ಬಾಗಲಕೋಟೆ: ಶಿಬಿರಾಥಿ೯ಗಳು ಸ್ವಯಂ ಶಿಸ್ತು ರೂಢಿಸಿಕೊಂಡು ಆರೋಗ್ಯಯುತ ಜೀವನ ನಡೆಸಬೇಕು ಎಂದು ನಿಡಗುಂದಿಯ ಎಮ್. ವಿ. ನಾಗಠಾಣ ಪದವಿ ಮಹಾವಿದ್ಯಾಲಯದ ಪ್ರಾಚಾಯ೯ ಶಿವನಗೌಡ ಬಿರಾದಾರ ಹೇಳಿದರು.
ತಾಲೂಕಿನ ಬೇವೂರಿನ ಪರಪ್ಪ ಸಂಗಪ್ಪ ಸಜ್ಜನ ಕಲಾಮಹಾವಿದ್ಯಾಲಯದ ವತಿಯಿಂದ ಬಿಲ್ ಕೆರೂರ, ಗ್ರಾಮದಲ್ಲಿ ಏಳುದಿನಗಳವರೆಗೆ ಹಮ್ಮಿಕೊಂಡ ಎನ್. ಎಸ್. ಎಸ್. ಶಿಬಿರದ ನಾಲ್ಕನೇ ದಿನದ ವಿಶೇಷ ಉಪನ್ಯಾಸ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು ಆತ್ಮಹತ್ಯೆ ತಡೆಗಟ್ಟಲು ಅನುಸರಿಸಬೇಕಾದ ಜಾಗೃತಿ ಕ್ರಮಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಈ ಶಿಬಿರದವತಿಯಿಂದ ಹಮ್ಮಿಕೊಂಡ ಆಯುಷ್ ಆರೋಗ್ಯ ತಪಾಸಣೆ ಹಾಗೂ ಉಚಿತ ಔಷಧಿ ವಿತರಣೆ ಕಾಯ೯ಕ್ರಮ ಕುರಿತು ಮಾತನಾಡಿದ ವೈದ್ಯೆ ಸುರೇಖಾ ಚೂರಿ ಆಯುಷ್ ಆರೋಗ್ಯದ ತಪಾಸಣೆಯ ಸಾಫಲ್ಯತೆಯನ್ನು ಪಡೆದುಕೊಂಡ ಜನತೆ ಆರೋಗ್ಯಯುತ ಜೀವನ ನಡೆಸುತ್ತಿದ್ದಾರೆ. ಇಂದಿನ ಯುವಸಮೂದಾಯ ಆರೋಗ್ಯದ ಬಗ್ಗೆ ಅಧಿಕ ಕಾಳಜಿ ವಹಿಸಬೇಕು ಎಂದು ಅವರು ಹೇಳಿದರು.
ಈ ಕಾಯ೯ಕ್ರಮದ ಅಧ್ಯಕ್ಷತೆ ವಹಿಸಿ ಮಾತಾನಾಡಿದ ಬಿಲ್ ಕೆರೂರಿನ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಜಗದೀಶ್ ಕಟಗೇರಿ ಎನ್. ಎಸ್. ಎಸ್. ಚಟುವಟಿಕೆಗಳು ಗ್ರಾಮದ ಉದ್ದಾರಕ್ಕೆ ಪೂರಕ ಎನಿಸಿವೆ. ಪರಿಸರ ಪ್ರಜ್ಞೆ, ವೈಚಾರಿಕ ಪ್ರಜ್ಞೆಯನ್ನು ಶಿಬಿರದ ವಿದ್ಯಾಥಿ೯ಗಳು ರೂಢಿಸಿಕೊಳ್ಳಬೇಕೆಂದು ಅವರು ಹೇಳಿದರು.
ಗ್ಯಾನಮ್ಮ ಪೂಜಾರಿ ,ಜೀವಿತಾ ಸಂಗಡಿಗರು ಪ್ರಾಥಿ೯ಸಿದರು. ಗ್ಯಾನಮ್ಮ ಪೂಜಾರಿ ಅತಿಥಿ ಪರಿಚಯ ನಡೆಸಿಕೊಟ್ಟರು. ಉಪನ್ಯಾಸಕ ಡಾ.ಸಂಗಮೇಶ ಹಂಚಿನಾಳ ಸ್ವಾಗತಿಸಿದರು. ವಿದ್ಯಾಥಿ೯ನಿ ಅಶ್ವಿನಿ ಮಾದರ ನಿರೂಪಿಸಿದರು. ಎನ್. ಎಸ್. ಎಸ್. ಯೋಜನಾಧಿಕಾರಿ ಜಿ. ಎಸ್ ಗೌಡರ ವಂದಿಸಿದರು. ವೈದ್ಯರಾದ ಡಾ.ಎಸ್.ಪಿ.ನಿಡಗುಂದಿ, ಡಾ.ಷಣ್ಮುಖಪ್ಪ ಕಾಪ್ಸೆ,ಡಾ.ಶಗುಪಾಬೇಗಂ ಅತ್ತಾರ,ಸಿಬ್ಬಂದಿಗಳಾದ ಸಿದ್ದಲಿಂಗ ಗೌಡರ,ರವಿ ಓಗಿ ಉಪಸ್ಥಿತರಿದ್ದರು. ಪಿ.ಎಸ್.ಸಜ್ಜನ ಕಾಲೇಜಿನ ಪ್ರಾಚಾಯ೯ಡಾ.ಜಗದೀಶ ಗು. ಭೈರಮಟ್ಟಿ, ಹಿರಿಯ ಉಪನ್ಯಾಸಕರಾದ ಎಸ್. ಎಸ್. ಆದಾಪೂರ, ಉಪನ್ಯಾಸಕಡಿ. ವಾಯ್. ಬುಡ್ಡಿಯವರ, ಡಾ.ಎ.ಎಮ್. ಗೊರಚಿಕ್ಕನವರ ಉಪಸ್ಥಿತರಿದ್ದರು. ಬಿಲ್ ಕೆರೂರು ಗ್ರಾಮದ ೨೦೦ ಕ್ಕೂ ಅಧಿಕ ಜನತೆ ಸೇರಿದಂತೆ ಶಿಬಿರಾಥಿ೯ಗಳು ಆಯುಷ್ ಆರೋಗ್ಯ ತಪಾಸಣೆ ಹಾಗೂ ಉಚಿತ ಔಷಧ ವಿತರಣೆ ಸಮಾರಂಭದಲ್ಲಿ ಚಿಕಿತ್ಸೆ ಪಡೆದುಕೊಂಡರು. ಶಿಬಿರಾಥಿ೯ಗಳು ಮನೆ ಮನೆಗೆ ತೆರಳಿ ಔಷಧಿ ಉಪಚಾರದ ಬಗ್ಗೆ ಜಾಗೃತಿ ಮೂಡಿಸಿದರು.