Homeಸುದ್ದಿಗಳುಮೊದಲು ಬಿಜೆಪಿ ಅಧ್ಯಕ್ಷ ಈಗ ಕಾಂಗ್ರೆಸ್ ಎಮ್ಎಲ್ ಸಿ ; BSSK ಪುನರ್ ಆರಂಭಕ್ಕೆ ಸಂಕಲ್ಪದ...

ಮೊದಲು ಬಿಜೆಪಿ ಅಧ್ಯಕ್ಷ ಈಗ ಕಾಂಗ್ರೆಸ್ ಎಮ್ಎಲ್ ಸಿ ; BSSK ಪುನರ್ ಆರಂಭಕ್ಕೆ ಸಂಕಲ್ಪದ ಪಾದಯಾತ್ರೆ! 

Published on

ಬೀದರ : ಬೀದರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಉಳಿಸುವ ಸಲುವಾಗಿ  ಮೊನ್ನೆ ಬಿಜೆಪಿ ಶಾಸಕ ಸಿದ್ದು ಪಾಟೀಲ ಪಾದಯಾತ್ರೆ ಮಾಡಿದ ಬೆನ್ನಲ್ಲೇ ..ಇವತ್ತು ಕಾಂಗ್ರೆಸ್ ಎಮ್ ಎಲ್ ಸಿ ಭೀಮರಾವ್ ಪಾಟೀಲ ಪಾದಯಾತ್ರೆ ಮೂಲಕ ಬಿಜೆಪಿ ಶಾಸಕರ ಸಿದ್ದು ಪಾಟೀಲ ಅವರಿಗೆ ತಿರುಗೇಟು ನೀಡಿದರು.

ಹುಮಾನಾಬಾದ ಕ್ಷೇತ್ರದಲ್ಲೀಗ ಪಾಟೀಲ ವರ್ಸಸ್ ಪಾಟೀಲ ರಾಜಕೀಯ ಪ್ರಾರಂಭ ಆಗಿದ್ದು.. ಒಬ್ಬರ ಮೇಲೆ ಒಬ್ಬರು ಆರೋಪ ಮಾಡಿಕೊಂಡಿದ್ದಾರೆ. ಬೀದರ ನಿಂದ ಹುಮಾನಾಬಾದ ಕಾಂಗ್ರೆಸ್ ಎಮ್ ಎಲ್ ಸಿ ಭೀಮರಾವ್ ಪಾಟೀಲ ಪಾದಯಾತ್ರೆ ದೇವರ ಸನ್ನಿಧಿಯಿಂದ ರೈತರ ಪರ ಸಂಕಲ್ಪ ಮಾಡಿ ಪಾದಯಾತ್ರೆ ಆರಂಭಿಸಿದ ಭೀಮರಾವ್ ಪಾಟೀಲ್!

ರೈತರ ಸಂಕಷ್ಟ ನಿವಾರಣೆ… BSSK ಪುನರುಜ್ಜೀವನಕ್ಕೆ ಒತ್ತಾಯ!

ಬರದ ಬೇಗೆಯಲ್ಲಿ ಅನ್ನದಾತನಿಗಾಗಿ ಹೆಜ್ಜೆ ಹಾಕಿದ ಭೀಮರಾವ್ ಪಾಟೀಲರು ಬರದ ಹೊಡೆತಕ್ಕೆ ಅನ್ನದಾತ ಕಂಗಾಲಾಗಿದ್ದಾನೆ…ಮಳೆ ಕೈಕೊಟ್ಟು ಬೆಳೆ ಕೈಕೊಟ್ಟಿರುವ ಈ ಸಂಕಷ್ಟದ ಸಮಯದಲ್ಲಿ, ರೈತರ ನೆರವಿಗೆ ನಿಲ್ಲುವಂತೆ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ನಡೆದಿದೆ ಎನ್ನುತ್ತ ಬೀದರ ಸಹಕಾರಿ ಸಕ್ಕರೆ ಕಾರ್ಖಾನೆ ಉಳಿಸಬೇಕು ಎಂದು ಹೋರಾಟಕ್ಕೆ ಇಳಿದರು.

ಬೀದರ್ ನಗರದ ಜನವಾಡ ರಸ್ತೆಯಲ್ಲಿರುವ ಕೇಶವ ಹನುಮಾನ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಅಲ್ಲಿಂದ ತೆಲಂಗಾಣದ ಜಹೀರಾಬಾದ್ ಸಮೀಪದ ಪ್ರಸಿದ್ಧ ರೆಜಂತಲ್ ಸಿದ್ಧಿವಿನಾಯಕ್ ದೇವಸ್ಥಾನದವರೆಗೆ ಕಾಲ್ನಡಿಗೆಯಲ್ಲಿ ತೆರಳುವ ಪಾದಯಾತ್ರೆಗೆ ಪಾಟೀಲ ಚಾಲನೆ ನೀಡಿದ್ದಾರೆ.

ವರದಿ : ನಂದಕುಮಾರ ಕರಂಜೆ, ಬೀದರ

Latest articles

More like this