ಮನೆ ಮನೆ ಕವಿಗೋಷ್ಠಿ ಸಾಹಿತ್ಯ ಸಂಘಟನೆಯ 345ನೇ ತಿಂಗಳ ಮನೆ ಮನೆ ಕವಿಗೋಷ್ಠಿ ಕಾರ್ಯಕ್ರಮವನ್ನು ದಿನಾಂಕ 6–9-2026ರ ಭಾನುವಾರ ಮಧ್ಯಾಹ್ನ 3.00 ಗಂಟೆಗೆ ಸೆಂಟ್ರಲ್ ಕಾಮರ್ಸ್ ಪ್ರಥಮ ದರ್ಜೆ ಕಾಲೇಜು, ಸಹ್ಯಾದ್ರಿ ಸರ್ಕಲ್, ಮಹಾಲಕ್ಷ್ಮಿ ಸ್ವೀಟ್ಸ್ ಮೇಲ್ಭಾಗ, ಹಾಸನ ಇಲ್ಲಿ ಆಯೋಜಿಸಲಾಗಿದೆ.
ಕವಿಗೋಷ್ಠಿಗೆ ಆಗಮಿಸುವ ಕವಿಗಳಿಂದ ಕವನ ವಾಚನ ಹಾಗೂ ವಾಚನಗೊಂಡ ಕವನಗಳ ವಿಮರ್ಶೆ ಇರುವುದು. ಕಾರ್ಯಕ್ರಮದಲ್ಲಿ ಹಾಸನದ ಹಿರಿಯ ಸಾಹಿತಿ ರಾಜಣ್ಣ ರಾಶಿ ಅವರ ಬಿಂಬ ಪ್ರತಿಬಿಂಬ ಎಂಬ ಕವನ ಸಂಕಲನ ಕೃತಿ ಕುರಿತು ಸಾಹಿತಿ ಗೊರೂರು ಅನಂತರಾಜು ಮಾತನಾಡುವರು.
ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಶಂಕರಪ್ಪ ಹುಲ್ಲಂಗಾಲ (ರಾಜಣ್ಣರಾಶಿ) ಮನೆ ನಂ.2550, ಇಂದು ಮೆಡಿಕಲ್ ಎದುರು, ಅರಳಿಪೇಟೆ , ಹಾಸನ ಇವರು ನಡೆಸಿಕೊಡುವರು. ಕಾರ್ಯಕ್ರಮಕ್ಕೆ ಕವಿಗಳು, ಸಾಹಿತ್ಯಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕಾಗಿ ಮನೆ ಮನೆ ಕವಿಗೋಷ್ಠಿ ಸಂಚಾಲಕಿ ಶ್ರೀಮತಿ ಕಾಮಾಕ್ಷಿ ಕೃಷ್ಣಮೂರ್ತಿ ಕೋರಿದ್ದಾರೆ.