Homeಸುದ್ದಿಗಳುಜಾನಪದ ಸಾಹಿತ್ಯವು ನಾಡಿನ ಜೀವನಾಡಿ:ರಮೇಶ ಬಿರಾದಾರ

ಜಾನಪದ ಸಾಹಿತ್ಯವು ನಾಡಿನ ಜೀವನಾಡಿ:ರಮೇಶ ಬಿರಾದಾರ

Published on

ಮೂಡಲಗಿ:-ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಜ್ಞಾನದೀಪ್ತಿ ಫೌಂಡೇಶನ್ಸ್, ಮೂಡಲಗಿ ಇವುಗಳ ಸಹಯೋಗದಲ್ಲಿ ಐವತ್ತೊಂದನೆಯ ಬೆಳದಿಂಗಳ ಸಾಹಿತ್ಯ “ಚಿಂತನ ಮಂಥನ” ಕಾರ್ಯಕ್ರಮ ಜರುಗಿತು.
ಉಪನ್ಯಾಸಕರಾಗಿ ಆಗಮಿಸಿದ್ದ  ರಮೇಶ ಬಿರಾದಾರ ಅವರು ಮಾತನಾಡುತ್ತಾ ಜಾನಪದ ಸಾಹಿತ್ಯವು ನಾಡಿನ ಜನರ ಜೀವನಾಡಿ ಮತ್ತು ಸಂಸ್ಕೃತಿಯ ಕನ್ನಡಿ. ಲಿಖಿತ ರೂಪದಲ್ಲಿಲ್ಲದಿದ್ದರೂ ಬಾಯಿಂದ ಬಾಯಿಗೆ ತಲೆಮಾರುಗಳಿಂದ ಹರಿದು ಬಂದಿರುವ ಈ ಸಾಹಿತ್ಯವು ನಮ್ಮ ಮಣ್ಣಿನ ಅಪ್ಪಟ ಸೌರಭವನ್ನು ಉಳಿಸಿಕೊಂಡಿದೆ. ಆದರೆ ಇಂದು ಕಾಲ ಉರುಳಿದಂತೆ ಜಾನಪದ ಸಾಹಿತ್ಯದ ಸ್ವರೂಪ, ಪ್ರಾಮುಖ್ಯತೆ ಮತ್ತು ಅಸ್ತಿತ್ವದಲ್ಲಿ ಭಾರಿ ಬದಲಾವಣೆಗಳಾಗಿವೆ ಎಂದು ಹೇಳಿದರು.
  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಚಾರ್ಯ  ಎಸ್. ಡಿ.  ತಳವಾರ ಹಳೆಯ ದಿನಗಳಲ್ಲಿ ಜಾನಪದ ಸಾಹಿತ್ಯ ಎಂಬುದು ಕೇವಲ ಮನರಂಜನೆಯಾಗಿರಲಿಲ್ಲ, ಅದು ಜನರ ದೈನಂದಿನ ಜೀವನದ ಉಸಿರಾಗಿತ್ತು. ಜಾನಪದ ಸಾಹಿತ್ಯವು ಅಂದು ಹಳೆಯ ಜನರ ಅಜ್ಞಾತ ಸೃಷ್ಟಿಯಾಗಿ ಅವರ ಸುಖ ದುಃಖಗಳ ಒಡನಾಡಿಯಾಗಿತ್ತು .ಇಂದು ಅದು ನಮ್ಮ ಆಸ್ಮಿತೆಯನ್ನು ನೆನಪಿಸುವ ಐತಿಹಾಸಿಕ ಮತ್ತು ಸಂಸ್ಕೃತಿಕ ಆಸ್ತಿಯಾಗಿದೆ. ನಮ್ಮ ಸಾಂಸ್ಕೃತಿಕ ಬೇರುಗಳನ್ನು ಗಟ್ಟಿಯಾಗಿಟ್ಟುಕೊಳ್ಳಲು ಜಾನಪದ ಸಾಹಿತ್ಯವನ್ನು ಕೇವಲ ವೇದಿಕೆಗಳಿಗೆ ಸೀಮಿತಗೊಳಿಸದೆ ನಮ್ಮ ಮನಸ್ಸುಗಳಿಗೆ ಜೀವಂತವಾಗಿಡುವ ಕೆಲಸಗಳನ್ನು ಮಾಡುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಶ್ಲಾಘನೀಯವಾಗಿದೆ ಎಂದು ಬಣ್ಣಿಸಿದರು.
  ವೇದಿಕೆಯ ಮೇಲೆ ಕಸಾಪ ಅಧ್ಯಕ್ಷ ಡಾ. ಸಂಜಯ ಶಿಂದಿಹಟ್ಟಿ,  ಸಂಗಮೇಶ ಗುಜಗೊಂಡ, ಮಹಾದೇವ ಜಿಡ್ಡಿಮನಿ, ಬಿ. ಎ. ನಂದಿ, ಎ. ಜೆ. ಶರಣಾರ್ಥಿ, ಮಾವಿನಹಂಡಿ, ವ್ಯಾಪಾರಿ, ಸುರೇಶ ಲಂಕೆಪ್ಪನವರ, ಶಿವರಾಜ ಕಾಂಬಳೆ,  ಬಿ. ವೈ. ಶಿವಾಪುರ, ಅಯ್ಯನಗೌಡರ್ ,ಶೈಲಜಾ ಬಡಿಗೇರ, ಗೋದಾವರಿ ದೇಶಪಾಂಡೆ,ಬಾಲೇಶ ತುಬಾಕಿ ಉಪಸ್ಥಿತರಿದ್ದರು.
             ಶಿಕ್ಷಕ ಆರ್. ಎಮ್.ಕಾಂಬಳೆ ಪ್ರಾರ್ಥನೆಯನ್ನು, ಕಸಾಪ ಗೌರವ ಕಾರ್ಯದರ್ಶಿ ಬಿ. ಆರ್. ತರಕಾರ ಸ್ವಾಗತಿಸಿ ಮತ್ತು ಪ್ರಾಸ್ತಾವಿಕ ನುಡಿಗಳನ್ನಾಡಿದರು.

Latest articles

More like this