Homeಸುದ್ದಿಗಳುಸಿಂದಗಿ ಲಯನ್ಸ್ ಕ್ಲಬ್ ಗೆ ಪದಾಧಿಕಾರಿಗಳ ಆಯ್ಕೆ

ಸಿಂದಗಿ ಲಯನ್ಸ್ ಕ್ಲಬ್ ಗೆ ಪದಾಧಿಕಾರಿಗಳ ಆಯ್ಕೆ

Published on

ಸಿಂದಗಿ: ಸಮಾಜ ಸೇವೆ ಮತ್ತು ಜನಪರ ಕಾರ್ಯಗಳ ಮೂಲಕ ಹೆಸರುವಾಸಿಯಾಗಿರುವ ಲಾಯನ್ಸ್ ಕ್ಲಬ್ ಇಂಟರ್‌ನ್ಯಾಶನಲ್ ಸಿಂದಗಿ ತಾಲೂಕು ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಸಿಂದಗಿ ತಾಲೂಕಾ ಘಟಕದ ನೂತನ ಅಧ್ಯಕ್ಷರಾಗಿ ಸಿ.ಎಂ.ಮನಗೂಳಿ ಕಾಲೇಜಿನ ದೈ.ಶಿ.ಪ್ರಾಧ್ಯಾಪಕ ಡಾ. ಅಂಬರೀಶ್ ಬಿರಾದಾರ, ಉಪಾಧ್ಯಕ್ಷರಾಗಿ ಗಣ್ಯವರ್ತಕರಾದ ಸುರೇಶ್‌ಬಾಬು ಜೋಗೂರ, ಕಾರ್ಯದರ್ಶಿಯಾಗಿ ನಿವೃತ್ತ ಪ್ರಾಚಾರ್ಯ ಐ.ಬಿ. ಬಿರಾದಾರ್ ಹಾಗೂ ಖಜಾಂಚಿಯಾಗಿ ನಿವೃತ್ತ ಪ್ರಾಧ್ಯಾಪಕ ಡಾ. ಆರ್.ಎಂ. ಪಾಟೀಲ್ ಅವರನ್ನು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಸದಸ್ಯರು ಅಭಿನಂದನೆ ಸಲ್ಲಿಸಿ, ಸಮಾಜಮುಖಿ ಕಾರ್ಯಕ್ರಮಗಳು, ಆರೋಗ್ಯ ಶಿಬಿರಗಳು, ಶಿಕ್ಷಣ ಹಾಗೂ ಸೇವಾ ಚಟುವಟಿಕೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಡೆಸುವ ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಲಾಯನ್ಸ್ ಹಿರಿಯ ಸದಸ್ಯರಾದ ಬಿ.ಪಿ.ಕರ್ಜಗಿ, ಕೆ.ಎಚ್.ಸೋಮಾಪೂರ, ರಾಚಪ್ಪ ವಾರದ, ಎಸ್.ಎಸ್.ಪಾಟೀಲ, ಎಸ್.ಬಿ.ಚಾಗಶೆಟ್ಟಿ, ಶಾಸಕ ಅಶೋಕ ಮನಗೂಳಿ, ಅಶೋಕ ವಾರದ, ಶಿವಶರಣ ಬೂದಿಹಾಳ, ಬಿ.ಎಂ.ಸಿಂಗನಳ್ಳಿ, ಎಸ್.ಎಚ್.ಜಾಧವ, ವ್ಹಿ.ಡಿ.ಪಾಟೀಲ, ಡಾ. ಸಿದ್ದರಾಮ ಚಿಂಚೊಳ್ಳಿ, ಮುತ್ತು ಮುಂಡೇವಾಡಗಿ, ಶಾಂತೇಶ ದುರ್ಗಿ, ಡಾ. ಎಸ್.ಎಲ್.ಪಾಟೀಲ ಹಾಗೂ ಪದಾಧಿಕಾರಿಗಳು ನೂತನ ತಂಡಕ್ಕೆ ಶುಭ ಹಾರೈಸಿದರು.

Latest articles

More like this