ಬೆಳಗಾವಿ – ಹೊಂಬೆಳಕು ಸಾoಸ್ಕೃತಿಕ ಸಂಘ(ರಿ) ಬೆಳಗಾವಿ ಸಂಸ್ಥೆಯು ತನ್ನ ರಜತ ಮಹೋತ್ಸವದ ನಿಮಿತ್ತ ಪ್ರತಿ ವರ್ಷದಂತೆ 2025 ನೇ ಸಾಲಿನಲ್ಲಿ ಪ್ರಕಟಗೊಂಡ ಕವನ, ಕಥೆ, ಕಾದಂಬರಿ, ಪ್ರಬಂಧ ಮತ್ತು ಮಕ್ಕಳ ಸಾಹಿತ್ಯ ಕೃತಿಗಳಿಗೆ “ರಾಷ್ಟ್ರಕೂಟ ಸಾಹಿತ್ಯಶ್ರೀ ” ಪ್ರಶಸ್ತಿಯನ್ನು ನೀಡಲುದ್ದೇಶಿಸಿದೆ.
ಆಸಕ್ತ ಸಾಹಿತಿಗಳು 2025 ನೇ ಸಾಲಿನಲ್ಲಿ ಪ್ರಥಮ ಆವೃತ್ತಿಯಾಗಿ ಪ್ರಕಟಣೆಗೊಂಡ ಕೃತಿಗಳನ್ನು ತ್ರಿಪ್ರತಿಗಳಲ್ಲಿ ಆರ್. ಬಿ. ಬನಶಂಕರಿ, ಕಾರ್ಯದರ್ಶಿಗಳು, ಹೊಂಬೆಳಕು ಸಾಂಸ್ಕೃತಿಕ ಸಂಘ (ರಿ), # 77, “ಶ್ರೀ ಶಾಕಾಂಬರಿ” ಸಂಕಲ್ಪ ಲೇಔಟ್, ಟೀಚರ್ಸ್ ಕಾಲೋನಿ, ವಿಜಯನಗರ ಬೆಳಗಾವಿ -591108 ಈ ವಿಳಾಸಕ್ಕೆ ದಿನಾಂಕ : 15-05-2026 ರೊಳಗಾಗಿ ಕಳುಹಿಸಿ ಕೊಡಲು ಸಂಘದ ಅಧ್ಯಕ್ಷರಾದ ಸ. ರಾ. ಸುಳಕೂಡೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಪ್ರೊ. ಶಶಿಕಲಾ ಪಾವಸೆ, ಉಪಾಧ್ಯಕ್ಷರು, ಮೊಬೈಲ್ ಸಂಖ್ಯೆ. 94818 54236, ಆರ್. ಬಿ. ಬನಶಂಕರಿ, ಮೊಬೈಲ್ ಸಂಖ್ಯೆ. 9449479456 ಇವರನ್ನು ಕೋರಲಾಗಿದೆ.