ಸಿಂದಗಿ : ಪ್ರತಿಯೊಬ್ಬರಿಗೂ ಧರ್ಮ ಪ್ರಜ್ಞೆ ಮುಖ್ಯ ಎಂದು
ಉಜ್ಜಯಿನಿ ಶ್ರೀ ಸದ್ಧರ್ಮಪೀಠದ ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ್ವರ ಶ್ರೀ 1008 ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ನುಡಿದರು.
ತಾಲ್ಲೂಕಿನ ಕನ್ನೊಳ್ಳಿ ಹಿರೇಮಠದಲ್ಲಿ ಜಗದ್ಗುರು ಶ್ರೀ ದಾರುಕಾಚಾರ್ಯರ ನೂತನ ರಥೋತ್ಸವದ ಉದ್ಘಾಟನೆ ಹಾಗೂ ಲಿಂ ಪೂಜ್ಯ ಶ್ರೀ ಷ .ಬ್ರ. ಮರುಳಾರಾಧ್ಯ ಶಿವಾಚಾರ್ಯರ 112 ನೆಯ ಜಯಂತ್ಸುತ್ಸವ ನಿಮಿತ್ತವಾಗಿ ಶತಮಾನದ ಶಿವಯೋಗಿ ಶ್ರೀ ಮ.ಘ.ಚ. ಮರುಳಾರಾಧ್ಯ ಶಿವಾಚಾರ್ಯರ ಮಹಾಪುರಾಣ ಜನಜಾಗೃತಿ ಧರ್ಮಸಭೆ ಪಾವನ ಸಾನಿಧ್ಯವಹಿಸಿ ಆಶೀರ್ವದಿಸಿ ಮಾತನಾಡಿ ಧರ್ಮದ ಕಾರ್ಯದಲ್ಲಿ ಭಕ್ತರು ಪಾಲ್ಗೊಂಡು ಗುರುವಿನ ಸನ್ಮಾರ್ಗದಲ್ಲಿ ನಡೆಯಬೇಕು. ಮಕ್ಕಳಿಗೆ ವಿದ್ಯೆಯೊಂದಿಗೆ ಸಂಸ್ಕಾರ ಸಂಸ್ಕೃತಿ ಕಲಿಸುವದು ಮುಖ್ಯವಾಗಿದೆ .ಈ ಸಮಾರಂಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಿರುವ ಕಾರ್ಯ ಉತ್ತಮವಾಗಿದೆ ಎಂದರು.
ಅಫಜಲಪುರ ಹಿರೇಮಠದ ಶ್ರೀ ಷ ಬ್ರ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ಸಭೆ ಅಧ್ಯಕ್ಷತೆವಹಿಸಿ ಮಾತನಾಡಿ, ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮ ಸಂಸ್ಕಾರ ನೀಡುವುದು ಅವರ ಭವಿಷ್ಯದ ವ್ಯಕ್ತಿತ್ವ ರೂಪಿಸುವುದು ಅತ್ಯಗತ್ಯ. ಮನೆಯೇ ಮೊದಲ ಪಾಠಶಾಲೆ ಎಂಬಂತೆ, ಪೋಷಕರು ಪ್ರೀತಿ, ಪ್ರಾಮಾಣಿಕತೆ, ಗೌರವ, ಶಿಸ್ತು, ಮತ್ತು ಧಾರ್ಮಿಕ ಮೌಲ್ಯಗಳನ್ನು ಕೃತಿಯ ಮೂಲಕ ಕಲಿಸಬೇಕು. ಬಾಲ್ಯದಲ್ಲಿ ಬಿತ್ತಿದ ಗಂಧದಂತಹ ಸುಸಂಸ್ಕಾರಗಳು ಮಗುವನ್ನು ಉನ್ನತ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದರು.
ಯರಡೋಣಿ ಗ್ರಾಮದ ಅಮರೇಶ ಶಾಸ್ತ್ರೀಗಳು ಪ್ರವಚನ ನೀಡಿ ಮಾತನಾಡಿ ಬಾಲ್ಯದಲ್ಲೇ ಮಕ್ಕಳಿಗೆ ಸಂಸ್ಕಾರ ಮೂಡಿಸಬೇಕು ಎಂದರು.
ವೇದಿಕೆ ಮೇಲೆ ಬೋರಗಿ -ಪುರದಾಳ ವಿಶ್ವರಾಧ್ಯಮಠದ ಶ್ರೀ ಶ್ರೋ ಬ್ರ ತಪೋರತ್ನಂ ಮಹಾಲಿಂಗೇಶ್ವರ ಮಹಾಸ್ವಾಮಿಗಳು.ಜಾಲಹಳ್ಳಿ ಶ್ರೀ ಷ ಬ್ರ ವಿದ್ಯಾಮಾನ್ಯ ಜಗದಾರಾಧ್ಯ ಜಯಶಾಂತಲಿಂಗ ಶಿವಾಚಾರ್ಯರು .ಗುಂಡಕನಾಳ ಹಿರೇಮಠದ ಶ್ರೀ ಷ ಬ್ರ ಗುರುಲಿಂಗ ಶಿವಾಚಾರ್ಯರು .ಕನ್ನೊಳ್ಳಿ ಹಿರೇಮಠದ ಶ್ರೀ ಷ ಬ್ರ ಸಿದ್ಧಲಿಂಗ ಶಿವಾಚಾರ್ಯರು .ಓತಿಹಾಳ ಗ್ರಾಮದ ಮಲ್ಲನಗೌಡ ಪಾಟೀಲ .ರವಿಗೌಡ ಪಾಟೀಲ ರೇವಣಸಿದ್ದ ಗುಳೇದಗುಡ್ಡ . ಸಂತ ಸೇವಲಾಲರು ಇದ್ದರು.
ಶಿಕ್ಷಕ ಮಕ್ಕಳ ಸಾಹಿತಿ ಬಸವರಾಜ ಅಗಸರ, ಸಾಹಿತಿ ಚಂದ್ರಕಾಂತ ಬಿರಾದಾರ, ಮುಖ್ಯ ಶಿಕ್ಷಕ ಸಂಗಯ್ಯ ಗಚ್ಚಿನಮಠ. ಕನ್ನೊಳ್ಳಿ ಹಿರೇಮಠದ ಶ್ರೀ ಸರಸ್ವತಿ ವಿದ್ಯಾನಿಕೇತನ ಪ್ರೌಢ ಶಾಲೆ ಹಾಗೂ ಮಾತೋಶ್ರೀ ಬಸಲಿಂಗಮ್ಮ ಬಾಳಪ್ಪ ಭೂಸನೂರ ಕಲಾ ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಗೆ ಹಾಗೂ ಉಪನ್ಯಾಸಕರಿಗೆ ಶ್ರೀಗಳು ಸನ್ಮಾನಿಸಿ ಗೌರವಿಸಿದರು.
ಸಂಗೀತ ಶಿಕ್ಷಕ ರೇಣುಕ ಗವಾಯಿಗಳು ಕೆರುಟಗಿ ಮಹಾಂತೇಶ ಕಾಳಗಿ ಜೇವರ್ಗಿ ಸಂಗೀತ ಸೇವೆ ಮಾಡಿದರು.
ಕುಮಾರಿ ಪೂಜಾ ನಂ ಹಿರೇಮಠ ನಿರೂಪಿಸಿದರು.