Homeಸುದ್ದಿಗಳು12 ಸಾವಿರ ಸಂಬಳದ ಬಸವರಾಜ್ ಕನ್ನಾಳೆ ಸಾಮ್ರಾಜ್ಯದ ಆಸ್ತಿ ಕೋಟಿ ಕೋಟಿ ಮೌಲ್ಯದ್ದು !

12 ಸಾವಿರ ಸಂಬಳದ ಬಸವರಾಜ್ ಕನ್ನಾಳೆ ಸಾಮ್ರಾಜ್ಯದ ಆಸ್ತಿ ಕೋಟಿ ಕೋಟಿ ಮೌಲ್ಯದ್ದು !

Published on

ಬೀದರ್‌ನಲ್ಲಿ ಕೆಪಿಎಸ್‌ಸಿ ಅಕ್ರಮದ ಆರೋಪಿ 12 ಸಾವಿರ ಸಂಬಳದಿಂದ ಕೋಟಿ ಕೋಟಿ ಸಂಪತ್ತು ! ಬಂಧಿತ ಬಸವರಾಜ್ ಕನ್ನಾಳೆ ಕರಾಳ ಮುಖ ಅನಾವರಣ

ಬೀದರ : ಗಡಿ ಜಿಲ್ಲೆ ಬೀದರ ಮತ್ತೆ ರಾಜ್ಯಾದ್ಯಂತ ಸದ್ದು ಮಾಡುತ್ತಿದೆ ಕರ್ನಾಟಕ ಲೋಕಸೇವಾ ಆಯೋಗದ (KPSC) ಮರು ಮೌಲ್ಯಮಾಪನ ಹಾಗೂ ನೇಮಕಾತಿ ಅಕ್ರಮ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದ್ದು, ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಡೊಣಗಾಪೂರು ಗ್ರಾಮದ ನಿವಾಸಿ ಬಿಜೆಪಿ ಹಾಗು ಕಾಂಗ್ರೆಸ್ ಮುಖಂಡರ ಜೊತೆ ಫೋಟೋ ತೆಗದುಕೊಂಡಿದ ಬಸವರಾಜ್ ಕನ್ನಾಳೆ ಇಡೀ ರಾಜಕೀಯ ನಾಯಕರಿಗೆ ಸಂಕಟವನ್ನು ತಂದಿಟ್ಟಿದ್ದಾನೆ.

ಬಸವರಾಜ್ ಕನ್ನಾಳೆ ಬೀದರ ಉಸ್ತುವಾರಿ ಸಚಿವರ ಹಿಡಿದು ಎಲ್ಲಾ ನಾಯಕರ ಜೊತೆಗೆ ಫೋಟೋ ತೆಗೆಸಿಕೊಂಡಿದ್ದು ಈಗ ರಾಜಕೀಯಲ್ಲಿ ಅಲ್ಲೊಲ ಕಲ್ಲೋಲ ಮಾಡಿದ ಕಿಂಗ್ ಪಿನ್ ಕನ್ನಾಳೆ ಬಂಧನ ಹಿನ್ನೆಲೆಯಲ್ಲಿ ಈಗ ರಾಜ್ಯ ಮತ್ತು ಜಿಲ್ಲೆಯ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ.

​ಕೇವಲ ಕೆಲವೇ ವರ್ಷಗಳ ಹಿಂದೆ ತಿಂಗಳಿಗೆ 12 ರಿಂದ 14 ಸಾವಿರ ರೂಪಾಯಿ ಸಂಬಳಕ್ಕೆ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ, ಕೆಲವೇ ವರ್ಷಗಳಲ್ಲಿ ಕೋಟಿ ಕೋಟಿ ರೂಪಾಯಿ ಆಸ್ತಿ-ಪಾಸ್ತಿ ಹಾಗೂ ಅಕ್ರಮ ಸಂಪತ್ತು ಗಳಿಸಿದ್ದು ಹೇಗೆ ಎಂಬ ಪ್ರಶ್ನೆ ಏಳುತ್ತದೆ ಇದರ ಹಿಂದಿನ ಯಾರು ಇರಬಹುದು ಬಸವರಾಜ್ ಕನ್ನಾಳೆಯ Godfather ಯಾರು ಎಂಬುದು ಈಗ ತನಿಖಾ ಸಂಸ್ಥೆಗಳನ್ನೂ ಬೆಚ್ಚಿಬೀಳಿಸಲಿದೆ.

​12 ಸಾವಿರ ಸಂಬಳದಿಂದ ಕೋಟಿ ಕೋಟಿ ಸಾಮ್ರಾಜ್ಯ!

​ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದ ಬಸವರಾಜ್ ಕನ್ನಾಳೆ, ಬಿಜೆಪಿ ಶಾಸಕರೊಬ್ಬರ ಶಿಫಾರಸಿನ ಮೇರೆಗೆ ಬೀದರ್ ದಕ್ಷಿಣ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅವರ ಬಳಿ 2021ರಲ್ಲಿ ಪಿಎ (ಖಾಸಗಿ ಕಾರ್ಯದರ್ಶಿ) ಆಗಿ ಸೇರಿಕೊಂಡಿದ್ದ. ತಿಂಗಳಿಗೆ ಕೇವಲ 12-14 ಸಾವಿರ ರೂಪಾಯಿ ವೇತನ ಪಡೆಯುತ್ತಿದ್ದ ಈತ ಎಂದು ಶಾಸಕರು ಹೇಳಿಕೆ

ಶಾಸಕರ ಫೋಟೋ ವೈರಲ್ ಬೆನ್ನಲ್ಲೇ ಶಾಸಕ ಬೆಲ್ದಾಳೆ ರಿಯಾಕ್ಷನ್ ನೀಡಿದ್ದು ಸಚಿವ ಈಶ್ವರ್ ಖಂಡ್ರೆ, ಡಿಸಿಎಂ ಪರಮೇಶ್ವರ್ ಜೊತೆ ಇರುವ ಫೋಟೋ ಕೂಡ ಇವೆ
ಬಸವರಾಜ್ ಕನ್ನಾಳೆ ನನ್ನ ಜೊತೆ ಆತ್ಮಿಯವಾಗಿ ಇದ್ದ ಆದ್ರೆ ಈ ವವ್ಯಹಾರಕ್ಕೆ ನಮಗೆ ಯಾವುದೇ ಸಂಬಂಧ ಇಲ್ಲ. 2021ರಲ್ಲಿ ಒಂದು ವರ್ಷ ನನ್ನ ಹತ್ತಿರ ಪಿಎ ಆಗಿ ಕೆಲಸ ಮಾಡಿದ್ದಾನೆ ಎಂದು ಬೆಲ್ದಾಳೆ ಹೇಳಿದ್ದಾರೆ.

ಈಗ ತನಿಖೆ ನಡೆಯುತ್ತಿದೆ ತಪ್ಪಿತಸ್ಥರ ವಿರುದ್ದ ಕ್ರಮ ಆಗುತ್ತದೆ. ಸಿಐಡಿ, ಇಡಿ ತನಿಖೆ ಮಾಡುತ್ತಿದೆ ಸತ್ಯ ಹೊರಗೆ ಬರಲಿದೆ. ಕೆಪಿಎಸ್‌ಸಿ ಅಕ್ರಮ ಜಾಲದಲ್ಲಿ ಶಾಮೀಲಾಗಿ ಕೆಲವೇ ವರ್ಷಗಳಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ಆಸ್ತಿ ಸಂಪಾದಿಸಿದ್ದಾನೆ ಎಂಬ ಆರೋಪಗಳು ಕೇಳಿಬಂದಿವೆ.

12 ಸಾವಿರದ ಕೆಲಸಗಾರ ಕೋಟ್ಯಧಿಪತಿಯಾಗಿದ್ದು ಹೇಗೆ ?  ಈ ಅಕ್ರಮದ ಹಿಂದಿರುವ ಪ್ರಭಾವಿ ವ್ಯಕ್ತಿ ಯಾರು ಇರಬಹುದು  ಎಂಬುದು ಈಗ ತನಿಖೆ ಯಿಂದ ಗೊತ್ತಾಗಬೇಕಾಗಿದೆ

ಕನ್ನಳೆ ಟ್ರಾವೆಲ್ಸ್ ..ಬಸ್,  ಭಾಗ್ಯವಂತಿ ಡೈರಿ ಪಾರ್ಮಹೌಸ್,  ಬೆಂಗಳೂರಿ ನಲ್ಲಿ ಐಶಾರಾಮಿ ಮನೆ, ಭಾಲ್ಕಿ ಲೆಕ್ಚರ್ ಕಾಲೊನಿ ಯಲ್ಲಿ ಮನೆ, ಸ್ವತಃ ಊರಿನಲ್ಲಿ ಮನೆ, ಫಾರಿನ್ ಪ್ರವಾಸ, ತಂದೆಗೆ ತಿರುಗಾಡಲು ಇನ್ನೊವ ಗಾಡಿ, ಇಷ್ಟೊಂದು ದುಡ್ಡು ಹೇಗೆ ಬಂತು ಬಸವರಾಜ್ ಕನ್ನಳೆ ಹತ್ತಿರ ಬಂತೆಂಬುದು, ಇಡಿ ಸಿಐಡಿ ಅಧಿಕಾರಿ ತನಿಖೆ ಯಿಂದ ಬಹಿರಂಗವಾಗಬೇಕಾಗಿದೆ

ವರದಿ : ನಂದಕುಮಾರ ಕರಂಜೆ, ಬೀದರ

Latest articles

More like this