Homeಸುದ್ದಿಗಳುಕವನಕವನ : ನಂಬಿಕೆಯ ಬಿಂಬ

ಕವನ : ನಂಬಿಕೆಯ ಬಿಂಬ

Published on

ನಂಬಿಕೆಯ ಬಿಂಬ

ಕಾಣದ ಅದ್ಭುತ ಶಕ್ತಿಯೇ ನಂಬಿಕೆ
ಪಡೆದು ಕಳೆದುಕೊಳ್ಳಬಾರದು ಜೋಕೆ
ಗಳಿಸಲದನು ನಾವಾದಾಗ ಯೋಗ್ಯ
ದೊರಕುವುದಾಗಲೆ ಸಕಲ ಸೌಭಾಗ್ಯ

ಬದುಕಿಗದೆ ಅಡಿಪಾಯ
ಉಳಿಸಿಕೊಳ್ಳದಿರೆ ಅಪಾಯ
ಮಾನವ ಕುಲಕದು ಮೂಲಾಧಾರ
ಆಡಿಸಿ, ನೋಡುವ ಆ ಸೂತ್ರಧಾರ

ಬಾಳಿನ ನಾಣ್ಯಕೆ ಮುಖಗಳೆರಡು
ಪ್ರೀತಿ, ನಂಬಿಕೆ ಜೋಡು
ಸಾಗುತಿರಲಿ ಜೀವನ ಮಾಗಿ
ಸ್ಮರಿಸುತಾ ದೇವಗೆ ಶರಣಾಗಿ

ನನ್ನ ನಂಬಿಕೆಯ ಬಿಂಬ ನೀನು
ನಂಬಿಹೆ ನಿನ್ನನು, ಕೈ ಬಿಡದಿರೆನ್ನನು
ಸರ್ವಕಾರ್ಯದ ಶಕ್ತಿಯ ಮೂಲ
ನೀ ನಡೆಸಿದಂತೆ ನಡೆವೆವು ನಾವೆಲ್ಲ

ಅರಿತಿರುವೆ ನೀ ಬೇಕುಬೇಡಗಳನು
ಕೇಳೆನೆಂದು ನಾ ನಿನ್ನ ಇನ್ನೇನನು
ಭವಶರಧಿಯ ತೊಡಕಿಲ್ಲದೆ ದಾಟಿಸು
ಅಂಬಿಗನು ನೀನಾಗಿ ದಡವ ಸೇರಿಸು

ಸ್ಮಿತಾ ಪಾವಟೆ
ಬೆಂಗಳೂರು

Latest articles

More like this