ಚನ್ನಬಸಯ್ಯ ಗುಬ್ಬಿ ಅವರ ಬಣ್ಣದ ಬದುಕು ಬಹು ಸುಧೀರ್ಘವಾದುದು. ಮೊನ್ನೆ ಅವರು ಪೋನ್ ಮಾಡಿ ಬೆಂಗಳೂರಿನಲ್ಲಿ ಒಂದು ಪತ್ರಿಕೆಯಲ್ಲಿ ನಿಮ್ಮ ಲೇಖನ ಓದಿದೆ ಎಂದರು. ಅವರ ಪರಿಚಯ ಕೇಳಿದಾಗ ಹಿಂದೊಮ್ಮೆ ತುಮಕೂರಿನಲ್ಲಿ ಅವರನ್ನು ಭೇಟಿಯಾಗಿದ್ದು ನೆನಪಾಯಿತು. ನೆನಪಿಸಿದೆ ಅವರು ಮರೆತ್ತಿದ್ದರು. ನನಗೀಗ ವಯಸ್ಸು ನೂರಮೂರು ಒಬ್ಬಂಟಿ ಎಂದರು.
ತಮ್ಮ ಬದುಕಿನ ವಿಚಾರಗಳನ್ನು ತಿಳಿಸುತ್ತಲೇ ಅವರ ಪರಿಚಯದ ಕಿರುಹೊತ್ತಿಗೆ ಕಳಿಸಿದರು. ಚನ್ನಬಸಯ್ಯ ಅವರ ಹುಟ್ಟೂರು ಒಡೆಯರ ಮತ್ತಿಘಟ್ಟ. ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿಗೆ ಸೇರಿದ ಗ್ರಾಮ. ಊರ ಪಟೇಲರಾಗಿದ್ದ ಸಿದ್ಧರಾಮಯ್ಯ ಮತ್ತು ಲಕ್ಷಿö್ಮÃದೇವಮ್ಮ ದಂಪತಿಗಳ ಮಗನಾಗಿ ದಿ. ೬-೫-೧೯೨೩ರಂದು ಜನ್ಮ ತಾಳಿದರು. ಊರಿನ ಶಾಲೆಗೆ ೧ನೇ ತರಗತಿಗೆ ೧೯೨೯ರಲ್ಲಿ ಸೇರಿ ೩ಕ್ಕೆ ಓದು ಮುಗಿಸಿದರು. ೫ನೇ ವಯಸ್ಸಿನಲ್ಲಿ ಸ್ವಗ್ರಾಮದಲ್ಲಿ ನಡೆಯುತ್ತಿದ್ದ ಪೌರಾಣಿಕ ನಾಟಕಗಳ ತಾಲೀಮು ಪ್ರದರ್ಶನಗಳನ್ನು ನೋಡಿ ಪ್ರಭಾವಿತರಾಗಿ ಅದೇ ಗೀಳಿನಲ್ಲಿ ೧೧ನೇ ವಯಸ್ಸಿಗೆ ಊರು ತೊರೆದು ಉತ್ತರ ಕರ್ನಾಟಕದ ಕಡೆ ಹೋದರು. ಹೊಟ್ಟೆಪಾಡಿನ ಕೆಲಸ ಮಾಡುತ್ತಾ ನಾನಾ ಕಷ್ಟ ಅನುಭವಿಸಿ ಶ್ರೀ ಕುಮಾರ ವಿಜಯ ನಾಟ್ಯ ಸಂಘ, ಚಿತ್ತರಗಿ ನಾಟಕ ಕಂಪನಿ ಸೇರಿ ಅಲ್ಲಿ ನಟರಾದರು. ೧೯೮೧ರಲ್ಲಿ ತಮ್ಮದೇ ಅಮರೇಶ್ವರ ವಿಜಯ ನಾಟಕ ಮಂಡಳಿ ಸ್ಥಾಪಿಸಿ ೧೯೮೩ರಲ್ಲಿ ಸುರಪುರದ ರಂಗನಪೇಟೆಯಲ್ಲಿ ಕಂಪನಿ ಮುಂಗಾರು ಮಳೆಗೆ ಮುಳುಗಿತು.
ಆಗಿನ ಕಾಲಕ್ಕೆ ಆದ ನಷ್ಟ ಒಂದೂವರೆ ಲಕ್ಷ.
೧೯೯೧ರಿಂದ ಸೋವಿಯತ್ ಒಕ್ಕೂಟದಿಂದ ಪ್ರಚಾರವಾಗುತ್ತಿದ್ದ ಮಾಸಪತ್ರಿಕೆಗಳಲ್ಲಿ ಸುಭಾಷ್ ಚಂದ್ರಬೋಸರ ಬಗ್ಗೆ ಪ್ರಕಟವಾಗುತ್ತಿದ್ದ ಲೇಖನ ಓದಿ ಕಲ್ಕತ್ತಾಗೆ ಹೋಗಿ ಅವರ ಕುಟುಂಬ ದವರನ್ನು ಭೇಟಿಯಾಗಿ ಮಾಹಿತಿ ಪಡೆದು ನಂತರ ದೆಹಲಿಯಲ್ಲಿ ಅವರ ವಂಶಸ್ಥರಿAದ ಮಾಹಿತಿ ಪಡೆದು ರಚಿಸಿದ ನಾಟಕ ಭಾರತರತ್ನ ನೇತಾಜಿ ಸುಭಾಷ್ ಚಂದ್ರಬೋಸ್. ತುಮಕೂರು ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ದಿ. ೨೮-೧೨-೨೦೦೦ರಂದು ಪ್ರಥಮ ಪ್ರದರ್ಶನ ಕಂಡ ಈ ನಾಟಕ ನಂತರ ಬೇರೆ ಭಾಗಗಳಲ್ಲಿ ಹತ್ತು ಪ್ರದರ್ಶನ ಕಂಡಿತು. ಡಾ.ಪಾಟೀಲ್ ಪುಟ್ಟಪ್ಪನವರು ರಚಿಸಿದ್ದ ಹೊಸಮನಿ ಸಿದ್ಧಪ್ಪನವರ ಜೀವನ ಚರಿತ್ರೆಯನ್ನು ಆಧರಿಸಿ ಕ್ರಾಂತಿಕಾರಿ ಹೊಸಮನಿ ಸಿದ್ದಪ್ಪ ಎಂಬ ನಾಟಕ ರಚಿಸಿ ಪ್ರಯೋಗಿಸಿದ್ದಾರೆ.
ಆಗ ನನಗೆ ೨೩ ವಯಸ್ಸು. ಪ್ರಖ್ಯಾತ ಹಾಸ್ಯ ನಟ ಜಕ್ಕಲಿ ವೀರಯ್ಯಸ್ವಾಮಿಗಳ ಪರಿಚಯವಾಗಿ ಅವರು ಚಿತ್ತರಗಿ ಕಂಪನಿಗೆ ಸೇರಿಸಿದರು. ಗಂಗಾಧರಶಾಸ್ತಿçಗಳು ಆಶ್ರಯವಿತ್ತು ಅನ್ನ ನೆರಳಿತ್ತರು. ತಿಂಗಳಿಗೆ ೨೦ರೂ. ಸಂಬಳ. ಮೊದಲಿಗೆ ಗೇಟ್ ಕೀಪರ್ ಕೆಲಸ. ಕಂಪನಿಯ ಎಲ್ಲಾ ಕೆಲಸ ಮಾಡಿ ಪಾತ್ರ ಮಾಡುವ ಅವಕಾಶ ಒದಗಿಬಂತು. ಬಾಲಚಂದ್ರ ನಾಟಕದಲ್ಲಿ ಮೊದಲಿಗೆ ಅರಮನೆ ಸೇವಕನ ಪಾತ್ರ ಮಾಡಿದೆ. ಹಾಗೆ ಉತ್ತಮ ಪಾತ್ರಗಳು ದೊರೆತವು. ೧೬ ವರ್ಷ ಚಿತ್ತರಗಿ ಕಂಪನಿಯಲ್ಲಿದ್ದೆ. ನಾಡಿನ ಹಲವು ಜಿಲ್ಲೆಗಳಲ್ಲಿ ಕ್ಯಾಂಪ್ ಮಾಡುತ್ತಿದ್ದ ಕಂಪನಿ ಬಾಲಚಂದ್ರ, ಮಂಗಳಾ ನನ್ನ ಅತ್ತಿಗೆ, ದೇವರಿಗೆ ನೆನಪಿಲ್ಲ, ಸೌಭಾಗ್ಯ ಲಕ್ಷಿö್ಮ, ಕಾರಾಸ್ಥಾನ, ಪ್ರೇಮಜ್ಯೋತಿ, ಕಣ್ಣಿದ್ದರೂ ಬುದ್ಧಿ ಬೇಕು, ಕಿವುಡನ ಕಿತಾಪತಿ, ಜೀವನಜ್ಯೋತಿ, ಬಸವೇಶ್ವರ ನಾಟಕಗಳಲ್ಲಿ ಚನ್ನಬಸಯ್ಯ ಅವರು ಹಾಸ್ಯಗಾರ, ಖಳನಾಯಕ, ಪೋಷಕ ನಟ, ನಾಯಕನ ಪಾತ್ರ ಒಳಗೊಂಡು ನಿಭಾಯಿಸಿದರು. ಚಿತ್ತರಗಿ ಕಂಪನಿ ಬಿಟ್ಟು ನಂತರ ಜಮಖಂಡಿಯ ಗಜಾನನ ಸಂಗೀತ ನಾಟಕ ಮಂಡಲಿ ಸೇರಿದರು. ಊಟ ತಿಂಡಿ ವಸತಿಗೆ ಕೊರತೆ ಇರಲಿಲ್ಲ. ಆಗ ಚನ್ನಬಸಯ್ಯ ಅವರು ಮೈಸೂರು ಭಾಷೆಯಿಂದ ಧಾರವಾಡ ಭಾಷೆಗೆ ಬದಲಾಗಿದ್ದರು. ಕಂಪನಿ ಹೆಸರಾಂತ ನಾಟಕಗಳನ್ನು ಆಡುತ್ತಿತ್ತು. ಕೊಂಡು ತಂದ ಗಂಡ, ದೀಪಾವಳಿ, ಬೆಳ್ಳಿಚುಕ್ಕಿ, ಸತ್ಯನಾರಾಯಣ ಮಹಾತ್ಮೆ ನಾಟಕಗಳು ಜನತೆಗೆ ಮೋಡಿ ಮಾಡಿದ್ದವು. ಚನ್ನಬಸಯ್ಯ ಇವುಗಳಲ್ಲೆಲ್ಲಾ ಪಾತ್ರ ಮಾಡುತ್ತಿದ್ದರು. ಆರ್.ಡಿ.ಕಾಮತ್ ಅವರ ಟಿಪ್ಪುಸುಲ್ತಾನ್ ನಾಟಕದ ತಿರುಮಲರಾಯ, ಲಾರ್ಡ್ ಕಾರನ್ ವಾಲೀಸ್ ಪಾತ್ರ, ಕಂದಗಲ್ ಹನುಮಂತರಾಯರ ರಕ್ತರಾತ್ರಿ ನಾಟಕದ ಕರ್ಣನ ಪಾತ್ರ ಹೆಸರು ತಂದುಕೊಟ್ಟವು. ೧೯೬೩ರಲ್ಲಿ ಈ ಕಂಪನಿ ಬಿಟ್ಟರು.
ಉದರ ಪೋಷಣೆಗೆ ಕಲಾದೇವಿ ಆಶ್ರಯಿಸಬೇಕಿತ್ತು. ನಂತರ ೧೭ ವರ್ಷ ಕೆಲವು ನಾಟಕ ಕಂಪನಿಗಳಲ್ಲಿ ಸೇವೆ ಮಾಡಿದ್ದಿ ಇವುಗಳಲ್ಲಿ ಪಟ್ಟದಕಲ್ಲಿನ ಶಿವಪುತ್ರಯ್ಯಸ್ವಾಮಿ ಅವರ ಕಂಪನಿ, ಗೋಕಾಕ್ ವೀರಯ್ಯಸ್ವಾಮಿ ಅವರ ಕಂಪನಿ, ಚಿಕ್ಕಕೊಪ್ಪದ ನರಸಣ್ಣ ಅವರ ಕಂಪನಿಗಳು ಮುಖ್ಯವಾದವು. ನಾಟಕ ಕಲಾವಿದರೇ ಕಟ್ಟಿದ ಕಲಾವಿದರ ಕೂಟದಲ್ಲೂ ದುಡಿದರು. ತಮ್ಮ ಬದುಕಿನ ನಾಟಕದ ಗರಡಿಯಲ್ಲಿ ಕಲಾಮಲ್ಲರಾಗಿ ಮೆರೆದ ಇವರು ಚಿತ್ರನಟ ಡಿಕ್ಕಿಮಾಧವರಾವ್, ದಿನೇಶ್, ಗಂಗಾಧರ್, ಉದಯಕುಮಾರ್, ರೊಳ್ಳೆವೆಂಕಟಾಚಲಯ್ಯ, ಸುಧೀರ್, ಕಳಲೆ ದೊರೆ, ಕೆ.ಎಸ್.ಅಶ್ವಥ್, ವೈಶಾಲಿ, ವಿಜಯಕಲಾ, ಜಿ.ವಿ.ಶಾರದಾ, ರಾಧಾ, ರುಕ್ಮಿಣಿ, ಚಿಕ್ಕನಾಯಕನಹಳ್ಳಿ ನಾಗೇಶ್, ಹೆಚ್.ಟಿ.ಅರಸ್, ಮುಸುರಿ ಕೃಷ್ಣಮೂರ್ತಿ, ಜಿ.ವಿ.ಕೃಷ್ಣ ಇವರ ಜೊತೆ ನಟಿಸಿದ್ದನ್ನು ಸ್ಮರಿಸಿದರು. ಕಂಪನಿ ಕಲಾವಿದರು ಜಕ್ಕಲಿ ವೀರಬಸಯ್ಯ, ಜಾಲಹಳ್ಳಿ ವೀರಣ್ಣ, ಬೇವೂರ ಶಂಕರಯ್ಯ, ಯಮನೂರ ಹುಚ್ಚಯ್ಯಸ್ವಾಮಿ, ಮುಪ್ಪಯ್ಯಸ್ವಾಮಿ, ಗುಡದ್ ಸಾಬ್, ಪಟ್ಟದಕಲ್ಲು ಶಿವಪುತ್ರಯ್ಯ, ಕೆ.ಪ್ರಭಾಕರ್, ಬೇಬಿ, ಸರಸ್ವತಿ, ರೇಣುಕಮ್ಮ, ಅನುಸೂಯಮ್ಮ, ಜುಬೇದಬಾಯಿ ಸವಣೂರು, ಸಾಗರ ಶ್ರೀನಿವಾಸ, ಬಸವರಾಜ, ಮಲ್ಲಿಕಾರ್ಜುನ, ಚನ್ನಪ್ಪ ಪಡೇಸೂರ, ಹುಚ್ಚಯ್ಯಸ್ವಾಮಿ ಗಂಜಾಳು, ಶರಣಪ್ಪ ಕಮತಗಿ ಅವರನ್ನು ನೆನೆದರು. ಕಂಪನಿ ನಾಟಕಗಳಿಗೆ ಗ್ರಹಣ ಹಿಡಿದು ಹಳ್ಳಿ ನಗರಗಳಲ್ಲಿ ನೆಲೆ ನಿಂತು ನಾಟಕ ಕಲಿಸಿದರು. ೫೦ ನಾಟಕ ನಿರ್ದೇಶಿಸಿದ ಇವರು ಮಂಡ್ಯ, ಮೈಸೂರು, ತುಮಕೂರು, ಬೆಂಗಳೂರು ನಗರ ಗ್ರಾಮಾಂತರಗಳಲ್ಲಿ ನಾಟಕ ಕಲಿಸಿದ ಇವರಿಗೆ ೧೯೯೯ರಲ್ಲಿ ತುಮಕೂರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸರ್ಕಾರದ ೨೦೨೨-೨೩ನೇ ಸಾಲಿನ ಡಾ.ಗುಬ್ಬಿ ವೀರಣ್ಣ ಪ್ರಶಸ್ತಿ ಸಂದಿದೆ. ಹಲವಾರು ಸಂಘಸಂಸ್ಥೆಗಳು ಇವರನ್ನು ಗುರುತಿಸಿ ಸನ್ಮಾನಿಸಿವೆ.

ಗೊರೂರು ಅನಂತರಾಜು.
ಮೊ: ೯೪೪೯೪೬೨೮೭೯. ವಿಳಾಸ: ಹುಣಸಿನಕೆರೆ ಬಡಾವಣಿ, ೨೯ನೇ ವರ್ಡ್, ೩ ನೇ ಕ್ರಾಸ್, ಹಾಸನ