Homeಸುದ್ದಿಗಳುಡಾ. ಗೊರೂರು ಸಾಹಿತ್ಯ ಪ್ರತಿಷ್ಠಾನ ನೋಂದಣಿ.

ಡಾ. ಗೊರೂರು ಸಾಹಿತ್ಯ ಪ್ರತಿಷ್ಠಾನ ನೋಂದಣಿ.

Published on

ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ನಾಡಿನ ಪ್ರಖ್ಯಾತ ಸಾಹಿತಿಗಳು ಮತ್ತು ಸ್ವಾತಂತ್ರ್ಯ ಹೋರಾಟಗಾರರು ಆಗಿದ್ದರು. ಇಂತಹ ಮಹನೀಯರ ಹೆಸರಿನಲ್ಲಿ ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಸಾಹಿತ್ಯ ಪ್ರತಿಷ್ಠಾನ ಟ್ರಸ್ಟ್ ನೋಂದಣಿ ಮಾಡಲಾಗಿದೆ.

ಟ್ರಸ್ಟ್ ಉದ್ದೇಶ ಡಾ. ಗೊರೂರರ ಸಾಹಿತ್ಯ, ದೇಶಸೇವೆ, ಅವರ ಗಾಂಧಿ ತತ್ವಗಳು, ಇನ್ನೂ ಅನೇಕ ಆಯಾಮಗಳಲ್ಲಿ ಅವರ ಚಿಂತನೆಗಳು, ಸಾಧನೆಗಳನ್ನು ಸಾಹಿತ್ಯ ವಿಚಾರ ಸಂಕಿರಣಗಳನ್ನು ನಾಟಕ, ಜಾನಪದ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಆಯೋಜಿಸುವ ಆಶಯದಿಂದ ಟ್ರಸ್ಟ್ ನ್ನು ರಚಿಸಲಾಗಿದೆ ಎಂದು ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಮಗಳು ವಾಸಂತಿಮೂರ್ತಿ ಪತ್ರಿಕಾ ಪ್ರಕಟಣಿಯಲ್ಲಿ ತಿಳಿಸಿದ್ದಾರೆ.

Latest articles

More like this