ಹಳ್ಳೂರ – ಪುರಾಣ ಪ್ರವಚನ ಅಧ್ಯಾತ್ಮ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಶ್ರದ್ಧಾ ಭಕ್ತಿಯಿಂದ ಭಾಗವಹಿಸಿದರೆ ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯುತ್ತದೆ. ಶ್ರೇಷ್ಠ ವಾದ ಸಿದ್ದಾರೂಢ ಸಂಪ್ರದಾಯದಲ್ಲಿರುವವರು ಸಾರಾಯಿ ಮಾದಕ ವಸ್ತುಗಳನ್ನು ಸೇವಿಸಿ ಅನ್ಯಾಯ ಅಧರ್ಮದ ದಾರಿಯಲ್ಲಿ ನಡೆದು ಶ್ರೇಷ್ಠವಾದ ಮಾನವ ಜನ್ಮ ಹಾನಿ ಮಾಡಿಕೊಳ್ಳಬೇಡಿರೆಂದು ನಾಗರಾಳದ ಜ್ಞಾನೇಶ್ವರ ಮಹಾಸ್ವಾಮಿಗಳು ಹೇಳಿದರು.
ಅವರು ಗ್ರಾಮದ ಶ್ರೀ ಸಿದ್ದಾರೂಢ ಮಠದಲ್ಲಿ ನಡೆದ ಸದ್ಗುರು ಸಿದ್ದಾರೂಢ ಪರಮಾರ್ಥ ಮಹೋತ್ಸವ ಕಾರ್ಯಕ್ರಮ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿ ಯುವಕರು ತಂದೆ ತಾಯಿ ಗುರು ಹಿರಿಯರಿಗೆ ಗೌರವ ನೀಡಿ ಮಾನವೀಯ ಗುಣಗಳನ್ನು ಅಳವಡಿಸಿಕೊಳ್ಳಬೇಕು ಧರ್ಮ ನಮ್ಮಲ್ಲಿದ್ದರೆ ದೇವರು ನಮ್ಮನ್ನು ರಕ್ಷಣೆ ಮಾಡುತ್ತಾನೆ. ಕಾವಿ ಬಟ್ಟೆ ಧರಿಸಿದರೆ ಮಹಾತ್ಮರಾಗಲು ಸಾಧ್ಯವಿಲ್ಲ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಸಕಲ ಜೀವರಾಶಿಗಳನ್ನು ಉದ್ದಾರ ಮಾಡುವರು ಮಾತ್ರ ಮಹಾತ್ಮರಾಗುತ್ತಾರೆಂದು ಹೇಳಿದರು.
ಉಪಾರಟ್ಟಿ ನಾಗೇಶ್ವರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ ಭೂಮಿಯ ಮೇಲೆ ಪಾಪ ಹೆಚ್ಚಾದಾಗ ಸಿದ್ದಾರೂಢ ರಂಥ ಮಹಾತ್ಮರು ಅವತಾರ ತಾಳಿ ಬಂದು ಜಗತ್ತು ಉದ್ದಾರ ಮಾಡುತ್ತಾರೆ. ತ್ರೇತಾಯುಗದಲ್ಲಿ ಪೂರ್ಣ ದರ್ಮವಿತ್ತು ದ್ವಾಪರ ಯುಗದಲ್ಲಿ ಅರ್ದ ದಷ್ಟು ಜನರಲ್ಲಿ ದರ್ಮವಿತ್ತು ಕಲಿಯುಗದಲ್ಲಿ 25% ಜನರಲ್ಲಿ ಮಾತ್ರ ಧರ್ಮ ಪಾಲಿಸುತ್ತಿದ್ದಾರೆ.ಅದಕ್ಕಾಗಿ ಭೂಮಿಯ ಮೇಲೆ ಪಾಪ ಹೆಚ್ಚಾಗಿ ಸರಿಯಾದ ಸಮಯಕ್ಕೆ ಮಳೆ ಬೆಳೆ ಆಗುತ್ತಿಲ್ಲ ವೆಂದು ಹೇಳಿದರು. ನಾಗರಾಳ ಅನಂತಾನಂದ ಶರಣರು, ತಿಕೋಟಾ ಶಿವಾನಂದ ಸ್ವಾಮಿಗಳು ಆಶೀರ್ವಚನ ನೀಡಿದರು.
ಕಾರ್ಯಕ್ರಮವನ್ನು ಮುರಿಗೆಪ್ಪ ಮಾಲಗಾರ ಸ್ವಾಗತಿಸಿ, ಸಿದ್ದು ದುರದುಂಡಿ ನಿರೂಪಿಸಿ, ಡಾ ಮಹಾಲಿಂಗಯ್ಯ ವಿಭೂತಿ ವಂದಿಸಿದರು. ಕಾರ್ಯಕ್ರಮವು ಗ್ರಾಮದ ಗುರು ಹಿರಿಯರ ಸಮ್ಮುಖದಲ್ಲಿ ನೆರವೇರಿತು.