Homeಸುದ್ದಿಗಳುರಣಬಿಸಿಲಿಗೆ ತತ್ತರಿಸಿದ ಗಡಿ ಜಿಲ್ಲೆ ಬೀದರ್ ಜನ

ರಣಬಿಸಿಲಿಗೆ ತತ್ತರಿಸಿದ ಗಡಿ ಜಿಲ್ಲೆ ಬೀದರ್ ಜನ

Published on

ಬೀದರ : ರಣಬಿಸಿಲ ಹೊಡೆತಕ್ಕೆ ಅಕ್ಷರಶಃ ಗಡಿ ಜಿಲ್ಲೆ ಬೀದರ್ ತತ್ತರಿಸಿದೆ, ಜಿಲ್ಲೆಯಲ್ಲಿ ದಾಖಲೆಯ 45° ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಬಸವಕಲ್ಯಾಣ, ಔರಾದ, ಭಾಲ್ಕಿ, ಹುಮನಾಬಾದ್, ಹಾಗೂ ಬೀದರ್ ಗ್ರಾಮಾಂತರ ಪ್ರದೇಶಗಳಲ್ಲಿ 44° ಯಿಂದ 45° ಸೆಲ್ಸಿಯಸ್ ಗರಿಷ್ಟ ಉಷ್ಣಾಂಶ ದಾಖಲಾಗಿದೆ.

ಇದರಿಂದ ಜನ ಮನೆಯಿಂದ ಹೊರಬರಲು ಹಿಂದೇಟು ಹಾಕಿದ್ದು, ಬಿಸಿಲಿನಿಂದ ರಕ್ಷಣೆ ಪಡೆಯಲು ಟೋಪಿ, ಹಾಗೂ ಕೊಡೆ ಮೊರೆ ಹೋಗ್ತಿದ್ದಾರೆ. ಜೊತೆಗೆ ತಂಪು ಪಾನೀಯ, ಕಬ್ಬಿನ ಜ್ಯೂಸ್, ಕಲ್ಲಂಗಡಿ, ಎಳನೀರು, ನಿಂಬೆಹಣ್ಣು ಶರಬತ್, ಐಸ್‌ಕ್ರಿಂ ಅಂಗಡಿಗಳು ಹೌಸ್‌ಫುಲ್ ಆಗಿದ್ದು, ಏಪ್ರಿಲ್ 15 ರಿಂದ ಏಪ್ರಿಲ್ 17 ರವರೆಗೆ ‘ಹೀಟ್ ವೇವ್ ಆರೆಂಜ್’ ಅಲರ್ಟ್ ಎಂದು ಹವಾಮಾನ ಇಲಾಖೆ ಘೋಷಿಸಿದೆ.

ಬಿಸಿಲಿನಿಂದ ರಕ್ಷಿಸಿಕೊಳ್ಳಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಲಧಿಕಾರಿಗಳು  ಜಿಲ್ಲೆಯ ಜನರಿಗೆ ಸೂಚನೆ ನೀಡಿದ್ದಾರೆ.

Latest articles

More like this