Homeಸುದ್ದಿಗಳುಮಹಾಪುರುಷರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕು - ಶಾಸಕ ಮನಗೂಳಿ

ಮಹಾಪುರುಷರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕು – ಶಾಸಕ ಮನಗೂಳಿ

Published on

ಸಿಂದಗಿ; ಜಗತ್ತಿನಲ್ಲಿ ಅನೇಕ ಜನ ಹುಟ್ಟುತ್ತಾರೆ ಸಾಯುತ್ತಾರೆ ಆದರೆ ಕೆಲವರು ಸತ್ತರು ಜನರ ಮಧ್ಯದಲ್ಲಿ ಬದುಕುತ್ತಾರೆ ಅಂತಹ ಮಹಾನ್ ಸಾಧಕರ ಜಯಂತಿ ಮತ್ತು ಪುಣ್ಯ ತಿಥಿಗಳನ್ನು ಆಚರಣೆ ಮಾಡಿಕೊಂಡು ಆದರ್ಶ ಪ್ರಾಯರಾಗುತ್ತಾರೆ ಅವರ ತತ್ವಾದರ್ಶಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು ಮಹಾಪುರುಷರ ಜಯಂತಿ ಆಚರಿಸಿದಕ್ಕೂ ಸಾರ್ಥಕವಾಗುತ್ತದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ಪಟ್ಟಣದ ಬಸ್ ಡಿಪೋದಲ್ಲಿ ಎಸ್‌ಸಿ,ಎಸ್‌ಟಿ ನೌಕರರ ಸಂಘದವತಿಯಿಂದ ಹಮ್ಮಿಕೊಂಡಿದ್ದ ಡಾ ಬಿ.ಆರ್.ಅಂಬೇಡ್ಕರರ ೧೩೫ನೇ ಜಯಂತಿಯನ್ನು ಉದ್ಘಾಟಿಸಿ, ಮಾತನಾಡಿ, ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ ಜಯಂತಿಯನ್ನು ಪಕ್ಷಾತೀತವಾಗಿ ಎಲ್ಲರು ಆಚರಣೆ ಮಾಡಿದ್ದು ಸ್ವಾಗತಾರ್ಹ. ಅವರ ಚಿಂತನೆಗಳು ಮುಂದಿನ ಯುವ ಪಿಳಿಗೆಗೆ ರವಾನೆ ಆಗಬೇಕಾದರೆ ಹೆಚ್ಚು ಹೆಚ್ಚು ಗ್ರಂಥಾಲಯಗಳು ತೆರೆಯುವ ಮೂಲಕ ಅವರ ತತ್ವಗಳು ಬಿತ್ತಬೇಕಾಗಿದೆ ಎಂದರು.

ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ವೈ.ಸಿ.ಮಯೂರ ಮಾತನಾಡಿ, ಶೋಷಿತ ಸಮುದಾಯದಲ್ಲಿ ಹುಟ್ಟಿ, ಸಮಾಜದಲ್ಲಿ ಆಳವಾಗಿ ಬೇರೂರಿದ್ದ ಅಸ್ಪೃಶ್ಯತೆಯ ವಿರುದ್ದ ಬಹುದೊಡ್ಡ ಕ್ರಾಂತಿಕಾರಿ ಚಳವಳಿ ಆರಂಭಿಸಿದ್ದಲ್ಲದೇ ಸಮಾಜದಲ್ಲಿನ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಒದಗಿಸಲು ಹಗಲು ರಾತ್ರಿ ಶ್ರಮಿಸಿ ಮನುಕುಲ ಒಂದೇ ಎಂಬ ಆಶಯದೊಂದಿಗೆ ವಿಶ್ವದ ಅತಿದೊಡ್ಡ ಸಂವಿಧಾನ ರಚನೆ ಮಾಡುವ ಮೂಲಕ ಸರ್ವ ಜನರ ಒಳಿತಿಗಾಗಿ ಜನಿಸಿದ ಮಹಾನ್ ಸಂತ ಡಾ.ಬಾಬಾಸಾಹೇಬ ಅಂಬೇಡ್ಕರರು. ಸಂವಿಧಾನ ಓದಿದರೆ ಬಾಬಾಸಾಹೇಬ ಅಂಬೇಡ್ಕರ ಅವರು ಅರ್ಥವಾಗುತ್ತಾರೆ. ಜಾತಿ, ಧರ್ಮಗಳಾಚೆ ಮಾನವ ಧರ್ಮ ನಿರ್ಮಿಸಬೇಕಾಗಿದೆ. ಶರಣರು, ಸಂತರು ಮತ್ತು ಧಾರ್ಶನಿಕರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಹೋಗಬೇಕು. ಆ ಮೂಲಕ ವರ್ಗರಹಿತ, ಜಾತಿ ರಹಿತ ಸಮಾಜ ಕಟ್ಟಲು ಸಾಧ್ಯ ಎಂದರು.

ಘಟಕ ವ್ಯವಸ್ಥಾಪಕ ಎಂ.ಆರ್.ಲಮಾಣಿ, ವಲಯ ಅರಣ್ಯಾಧಿಕಾರಿ ಇರ್ಶಾದ ನೆವಾರ, ಗೋಲಗೇರಿ ಗೋಲ್ಲಾಳೇಶ್ವರ ದೇವಸ್ಥಾನದ ಧರ್ಮದರ್ಶಿ ರವಿರಾಜ ದೇವರಮನಿ, ರುದ್ರಗೌಡ ಪಾಟೀಲ ಯಂಕAಚಿ, ಲೆಕ್ಕಪತ್ರ ಮೇಲ್ವಿಚಾರಕ ಸಂತೋಷ ಹತ್ತರಕಿ, ಸಿಬ್ಬಂದಿ ಮೇಲ್ವಿಚಾರಕ ಆನಂದ ಬಡಿಗೇರ ವೇದಿಕೆ ಮೇಲಿದ್ದರು.

ಈ ಸಂದರ್ಭದಲ್ಲಿ ಮಾಧ್ಯಮ ಸಲಹೆಗಾರ ಪಂಡಿತ ಯಂಪೂರೆ, ಶ್ರೀಧರ ಇಂಗಳೆ, ಮುತ್ತಪ್ಪ ತಳ್ಳೋಳ್ಳಿ, ಬಸವರಾಜ ದ್ಯಾಮಗೊಂಡ, ಶಿವಶರಣ ಹೊಸಮನಿ, ಪರಸುರಾಮ ದೊಡಮನಿ, ಬಾಬು ಬೀಳಗಿ, ರಾಜಶೇಖರ ಕೊಣ್ಣೂರ, ಜೈಬೀಮ ಪೂಜಾರಿ, ಮರಳಪ್ಪ ಕುದರಗೊಂಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಎಸ್ಸಿ,ಎಸ್ಟಿ ನೌಕರರ ಸಂಘದ ಅಧ್ಯಕ್ಷ ಸುರೇಶ ಹೊಸಮನಿ ಸ್ವಾಗತಿಸಿದರು. ಶ್ರೀಕಾಂತ ಮೆಟಗಾರ ನಿರೂಪಿಸಿದರು. ಕಾರ್ಯದರ್ಶಿ ರಾಘವೇಂದ್ರ ಜಾಬನವರ ವಂದಿಸಿದರು.

Latest articles

More like this