ಸಿಂದಗಿ; ಪಟ್ಟಣದ ಜ್ಯೋತಿ ನಗರದಲ್ಲಿ ರಾಜ್ಯ ಕಾಂಗ್ರೆಸ್ ನಾಯಕ ಲಕ್ಷಣ ಸವದಿಯವರಿಗೆ ಸಚಿವ ಸ್ಥಾನ ನೀಡುವಂತೆ ಗಾಣಿಗ ಸಮಾಜದ ವತಿಯಿಂದ ಪ್ರತಿಭಟನೆ ನಡೆಸಿ ಸರಕಾರಕ್ಕೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡ ಬಿ.ಎಚ್.ಬಿರಾದಾರ, ತಾಲೂಕು ಅಧ್ಯಕ್ಷ ವಿರುಪಾಕ್ಷಪ್ಪ ಗಂಗನಳ್ಳಿ, ಸಂತೋಷ ಬಿರಾದಾರ ಮಾತನಾಡಿ, ಬಿಜೆಪಿ ಪಕ್ಷದಲ್ಲಿದ್ದ ಲಕ್ಷಣ ಸವದಿಯವರನ್ನು ಕಾಂಗ್ರೆಸ್ ಪಕ್ಷ ಸಂಘಟನೆಗೆ ಕರೆತಂದು ಅವರನ್ನು ಸಚಿವ ಸ್ಥಾನದಿಂದ ವಂಚಿತರನ್ನಾಗಿ ಮಾಡಿ ಅನ್ಯಾಯ ಮಾಡಿದ್ದರು ಕೂಡಾ ಅವರು ಪಕ್ಷ ಸಂಘಟನೆ ಮಾಡುವಲ್ಲಿ ಹಿಂಜರಿಯದೇ ಅವರಿಗೆ ನೀಡಿದ ಜವಾಬ್ದಾರಿಗಳನ್ನು ನಿಬಾಯಿಸಿ ಪಕ್ಷ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಅಂಥವರನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಸಚಿವ ಸಂಪುಟದ ೨ ನೇ ಪಟ್ಟಿಯಲ್ಲಿ ಸಚಿವ ಸ್ಥಾನ ನೀಡಿ ಸಮಾಜಕ್ಕಾದ ಅನ್ಯಾಯವನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಮುಖಂಡ ಗೊಲ್ಲಾಳಪ್ಪಗೌಡ ಪಾಟೀಲ ಮಾಗಣಗೇರಿ, ಬಸವರಾಜ ಸಜ್ಜನ ಮಾತನಾಡಿ, ಕಾಂಗ್ರೆಸ್ ಪಕ್ಷ ಸಿದ್ದಾಂತಕ್ಕೆ ಕಟ್ಟುಬಿದ್ದು ಬಿಜೆಪಿ ಪಕ್ಷ ನೀಡಿದ ಎಲ್ಲ ಹುದ್ದೆಗಳನ್ನು ತೊರೆದು ಬಂದ ರಾಜ್ಯದ ಮುನ್ನಲೆ ನಾಯಕ ಲಕ್ಷಣ ಸವದಿಯವರನ್ನು ಕಾಂಗ್ರೆಸ್ ಪಕ್ಷದಲ್ಲಿ ಕಡೆಗಣಿಸುತ್ತಿರುವ ನಾಯಕರ ಧೋರಣೆಯನ್ನು ಗಾಣಿಗ ಸಮಾಜ ಉಗ್ರವಾಗಿ ಖಂಡಿಸುತ್ತದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸಚಿವ ಸಂಪುಟದ ಮೊದಲನೇ ಹಂತದ ಪಟ್ಟಿಯಲ್ಲಿ ಕೈಬಿಟ್ಟಿದ್ದು ಸರಿಪಡಿಸಲು ೨ನೇ ಪಟ್ಟಿಯಲ್ಲಿ ಸಚಿವ ಸ್ಥಾನ ನೀಡಿ ಸಮಾಜವನ್ನು ಗೌರವಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಶರಣಗೌಡ ಪಾಟೀಲ ಕನ್ನೋಳ್ಳಿ, ನಾನಾಗೌಡ ಪಾಟೀಲ, ನಿಂಗಣ್ಣ ಮುರಡಿ, ಗೋಲ್ಲಾಳಪ್ಪಗೌಡ ಬಿರಾದಾರ ಚಿಕ್ಕಸಿಂದಗಿ, ಸಂಗು ಹಿಪ್ಪರಗಿ, ರಾಜು ಸಾಹುಕಾರ ನಗನೂರ, ಮಡಿವಾಳಪ್ಪ ಮನ್ನಾಪುರ, ಮಹಾಂತಗೌಡ ನಾರಾಯಣಪುರ, ಮಲಕಪ್ಪ ಮಳ್ಳಿ, ಶಂಕ್ರೆಪ್ಪ ಹೆಬ್ಬಾಳ, ಶಿವಪುತ್ರ ಬಿರಾದಾರ ಚಿಕ್ಕಸಿಂದಗಿ, ದತ್ತು ಹೆಬ್ಬಾಳ, ಸಿದ್ದು ಕುರನಳ್ಳಿ, ಸಂಗಮೇಶ ಪಾರಗೊಂಡ, ಸಿದ್ದನಗೌಡ ಬಿರಾದಾರ ಯಂಕಂಚಿ, ಆನಂದ ಕಂಠಿಗೊಂಡ, ದತ್ತುಗೌಡ ಬಿರಾದಾರ ಮನ್ನಾಪುರ, ಶಂಕರಗೌಡ ಹಚಡದ ಸೇರಿದಂತೆ ಅನೇಕರಿದ್ದರು.