Homeಸುದ್ದಿಗಳುಕನ್ನಡದಲ್ಲಿ ನಾಮಫಲಕಗಳು ಇರಬೇಕು: ಜಯ ಕರ್ನಾಟಕ ಸಂಘಟನೆ         

ಕನ್ನಡದಲ್ಲಿ ನಾಮಫಲಕಗಳು ಇರಬೇಕು: ಜಯ ಕರ್ನಾಟಕ ಸಂಘಟನೆ         

Published on

   ಮೂಡಲಗಿ:- ಪಟ್ಟಣದಲ್ಲಿ ಹಲವಾರು ಅಂಗಡಿ ಮುಂಗಟ್ಟುಗಳು, ಆಸ್ಪತ್ರೆ, ಸಂಘ ಸಂಸ್ಥೆಗಳು, ಶಾಲಾ ಕಾಲೇಜು ಸೇರಿದಂತೆ ಅನೇಕ ಸಾರ್ವಜನಿಕ ಸ್ಥಳಗಳಲ್ಲಿ ನಾಮಫಲಕಗಳು ಮೇಲ್ಭಾಗದಲ್ಲಿ ಕನ್ನಡವನ್ನು ಹೊಂದಿಲ್ಲ ಕಾರಣ ಅನ್ಯ ಭಾಷೆಗೆ ಮೊದಲ ಆದ್ಯತೆ ನೀಡದೇ ಶೇ 60 ರಷ್ಟು ದಪ್ಪ ಅಕ್ಷರಗಳಲ್ಲಿ ಕನ್ನಡ ನಾಮಫಲಕಗಳನ್ನು ಕಡ್ಡಾಯವಾಗಿ ಅಳವಡಿಸಿ ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ಪುರಸಭೆ ಮುಖ್ಯಾಧಿಕಾರಿ ತುಕಾರಾಮ ಮಾದರ ಅವರಿಗೆ ಮನವಿ ಸಲ್ಲಿಸಿದರು.
    ಕರ್ನಾಟಕ ಸರ್ಕಾರ ಈಗಾಗಲೇ ಶೇಕಡಾ ಅರವತ್ತರಷ್ಟು ಕನ್ನಡ ಭಾಷೆ ಹೊಂದಿದ ನಾಮಫಲಕ ಕಡ್ಡಾಯವಾಗಿ ಇರಲೇಬೇಕು ಎಂದು ಆದೇಶವಿದ್ದರೂ ಕೂಡ ಅನ್ಯ ಭಾಷೆಯ ನಾಮ ಫಲಕಗಳನ್ನು ಬಳಸುತ್ತಿದ್ದು ಈ ಮುಂಚೆ ಸಂಘಟನೆಯಿಂದ ಪಟ್ಟಣದ ಅಂಗಡಿ ಮುಂಗಟ್ಟುಗಾರರಿಗೆ ತಿಳಿ ಹೇಳಲಾಗಿತ್ತು ಆದರೂ ಇಲ್ಲಿಯವರೆಗೂ ಕನ್ನಡ ಭಾಷೆಗೆ ಅಷ್ಟೇನೂ ಮಾನ್ಯತೆ ನೀಡದೇ ಕನ್ನಡ ಭಾಷೆಗೆ ಅವಮಾನಿಸುವಂತೆ ಮೇಲ್ಭಾಗದಲ್ಲಿ ಹೊಂದಿರುವ ಅನ್ಯ ಭಾಷೆಯ ನಾಮ ಫಲಕಗಳನ್ನು ತೆರವುಗೊಳಿಸಬೇಕು ಎಂದು ಮನವಿಯಲ್ಲಿ ವಿನಂತಿಸಲಾಗಿದೆ.
      ಈ ಸಂಧರ್ಭದಲ್ಲಿ ತಾಲೂಕಾ ಅಧ್ಯಕ್ಷ ಸುನಿಲ್ ಗಸ್ತಿ, ಉಪಾಧ್ಯಕ್ಷ ಸುಭಾಷ ವಾಘಮೋಡೆ ಘಟಕ ಉಪಾಧ್ಯಕ್ಷ ಹನುಮಂತ ಪೂಜಾರಿ, ಸದಸ್ಯರಾದ ಬಸವರಾಜ ಗಸ್ತಿ, ಸುನೀಲ್ ಕವಟಕೊಪ್ಪ ಮುಖಂಡರಾದ ಈರಪ್ಪ ಢವಳೇಶ್ವರ, ನಂಜುಂಡಿ ಸರ್ವಿ, ಸುರೇಶ ಸಣ್ಣಕ್ಕಿ, ಅಸ್ಲಂ ಪೆಂಡಾರಿ, ರಾಜು ಪೈಲ್ವಾನ್ ಸೇರಿದಂತೆ ಅನೇಕರು ಇದ್ದರು.

Latest articles

More like this