Homeಸುದ್ದಿಗಳುರೇ ಚ ರೇವಡಿಗಾರರನ್ನು ಮರೆತಿದ್ದು ವಿಷಾದನೀಯ

ರೇ ಚ ರೇವಡಿಗಾರರನ್ನು ಮರೆತಿದ್ದು ವಿಷಾದನೀಯ

Published on

ಸಿಂದಗಿ; ಕನ್ನಡ ಉಳಿಸಿ ಬೆಳೆಸುವಲ್ಲಿ ಸಿಂದಗಿಯ ಪಾತ್ರ ಬಹುದೊಡ್ಡದು, ಅದಕ್ಕೆ ಸಾಕ್ಷಿ ಗೋಕಾಕ ಚಳವಳಿ. ಸಿಂದಗಿಯಲ್ಲಿ ಕನ್ನಡ ಬಳಗ, ಬಸವ ಬಳಗ, ಮೊಟ್ಟಮೊದಲ ಕನ್ನಡ ಪುಸ್ತಕಗಳ ಗ್ರಂಥಾಲಯ ಹೀಗೆ ಹತ್ತು ಹಲವು ಕಾರ್ಯಗಳನ್ನು ಮಾಡಿದ ಪತ್ರಿಕಾರಂಗದ ಭೀಷ್ಮ ಗೋಕಾಕ್ ಚಳವಳಿಯ ರೂವಾರಿ ರೇಚ ರೇವಡಿಗಾರರನ್ನು ಮರೆತಿದ್ದು ವಿಷಾದನೀಯ ಎಂದು ರೆ.ಚ.ರೆವಡಿಗಾರ ಪ್ರತಿಷ್ಠಾನದ ಸಂಚಾಲಕ ರಂಘನಾಥ ಥೋರ್ಫೆ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಯಾವುದೋ ಒಂದು ವೇದಿಕೆಗೆ ರೆ.ಚ.ರೇವಡಿಗಾರರ ಹೆಸರಾಗಲಿ, ರಾಷ್ಟ್ರವೀರ ಸ್ವಾಮಿ ರಮಾನಂದತೀರ್ಥರ, ನಟ ಕೇಸರಿ ಹಂದಿಗನೂರು ಸಿದ್ದರಾಮಪ್ಪ, ಅಥವಾ ಸಂಶೋಧಕ ಡಾ. ಎಂ.ಎಂ ಕಲ್ಬುರ್ಗಿ ಅವರ ಹೆಸರು ಇಟ್ಟಿದ್ದೆ ಆದರೆ ಸಮ್ಮೇಳನಕ್ಕೆ ಇನ್ನಷ್ಟು ಮೆರುಗು ಬರುತ್ತಿತ್ತು ಎಂದಿದ್ದಾರೆ.

Latest articles

More like this