Homeಸುದ್ದಿಗಳು‘ಅಮ್ಮ ಎಂಬ ಕಡಲು’ ಕೃತಿಗೆ ‘ರಾಷ್ಟ್ರಕೂಟ ಸಾಹಿತ್ಯಶ್ರೀ’ ಗೌರವ

‘ಅಮ್ಮ ಎಂಬ ಕಡಲು’ ಕೃತಿಗೆ ‘ರಾಷ್ಟ್ರಕೂಟ ಸಾಹಿತ್ಯಶ್ರೀ’ ಗೌರವ

Published on

​ಹುನಗುಂದ: ತಾಲೂಕಿನ ಅಮೀನಗಡ ಪಟ್ಟಣದ ಉದಯವಾಣಿ ದಿನಪತ್ರಿಕೆಯ ವರದಿಗಾರ ಹಾಗೂ ಲೇಖಕ ಹಸನಡೋಂಗ್ರಿ ಎಚ್. ಬೇಪಾರಿ ಅವರ ‘ಅಮ್ಮ ಎಂಬ ಕಡಲು’ ಕಥಾಸಂಕಲನವು ಬೆಳಗಾವಿಯ ಹೊಂಬೆಳಕು ಸಂಘದ ಪ್ರತಿಷ್ಠಿತ “ರಾಷ್ಟ್ರಕೂಟ ಸಾಹಿತ್ಯಶ್ರೀ” ಪ್ರಶಸ್ತಿಗೆ ಆಯ್ಕೆಯಾಗಿದೆ.

​ಬೆಳಗಾವಿಯ ಹೊಂಬೆಳಕು ಸಂಘವು ಕಳೆದ 26 ವರ್ಷಗಳಿಂದ ಶ್ರೇಷ್ಠ ಕೃತಿಗಳನ್ನು ಗುರುತಿಸಿ ಈ ಗೌರವವನ್ನು ನೀಡುತ್ತಾ ಬಂದಿದೆ. ಅದರಂತೆ 2025ರಲ್ಲಿ ಪ್ರಕಟಗೊಂಡ ನನ್ನ ‘ಅಮ್ಮ ಎಂಬ ಕಡಲು’ ಕಥಾಸಂಕಲನವು ಈ ಗೌರವಕ್ಕೆ ಪಾತ್ರವಾಗಿದೆ ಎಂದು ಲೇಖಕ ಬೇಪಾರಿ ಪತ್ರಿಕೆಗೆ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

​ಅಭಿಪ್ರಾಯ:
“ಇದು ನನ್ನೊಬ್ಬನ ಗೆಲುವಲ್ಲ; ಅಮ್ಮನ ಮಮತೆಯನ್ನು ಅಕ್ಷರಗಳಲ್ಲಿ ಕಂಡು ಅಪ್ಪಿಕೊಂಡ ನಿಮ್ಮೆಲ್ಲರ ಪ್ರೀತಿಯ ಫಲ. ಅಮ್ಮನ ಅಲೆಗಳು ನಿಮ್ಮ ಮನದ ತೀರ ತಲುಪಿದವೇ ನನಗೆ ಸಂದ ದೊಡ್ಡ ಪುರಸ್ಕಾರ. ಈ ಕೃತಿಯನ್ನು ಗುರುತಿಸಿದ ಆಯ್ಕೆ ಸಮಿತಿ ಹಾಗೂ ಸಂಘದ ಎಲ್ಲರಿಗೂ ಕೃತಜ್ಞತೆಗಳು. ನಿಮ್ಮ ಪ್ರೀತಿ, ಆಶೀರ್ವಾದ ನನ್ನ ಬರಹಕ್ಕೆ ಸದಾ ದೀಪವಾಗಿರಲಿ” ಎಂದು ಅವರು ಪತ್ರಿಕೆಗೆ ತಿಳಿಸಿದ್ದಾರೆ.

Latest articles

More like this