿವಾರ ದಂದು ಹಮ್ಮಿಕೊಳ್ಳಲಾಗಿದ್ದು ಮೂಡಲಗಿ ತಾಲ್ಲೂಕಿನ ಹಳ್ಳೂರ ಗ್ರಾಮದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ತಾಲೂಕಾ ಮಟ್ಟದ ಅಧಿಕಾರಿಗಳಿಂದ ಸಾರ್ವಜನಿಕರ ಅಹವಾಲು ಸ್ವೀಕಾರ ಪ್ರಜಾ ಸೇವೆ ಅಭಿಯಾನ ಜರುಗುತ್ತದೆ.

ತಾಲೂಕಾ ಮಟ್ಟದ ಎಲ್ಲಾ ಅಧಿಕಾರಿಗಳು ತಮ್ಮ ಇಲಾಖೆಯ ಅಗತ್ಯಮಾಹಿತಿಗಳೊಂದಿಗೆ ಖುದ್ದಾಗಿ ಸಮಯಕ್ಕೆ ಸರಿಯಾಗಿ ಹಾಜರಿರಲು ಹಾಗೂ ತಮ್ಮ ಇಲಾಖೆಗೆ ಸಂಬಂಧಿಸಿದ ಅರ್ಜಿ/ದೂರುಗಳನ್ನು ಐಪಿಜಿಆರ್‌ಎಸ್ ತಂತ್ರಾಂಶದಡಿ ದಾಖಲಿಸಲು ಲ್ಯಾಪ ಟಾಪ್ ದೊಂದಿಗೆ ತಮ್ಮ ಅಧೀನ ಸಿಬ್ಬಂದಿ/ಡಿಇಓ ರವರನ್ನು ನಿಯೋಜನೆ ಮಾಡಲು ಮೂಡಲಗಿ ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸದರ ಅಭಿಯಾನದ ಕುರಿತು ಎಲ್ಲಾ ರೀತಿಯ ತಯಾರಿ ಮಾಡಿಕೊಂಡು ಸರಕಾರದ ಸುತ್ತೋಲೆಯಂತೆ ಅಗತ್ಯ ಕ್ರಮ ವಹಿಸಲು ಈ ಮೂಲಕ ಸೂಚಿಸಿದೆ. ಸಾರ್ವಜನಿಕರು ಈ ಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳಬೇಕು ಎಂದು
ತಹಶೀಲ್ದಾರ ಹಾಗೂ ತಾಲೂಕಾ ದಂಡಾಧಿಕಾರಿಗಳಾದ ಶ್ರೀಶೈಲ ಗುಡುಮೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ : ಮುರಿಗೆಪ್ಪ ಮಾಲಗಾರ

Latest articles

More like this