Homeಸುದ್ದಿಗಳುಬೆಳ್ಳಂ ಬೆಳಿಗ್ಗೆ ಭ್ರಷ್ಟ ಅಧಿಕಾರಿಗೆ ಲೋಕಾಯುಕ್ತ ಶಾಕ್

ಬೆಳ್ಳಂ ಬೆಳಿಗ್ಗೆ ಭ್ರಷ್ಟ ಅಧಿಕಾರಿಗೆ ಲೋಕಾಯುಕ್ತ ಶಾಕ್

Published on

ಬೀದರ – ಲೋಕಾಯುಕ್ತ ಅಧಿಕಾರಿಗಳು ಬೆಳಿಗ್ಗೆ ಬೆಳಿಗ್ಗೆಯೇ ಭ್ರಷ್ಟ ಅಧಿಕಾರಿಗೆ ಶಾಕ್ ನೀಡಿದ್ದು ಏಕಕಾಲಕ್ಕೆ ನಿವಾಸ ಸೇರಿದಂತೆ ಆರು ಕಡೆ ದಾಳಿ ಮಾಡಿದ್ದಾರೆ.

ಅಕ್ರಮ ಆಸ್ತಿಗಳಿಕೆ ಆರೋಪ ಹಿನ್ನೆಲೆಯಲ್ಲಿ ಬೀದರನ ಬ್ರಿಮ್ಸ್ ಆಸ್ಪತ್ರೆಯ ಪ್ರಿನ್ಸಿಪಾಲ್ ರಾಜ್ ಕುಮಾರ್ ಶಿವಕುಮಾರ್ ಮಾಳಗೆ ಎಂಬುವರ ನಿವಾಸದ ಮೇಲೆ ದಾಳಿ ಮಾಡಿದ್ದಾರೆ.

ಬೀದರ್ ನಗರದ ಗುರುನಗರದಲ್ಲಿರುವ ಮಾಳಗೆ ಅವರ ನಿವಾಸ ಅಲ್ಲದೆ ಕಾಲೇಜು, ಶೆಡ್, ಕಚೇರಿ ಸೇರಿದಂತೆ ಐದು ಕಡೆ ಹಾಗೂ ಬೆಂಗಳೂರಿನ ಮಾಕಳಿ ನಿವಾಸದ ಮೇಲೂ ದಾಳಿ ಮಾಡಿ ನಿವಾಸದಲ್ಲಿ ದಾಖಲೆಗಳ ತೀವ್ರ ಪರಿಶೀಲನೆ ಮಾಡುತ್ತಿದ್ದಾರೆ.

ಲೋಕಾಯುಕ್ತ ಎಸ್ಪಿ ಸಿದ್ಧರಾಜು ಮಾರ್ಗದರ್ಶನದಲ್ಲಿ ಡಿಎಸ್ಪಿ ಹನುಮಂತರಾಯ, ಬಾಬಾಸಾಹೇಬ್ ಸಂತೋಷ ರಾಥೋಡ್, ಉದ್ದಂಡಪ್ಪ, ಅರ್ಜುನ ಹಾಗ ತಂಡ ದಾಳಿ ನಡೆಸಿದೆ.

ವರದಿ : ನಂದಕುಮಾರ ಕರಂಜೆ, ಬೀದರ

Latest articles

More like this