ಬೀದರ – ೨೦೧೭-೧೮ ರಲ್ಲಿ ನಕಲಿ ಬಿಲ್ ಸೃಷ್ಟಿಸಿ ಸುಮಾರು ೪೫ ಕೋಟಿ ಅವ್ಯವಹಾರ ಎಸಗಿದ ಆರೋಪದ ಮೇಲೆ ಬೀದರ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಆರು ಜನರನ್ನು ಲೋಕಾಯುಕ್ತರು ಬಂಧಿಸಿದ್ದಾರೆ.
ಮೂವರು ಎಂಟರ್ ಪ್ರೈಸಿಸ್ ಮಾಲೀಕರು ಹಾಗೂ ಮೂವರು ಅಧಿಕಾರಿಗಳಾಗಿದ್ದಾರೆ. ಉಪ ಕುಲಪತಿ ಎಚ್ ಡಿ ನಾರಾಯಣಸ್ವಾಮಿ, ಹಣಕಾಸು ನಿಯಂತ್ರಣಾಧಿಕಾರಿ ಮೃತ್ಯುಂಜಯ ಹಿರೇಮಠ ಹಾಗೂ ಕೆ ಎಲ್ ಸುರೇಶ ಅಧಿಕಾರಿಗಳಾದರೆ, ರಾಮನಗೌಡ, ಮಂಜನಾಥ , ಬೋಪಣ್ಣ ಇತರೆ ಮೂವರು ಬಂಧಿತರು
ಸದ್ಯ ಆರೋಪಿಗಳನ್ನು ಕೋರ್ಟಿಗೆ ಹಾಜರುಪಡಿಸಲಾಗಿದೆ. ಮುಂದಿನ ತನಿಖೆ ನಡೆಯುತ್ತಿದೆ.
ವರದಿ : ನಂದಕುಮಾರ ಕರಂಜೆ, ಬೀದರ