Homeಸುದ್ದಿಗಳುಚಳಿ..ಚಳಿ..ತಾಳೇನೂ ಈ ಚಳಿಯಾ.! ಬೆಟಗೇರಿ ಮತ್ತು ಸುತ್ತಲಿನ ಹಳ್ಳಿಗಳಲ್ಲಿ ತೀವ್ರಗೊಂಡ ಚಳಿ

ಚಳಿ..ಚಳಿ..ತಾಳೇನೂ ಈ ಚಳಿಯಾ.! ಬೆಟಗೇರಿ ಮತ್ತು ಸುತ್ತಲಿನ ಹಳ್ಳಿಗಳಲ್ಲಿ ತೀವ್ರಗೊಂಡ ಚಳಿ

Published on

ಬೆಟಗೇರಿ:ಕಳೆದ ನಾಲ್ಕೈದು ದಿನಗಳಿಂದ ವಿಪರೀತ ಮೈಕೊರೆಯುವ ಚುಮು ಚುಮು ಚಳಿ(ಥಂಡಿ) ಹೆಚ್ಚಾದ ಪರಿಣಾಮ ಗೋಕಾಕ ತಾಲೂಕಿನ ಬೆಟಗೇರಿ ಮತ್ತು ಸುತ್ತಲಿನ ಹಳ್ಳಿಗಳಲ್ಲಿ ಜನ ಜೀವನವನ್ನು ತತ್ತರಗೊಳಿಸುತ್ತಿದೆ.

ಬೆಟಗೇರಿ ಮತ್ತು ಸುತ್ತಲಿನ ಹಳ್ಳಿಗಳಲ್ಲಿ ನ.೧೬ರಂದು ಸಂಜೆ ೮:೩೦ಕ್ಕೆ ಸುಮಾರು ೧೮ ಡಿಗ್ರಿ ಸೆಲ್ಸಿಯಸ್ ಮಂಗಳವಾರ ಬೆಳಗ್ಗೆ ೬ ಗಂಟೆಗೆ ೨೦ ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾದ ಪ್ರಮಾಣದ ಚಳಿ ಇತ್ತು.

ಸ್ಥಳೀಯ ಮತ್ತು ಸುತ್ತಲಿನ ಹಳ್ಳಿಗಳಲ್ಲಿ ನ.೧೬ ರಂದು ಬೆಳಗ್ಗೆ ೫:೩೦ ಗಂಟೆಗೆ ಉರಿ(ಬೆಂಕಿ) ಹಚ್ಚಿಕೊಂಡು ತಮ್ಮ ದೇಹದ ಅಂಗಗಳನ್ನು ಕಾಯಿಸಿಕೊಳ್ಳುತ್ತಿರುವದು, ಸ್ಥಳೀಯ ವೃದ್ಧರು, ಮಕ್ಕಳು, ಯುವಕರು, ಮಹಿಳೆಯರು ಸೇರಿದಂತೆ ಎಲ್ಲಾ ಸಾರ್ವಜನಿಕರು ಬೆಚ್ಚಗಿನ ಉಡುಪುಗಳನ್ನು ಧರಿಸಿ ಓಡಾಡುವ ದೃಶ್ಯ ಸಾಮಾನ್ಯವಾಗಿತ್ತು.

ಸ್ಥಳೀಯ ಯುವಕರು, ವೃದ್ಧರು ಗ್ರಾಮದ ಅಲ್ಲಲ್ಲಿ ತ್ಯಾಜ್ಯ ಕಾಗದ, ಕಬ್ಬಿನ ರವದಿ, ಮರದ ಸಣ್ಣ ತುಂಡುಗಳ ಸೇರಿಸಿ ಉರಿ(ಬೆಂಕಿ)ಹಚ್ಚಿಕೊAಡು ಉರಿ ಝಳದಿಂದ ತಮ್ಮ ದೇಹದ ಅಂಗಗಳನ್ನು ಕಾಯಿಸಿ(ಬೆಚ್ಚಗೆ ಮಾಡಿ)ಕೊಳ್ಳುತ್ತಿರುವದು ಕಂಡು ಬಂತು. ಕಳೆದ ನಾಲ್ಕೈದು ದಿನದಿಂದ ಸಂಜೆ ೬:೩೦ ಗಂಟೆಗೆ ಮತ್ತು ಬೆಳಗ್ಗೆ ೫ ಗಂಟೆಗೆ ಎದ್ದು ಕೊಡಲೇ ಈ ವಿಪರೀತ ಚಳಿ ಬಿಟ್ಟು ನಮ್ಮನ್ನು ಮುದ್ದಿ ಮಾಡುತ್ತಿದೆ.

ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಥಂಡಿ(ಚಳಿ)ಗೆ ಮುಂಜಾನೆ ಮತ್ತು ಸಂಜೆ ಹೊತು ಮನೆಯಿಂದ  ಹೊರಗೆ ಬರಲು ಆಗುತ್ತಿಲ್ಲ ಹೀಗೆ ಈಗ ಚಳಿಯಾದರೆ ನಾವು ಹೇಂಗ್ ಕೆಲಸ ಮಾಡುವುದು ಅಂಬುವುದು ತಿಳಿದಂಗ ಆಗೈತಿ ಅಂತಾ ಕಳೆದ ಐದಾರು ದಿನ ಸೇರಿದಂತೆ ನ.೧೬ ಮತ್ತು ನ.೧೭ರಂದು ಸಂಜೆ ೭ ಗಂಟೆಗೆ ಚುಮು ಚುಮು ಚಳಿ ಕುರಿತು ಸ್ಥಳೀಯ ಕೂಲಿ ಕಾರ್ಮಿಕ ಕಬ್ಬು ಕಟಾವು ಗ್ಯಾಂಗ್ ಮುಖಂಡ ಭೀಮಶಿ ಮೇಲ್ಮಟ್ಟಿ ಹಾಗೂ ಸಂಗಡಿಗರು ಹೇಳುವ ಮಾತಿದು.

“ಕಳೆದ ವರ್ಷದ ಈ ದಿನಗಳಲ್ಲಿ ಇಷ್ಟೂಂದು ಚಳಿ ಇದ್ದಿರಲಿಲ್ಲ, ಪ್ರಸಕ್ತ ವರ್ಷದ ಈ ದಿನಗಳಲ್ಲಿ ಹೀಗೆ ಚಳಿಯಿದೆ. ಮುಂಜಾನೆ ಎದ್ದು ಕೆಲಸ ಮಾಡುವ ದುಸ್ಥಿತಿ ಎದುರಾಗಿದೆ” 

ಪುಂಡಲೀಕ ಚಿನ್ನನವರ. ಕೂಲಿ ಕಾರ್ಮಿಕ. 

ವರದಿ : ಅಡಿವೇಶ ಮುಧೋಳ, ಬೆಟಗೇರಿ

Latest articles

More like this