Homeಸುದ್ದಿಗಳುಕವನಕವನ : ರಂಗು ಹೋಲಿ

ಕವನ : ರಂಗು ಹೋಲಿ

Published on

ರಂಗು ಹೋಲಿ

ಸಪ್ತವರ್ಣ ಚಿಮ್ಮುವ ಚೆಲುವಹಬ್ಬ ಹೋಲಿ
ಹೃನ್ಮನದ ಚಿತ್ತಾರಗಳ ರಂಗೇರಿದ ರಂಗೋಲಿ
ಆತಂಕ ನೀಗಿ ಶಾಂತಿ, ಸೌಹಾರ್ದ ಮರಳಲಿ
ಪ್ರೀತಿಯ ಭಾವಬಣ್ಣದ ಹೂಗಳು ಅರಳಲಿ

ಮಕ್ಕಳಿಗೆಲ್ಲ ಹರ್ಷೊತ್ಸಾಹದ ಓಕುಳಿಯಾಟ
ಯುವಕರಿಗಾಗಿದೆ ಮೋಜಿನ ರಂಗಿನೆರಚಾಟ
ರಾಗದಿ ಬೆಸೆದಿರುವ ಕಾಮನಬಿಲ್ಲಿನ ಮಾಟ
ವರ್ಣಮಯದಿ ತುಂಬಿದೆ ಸೃಷ್ಟಿಯ ನೋಟ

ತಾಮಸಿಕ ಇಚ್ಛೆ, ದುರಾಚಾರಗಳಾಗಲಿ ದಹನ
ಅದರ ಸಂಕೇತವಾಗಿ ಭಸ್ಮವಾಗುವ ರಾವಣ
ಮನದಿ ತುಂಬಿರಲಿ ಸುವಿಚಾರಗಳ ಹೂರಣ
ಎಂದಿಗು ನುಡಿಯಂತಿರಲಿ ನಡೆಯ ಆವರಣ

ಸ್ಮಿತಾ ಪಾವಟೆ.

Latest articles

More like this