ಬೀದರ – ಜಿಲ್ಲೆಯಾದ್ಯಂತ ಭೀಕರ ಬರಗಾಲದ ಹಿನ್ನೆಲೆಯಲ್ಲಿ ಮಾಂಜ್ರಾ ನದು, ಕೆರೆಗಳು, ಬಾವಿಗಳೆಲ್ಲ ನೀರಿಲ್ಲದೆ ಖಾಲಿಯಾಗಿದ್ದ ಕಾರಣ ಗಣೇಶ ವಿಸರ್ಜನೆಗೆ ಗ್ರಹಣ ತಟ್ಟಿದಂತಾಗಿದೆ.
ಹೀಗಾಗಿ ಬಿಡಿಎ ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತದಿಂದ ಗಣೇಶ ವಿಸರ್ಜನೆಗಾಗಿಯೇ ಕೃತಕ ನೀರಿನ ಹೊಂಡಗಳನ್ನು ನಿರ್ಮಾಣ ಮಾಡಲಾಗಿದೆ.
೨ ಕೋಟಿಗೂ ಅಧಿಕ ಹಣದಲ್ಲಿ ಕೃತಕ ನೀರಿನ ಹೊಂಡಗಳನ್ನು ಬೀದರ ಹೊರವಲಯದ ಹಳ್ಳದಕೆರೆಯ ಬಳಿ, ಬೀದರ ತಾಲೂಕಿನ ಕಂದಗೋಳ ಸೇರಿದಂತೆ ಹಲವು ಕಡೆ ಹೊಂಡ ನಿರ್ಮಾಣ ಮಾಡಿ ಬೋರವೆಲ್ ಗಳ ಮೂಲಕ ನೀರು ತುಂಬಿಸಿ ಗಣೇಶ ವಿಸರ್ಜನೆಗೆ ವ್ಯವಸ್ಥೆ ಮಾಡಲಾಗಿದೆ.
ವರದಿ : ನಂದಕುಮಾರ ಕರಂಜೆ, ಬೀದರ